ಈ 66 ಜೋಡಿಗೆ ದೇವರು ವರ ಕೊಟ್ರೂ ಮದುವೆ ಆಗ್ತಿಲ್ಲ, ಮೂರನೇ ಸಲ ಮುಂದೂಡಿದ ವಿವಾಹ ಮಹೋತ್ಸವ!

ಕಷ್ಟನೋ ಸುಖನೋ ಒಟ್ನಲ್ಲಿ ಒಂದು ಮದುವೆ ಆಗ್ಲಿ ಅಂತ ಪಾಪ ಇವರೆಲ್ಲಾ ಆಸೆಪಟ್ಟಿದ್ದರು. ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ದೇವರ ಸಮ್ಮುಖದಲ್ಲೇ ಸಪ್ತಪದಿ ತುಳಿದು ಹೊಸಾ ಬಾಳಿಗೆ ಅಡಿಯಿಡಲು ಸಿದ್ಧರಾಗಿದ್ರು. ಯಾಕೋ ವಿಧಿ ಇವರೊಂದಿಗೆ ಆಟವಾಡ್ತಿದೆ. ಒಂದಲ್ಲಾ...ಎರಡಲ್ಲಾ.. 66 ಜೋಡಿಗಳು ತಮ್ಮ ಮದುವೆ ಮೂರನೇ ಬಾರಿ ಮುಂದೂಡಿದ್ದರಿಂದ ಕಂಗಾಲಾಗಿದ್ದಾರೆ.

ಘಾಟಿ ಸುಬ್ರಮಣ್ಯ ದೇವಾಲಯ- ಮದುವೆ ನಡೆಯಬೇಕಿದ್ದ ಸ್ಥಳ

ಘಾಟಿ ಸುಬ್ರಮಣ್ಯ ದೇವಾಲಯ- ಮದುವೆ ನಡೆಯಬೇಕಿದ್ದ ಸ್ಥಳ

 • Share this:
  ಚಿಕ್ಕಬಳ್ಳಾಪುರ:  ಕೊರೊನಾ ಮೂರನೇ ಅಲೆಯ ಭೀತಿಯಿಂದ ಕೆಲವೊಂದು ಕಾರ್ಯಕ್ರಮಗಳಿಗೆ ಈಗಾಗಲೇ ಬ್ರೇಕ್ ಹಾಕಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಎ ವರ್ಗದ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ  ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ  ಬಡವರ ವರ್ಗದ ಜನರಿಗೆ ಸಹಾಯಕವಾಗುವಂತೆ ಸರಳ ಮದುವೆಗಾಗಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸರಕಾರ ರಾಜ್ಯದಾದ್ಯಂತ ನಡೆಸಿಕೊಂಡು ಬರುತ್ತಿದೆ. ಆದರೆ ಕೊರೊನಾ ಮೂರನೇ ಅಲೆಯ ಆಂತಕದಿಂದ  ಈ ಬಾರಿಯ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವವನ್ನು ಮುಂದೂಡಲಾಗಿದೆ.ಕಾರ್ಯಕ್ರಮವನ್ನು ಆಯೋಜಿಸಿದರೆ ಭಕ್ತರು, ವಧುವರರ ಸಂಬಂಧಿಕರು ಸೇರಿ ಅನೇಕರು ಕೊರೊನಾ ನಿಯಮ ಮರೆತು ವರ್ತಿಸುವ ಆಂತಕವಿರುವುದರಿಂದ ಸಪ್ತಪದಿ ಕಾರ್ಯಕ್ರಮ ಮುಂದೂಡಲು ಜಿಲ್ಲಾಡಳಿತ ಆದೇಶಿಸಿದೆ.

  ಮೂರನೇ ಬಾರಿ ಮುಂದೂಡಿಕೆ: ಸಪ್ತಪದಿ ಕಾರ್ಯಕ್ರಮ ಜಾರಿಗೊಳಿಸಿ ೨  ವರ್ಷ ಕಳೆಯುತ್ತಿದೆ. ೨೦೨೦ರಲ್ಲಿ ಸಪ್ತಪದಿ ಯೋಜನೆ ಸರಕಾರ ‌ಜಾರಿಗೆ ತಂದ ಬೆನ್ನಲ್ಲೇ ಆರಂಭವಾಗಬೇಕಿದ್ದ ಸಪ್ತಪದಿ ಸರಳ ವಿವಾಹವನ್ನು ಕೊರೊನಾ ದಿಂದಾಗಿ ಮುಂದೂಡಲಾಯಿತು. ನಂತರ ಕಳೆದ ಬಾರಿ ಸ್ವಲ್ಪ ಕೊರೊನಾ ಇಳಿಕೆಯಾಗಿದ್ದರಿಂದ ಸಪ್ತಪದಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ೪೫ಕ್ಕೂ ಹೆಚ್ಚು ಜೋಡಿಗಳು ಸಪ್ತಪದಿಯಲ್ಲಿ ಭಾಗವಹಿಸಿದ್ದರು.ನಂತರ ಮತ್ತೆ ಆರಂಭಿಸಿದ ಸಪ್ತಪದಿಗೆ ಕೊರೊನಾ ಎರಡನೇ ಅಲೆಯು ತಡೆ ಮಾಡಿತ್ತು.ಇದೀಗ ಮೂರನೇ ಬಾರಿಗೆ ಸಪ್ತಪದಿ ಕಾರ್ಯಕ್ರಮವನ್ನು ‌ಆ.೧೩ ಹಾಗೂ ಸೆ.೧೩ ರಂದು ನಡೆಸಲು ನಿರ್ಧರಿಸಲು ಆಗಿತ್ತು.ಆದರೆ ಕೊರೊನಾ  ೩ನೇ  ಅಲೆಯ ಬೆನ್ನಲ್ಲೇ ಅದು ಮುಂದೂಡಲ್ಪಟ್ಟಿದೆ.

  ಇದನ್ನೂ ಓದಿ: Relationship Tips: ಈ ಥರಾ ಎಲ್ಲಾ ಆದ್ರೆ ನಿಮ್ಮ ಸಂಗಾತಿ ಜೊತೆ ಏನೋ ಸಮಸ್ಯೆ ಇದೆ ಎಂದರ್ಥ, ನಿಮಗೂ ಹೀಗಾಗ್ತಿದೆಯಾ?

  ಅರ್ಜಿಗಳು‌ ಸಲ್ಲಿಕೆ: ಆ.೧೩ ಹಾಗೂ ಸೆ.೧೩ ಕ್ಕೆ ನಡೆಯಬೇಕಿದ್ದ ಸಪ್ತಪದಿ ಕಾರ್ಯಕ್ರಮಕ್ಕೆ ‌ಅರ್ಜಿ ಆಹ್ವಾನಿಸಲಾಗುತ್ತಿತ್ತು.ಜಿಲ್ಲೆಯಾದ್ಯಂತ ಸಪ್ತಪದಿಗೆ ಒಟ್ಟು ೬೬ ಅರ್ಜಿಗಳು ನೊಂದಾಯಿಸಲ್ಪಟಿದೆ .ಈ ಪೈಕಿ ನಿಗದಿತ ದಿನದೊಳಗೆ ೨೯ ಅರ್ಜಿಗಳು ಸ್ವೀಕೃತವಾಗಿದೆ.ಅವುಗಳ ಪರಿಶೀಲನೆಯ ನಂತರ ೨ ಅರ್ಜಿ‌ ತಿರಸ್ಕೃತ ಗೊಂಡಿದ್ದು,೨೭ ಅರ್ಜಿಗಳು ವಿವಾಹ  ಅರ್ಹತೆ ಪಡೆದುಕೊಂಡಿದೆ. ಆದರೆ ಕೊರೊನಾ ನಿಧಾನಗತಿಯ ಏರಿಕೆಯಿಂದ ಜಿಲ್ಲೆಯಲ್ಲಿ ಸಪ್ತಪದಿಯು ಮುಂದೂಡಿಕೆಯಾಗಿದೆ‌.

  ದೇವಾಲಯಗಳ ಜಾತ್ರೆಗಳಿಗೂ ಬ್ರೇಕ್,ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಕೊರೊನಾ ನಿಯಮಗಳನ್ನು ಕಡ್ಡಾಯ ಕೊರೊನಾ ನಿಯಮಗಳ ಪಾಲನೆಗೆ ಸೂಚಿಸಲಾಗಿದೆ.ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.ಯಾವುದೇ ಸೇವಾ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ. ಕೊರೊನಾ ೩ನೇ ಅಲೆ ಭೀತಿ ಹಿನ್ನೆಲೆ ಜಾತ್ರೆ,ಧಾರ್ಮಿಕ ಉತ್ಸವ, ಮೆರವಣಿಗೆ,ಧಾರ್ಮಿಕ ಸಭೆಗಳಿಗೆ‌ ನಿಷೇಧವಿರಲಿದೆ. ಒಟ್ಟಾರೆ ಮೂರನೇ ಅಲೆಯ ಭೀತಿಯಿಂದ ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ.

  ಇದನ್ನೂ ಓದಿ: Breastfeeding: ಹಾಲುಣಿಸುವ ತಾಯಿ ಏನನ್ನು ತಿನ್ನಬೇಕು? ಏನು ತಿನ್ನಬಾರದು? ವೈದ್ಯರು ಹೇಳಿದ ಕಿವಿಮಾತು...

  ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಆಗಸ್ಟ್ ೧೩ ಹಾಗೂ ಸೆಪ್ಟೆಂಬರ್ ೧೩ ರಂದು ನಿಗದಿಯಾಗಿದ್ದ ಸಪ್ತಪದಿ ಕಾರ್ಯಕ್ರಮವನ್ನು ಕೊರೊನಾ ೩ನೇಯ ಭೀತಿಯಿಂದ ಮುಂದೂಡಲಾಗಿದೆ ಎಂದು ಘಾಟಿ ದೇವಾಲಯದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

  (ಮನುಕುಮಾರ ಹೆಚ್ ಕೆ  ಚಿಕ್ಕಬಳ್ಳಾಪುರ)
  Published by:Soumya KN
  First published: