ಹಾಸನದಲ್ಲಿ ಓರ್ವ ಪಿಎಸ್​ಐ ಸೇರಿ 136 ಕ್ಕೇರಿದ ಸೋಂಕಿತರ ಸಂಖ್ಯೆ; 6 ಏರಿಯಾ ಸೀಲ್ ಡೌನ್

ಹಾಸನ 45 ದಿನಗಳ ಕಾಲ ಗ್ರೀನ್ ಝೋನ್ ಕಾಪಾಡಿಕೊಂಡಿದ್ದ ಜಿಲ್ಲೆ. ಆದರೆ, ಮುಂಬೈ ನಂಟಿನಿಂದ ಆರಂಭವಾದ ಕೊರೋನಾ ಸೋಂಕು ಇದೀಗ ಪೊಲೀಸರಿಗೂ ಹರಡಿದ್ದು ಹಾಸನ ಜಿಲ್ಲಾಡಳಿತ ನಿದ್ದೆಕೆಡಿಸಿದೆ

news18-kannada
Updated:May 28, 2020, 9:18 AM IST
ಹಾಸನದಲ್ಲಿ ಓರ್ವ ಪಿಎಸ್​ಐ ಸೇರಿ 136 ಕ್ಕೇರಿದ ಸೋಂಕಿತರ ಸಂಖ್ಯೆ; 6 ಏರಿಯಾ ಸೀಲ್ ಡೌನ್
ಸಾಂದರ್ಭಿಕ ಚಿತ್ರ
  • Share this:
ಹಾಸನ(ಮೇ.28): ಹಾಸನದಲ್ಲಿ ಒಂದು ಕಡೆ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ ಮತ್ತೊಂದು ಕಡೆ 14 ದಿನ ಚಿಕಿತ್ಸೆ ನೀಡಿದರೂ ಕೊರೋನಾ ಮಾತ್ರ ಗುಣಮುಖವಾಗುವ ಲಕ್ಷಣ ಕಾಣುತ್ತಿಲ್ಲ. ಕೊರೋನಾ ಗುಣಮುಖ ಆಗುವುದು ತಡವಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದ್ದು, ಚಿಕಿತ್ಸಾ ವಿಧಾನದಲ್ಲಿ ಒಂದಷ್ಟು ಬದಲಾವಣೆ ಮಾಡುವ ಚರ್ಚೆ ಕೂಡ ಶುರುವಾಗಿದೆ.

ಹಾಸನ 45 ದಿನಗಳ ಕಾಲ ಗ್ರೀನ್ ಝೋನ್ ಕಾಪಾಡಿಕೊಂಡಿದ್ದ ಜಿಲ್ಲೆ. ಆದರೆ, ಮುಂಬೈ ನಂಟಿನಿಂದ ಆರಂಭವಾದ ಕೊರೋನಾ ಸೋಂಕು ಇದೀಗ ಪೊಲೀಸರಿಗೂ ಹರಡಿದ್ದು ಹಾಸನ ಜಿಲ್ಲಾಡಳಿತ ನಿದ್ದೆಕೆಡಿಸಿದೆ. ಕೆಎಸ್​ಆರ್​ಪಿ ಡ್ರೈವರ್ , ಆತನ ಹೆಂಡತಿ ಮತ್ತು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದ್ದು. ಈತನ ಜೊತೆ ಸಂಪರ್ಕ ಇದ್ದವರು ಸೇರಿ ಒಟ್ಟು 3 ಕೆಎಸ್​ಆರ್​ಪಿ ಪೊಲೀಸ್ ರಿಗೆ ಕೊರೋನಾ ಪಾಸಿಟಿವ್ ಇರುವ ಬಗ್ಗೆ ಹಾಸನ ಡಿಸಿ ಆರ್ ಗಿರೀಶ್ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ನಿಪ್ಪಾಣಿಯಲ್ಲಿ ಸೇವೆ ಸಲ್ಲಿಸಿ ವಾಪಾಸ್ಸಾಗಿದ್ದ ಹೊಳೆನರಸೀಪುರ ಪಿಎಸ್​ಐ ಹಾಗೂ ಆತನ ಜೊತೆಯಿದ್ದ ಮೂವರಿಗೆ ಕೊರೋನಾ ಪಾಸಿಟಿವ್ ಸೋಂಕು ಆವರಿಸಿದೆ. ಹೀಗೆ ಒಟ್ಟು ಹಾಸನದಲ್ಲಿ 7 ಮಂದಿ ಪೊಲೀಸರಿಗೆ  ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಿನ್ನೆ ಹಾಸದಲ್ಲಿ 24 ಪ್ರಕರಣ ದಾಖಲಾಗಿವೆ. ಈ ಮೂಲಕ ಹಾಸನದಲ್ಲಿ ಸೋಂಕಿತರ ಸಂಖ್ಯೆ 136 ಕ್ಕೆ ಏರಿಕೆ ಆಗಿದೆ. ಜಿಲ್ಲೆಯಲ್ಲಿ ಒಟ್ಟು 6 ಏರಿಯಾಗಳನ್ನ ಸೀಲ್‌ಡೌನ್ ಮಾಡಲಾಗಿದೆ.

ಹಾಸನದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವುದು ಒಂದು ಕಡೆ ಆದರೆ ಮತ್ತೊಂದೆಡೆ ಕೊರೋನಾ ಸೋಂಕಿತರು ಗುಣಮುಖವಾಗಲು ಹೆಚ್ಚು ಸಮಯ ಹಿಡಿಯುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗುತ್ತಿದೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದಾಗ 14 ನೇ ದಿನವಾಗುಷ್ಟರಲ್ಲಿ ಸಾಮಾನ್ಯವಾಗಿ ಆವರು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖವಾಗುವ ಹಂತ ತಲುಪುತ್ತಿದ್ದರು. ಆದರೆ, ಹಾಸನಲ್ಲಿ ಈಗಾಗಲೇ ಕೊರೋನಾಗೆ ಚಿಕಿತ್ಸೆ ಶುರು ಮಾಡಿ 14 ದಿನ ಕಳೆದಿದರು ಕೆಲವರು ಇನ್ನೂ ಪಾಸೀಟಿವ್  ಹಾಗೆ ಉಳಿದಿದ್ದಾರೆ. ಇದು ಸ್ವಲ್ಪ ಆತಂಕಕ್ಕೆ ಕಾರಣವಾಗಿದ್ದು ಚಿಕಿತ್ಸಾ ವಿಧಾನದಲ್ಲಿ ಒಂದಷ್ಟು ಬದಲಾವಣೆಗೆ ತಜ್ಞ ವೈದ್ಯರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

ಇದನ್ನೂ ಓದಿ :   ಇಂದಿನಿಂದ ಬಡ ಕುಟುಂಬಗಳಿಗೆ ತಲಾ 10 ಸಾವಿರ ಕೊಡುವ ಕಾಂಗ್ರೆಸ್ ಅಭಿಯಾನ

ಸದ್ಯ ಕೊರೋನಾ ಅಟ್ಟಹಾಸ ಹಾಸನ ಜಿಲ್ಲೆಯೂ ಸೇರಿದಂತೆ ರಾಜ್ಯವನ್ನೇ ಹಿಂಡಿ ಹಿಪ್ಪೆ ಮಾಡುತ್ತಿರೋದಂತೂ ಸುಳ್ಳಲ್ಲ. ಸದ್ಯ ಜನ ಈಗಾಗಲೇ ಸರ್ಕಾರ ಹೇಳಿರುವಂತೆ ಕೊರೋನಾ ಜೊತೆಯಲ್ಲೆ ಬದುಕುವ ಅನಿವಾರ್ಯ ತೆ ಎದುರಾಗಿದೆ.

 
First published: May 28, 2020, 7:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading