ವಿಜಯಪುರದಲ್ಲಿ 3 ಜನ ಕೊರೋನಾ ವಾರಿಯರ್ಸ್ ಸೇರಿ ಒಂದೇ ದಿನ 53 ಜನರಿಗೆ ತಗುಲಿದ ಸೋಂಕು ; ಆತಂಕದಲ್ಲಿ ಜಿಲ್ಲೆಯ ಜನರು

ಈ ಮೂರೂ ಜನರಲ್ಲಿ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ. ಆದರೆ, ಕೊರೋನಾ ಪಾಸಿಟಿವ್ ದೃಢವಾಗಿವೆ.

news18-kannada
Updated:June 6, 2020, 8:08 AM IST
ವಿಜಯಪುರದಲ್ಲಿ 3 ಜನ ಕೊರೋನಾ ವಾರಿಯರ್ಸ್ ಸೇರಿ ಒಂದೇ ದಿನ 53 ಜನರಿಗೆ ತಗುಲಿದ ಸೋಂಕು ; ಆತಂಕದಲ್ಲಿ ಜಿಲ್ಲೆಯ ಜನರು
ವಿಜಯಪುರ ಜಿಲ್ಲಾಸ್ಪತ್ರೆ
  • Share this:
ವಿಜಯಪುರ(ಜೂ. 06): ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ಇದೇ ಮೊದಲ ಬಾರಿಗೆ 53 ಜನರಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಬಸವ ನಾಡಿನ ಜನ ಬೆಚ್ಚಿ ಬೀಳುವಂತಾಗಿದೆ.  ಅಷ್ಟೇ ಅಲ್ಲ, ಗುಮ್ಮಟ ನಗರಿಯಲ್ಲಿ ಮೂರು ಜನ ಕೊರೋನಾ ವಾರಿಯರ್ಸ್ ಗೆ ಕೊರೊನಾ ಸೋಂಕು ದೃಢವಾಗಿದ್ದು, ಜನರಲ್ಲಿ ಆಘಾತ ತಂದಿದೆ.

ಇಬ್ಬರು ಆಶಾ ಕಾರ್ಯಕರ್ತೆಯರು ಮತ್ತು ಓರ್ವ ಅಂಗನವಾಡಿ ಕಾರ್ಯಕರ್ತೆ ಒಬ್ಬರು ಅಂಗನವಾಡಿ ಸುಪರವೈಸರ್ ಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರು ಅಂಗನವಾಡಿ ಕಾರ್ಯಕರ್ತೆಯರು ಕಂಟೈನ್​ಮೆಂಟ್ ಏರಿಯಾದಲ್ಲಿ ಕೆಲಸ ಮಾಡಿದ್ದರು. ಅಲ್ಲಿನ ಜನರ ಆರೋಗ್ಯ ತಪಾಸಣೆ ನಡೆಸಿದ್ದರು. ಅವರಿಬ್ಬರಿಗೂ ಕೊರೋನಾ ಸೋಂಕು ತಗುಲಿದೆ. ಅಲ್ಲದೇ, ಇದೇ ಕಂಟೈನ್​​ಮೆಂಟ್ ಏರಿಯಾದಲ್ಲಿ ವಾಸಿಸುತ್ತಿದ್ದ ಅಂಗನವಾಡಿ ಸೂಪರವೈಸರ್​ಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.

ಈ ಮಹಿಳೆಯ ಸ್ವಯಂ ಪ್ರೇರಿತರಾಗಿ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ಮಹಿಳೆಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಈ ಮೂರೂ ಜನರಲ್ಲಿ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ. ಆದರೆ, ಕೊರೋನಾ ಪಾಸಿಟಿವ್ ದೃಢವಾಗಿವೆ. ಆಶಾ ಕಾರ್ಯಕರ್ತೆಯರು ಕಂಟೈನ್​​ಮೆಂಟ್ ಏರಿಯಾದಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಿದ್ದರು. ವಿಜಯಪುರ ಜಿಲ್ಲೆಯಲ್ಲಿ ನಿನ್ನೆ 53 ಪ್ರಕರಣಗಳು ಪಾಸಿಟಿವ್ ಬಂದಿವೆ. ಎಲ್ಲರನ್ನೂ ವಿಜಯಪುರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇದರಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಈಗ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 187ಕ್ಕೆ ತಲುಪಿದೆ. ಇನ್ನೂ 2,200 ವರದಿಗಳು ಬಾಕಿ ಇವೆ.

ಇದನ್ನೂ ಓದಿ : ಪ್ಲಾಸ್ಟಿಕ್ ಪಾಟ್​ ನಲ್ಲಿ ಅರಳಿದ ಹೂವು; ಪರಿಸರಕ್ಕಾಗಿ ಸರ್ಕಾರಿ ಶಿಕ್ಷಕನ ಶ್ಲಾಘನೀಯ ಕೆಲಸ

ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 7,919 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 19,895 ಜನ 1 ರಿಂದ 28 ದಿನಗಳ ಕ್ವಾರಂಟೈನ್ ನಲ್ಲಿದ್ದಾರೆ.  ಈವರೆಗೆ 65 ಜನ ಕೊರೋನಾದಿಂದ ಗುಣಮುಖರಾಗಿ ವಿಜಯಪುರ ಜಿಲ್ಲಾಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 27,884 ಜನರ ಮೇಲೆ ನಿಗಾ ಇಡಲಾಗಿದೆ. ಈವರೆಗೆ ಒಟ್ಟು 25,442 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅವರಲ್ಲಿ 23,035 ವರಿಗಳು ನೆಗೆಟಿವ್ ಬಂದಿವೆ. 187 ಜನರ ಕೊರೋನಾ ವರದಿ ಪಾಸಿಟಿವ್ ಬಂದಿದೆ. ಇನ್ನೂ 2,200 ಜನರ ವರದಿಗಳು ಬಾಗಿಇವೆ. ಸಧ್ಯಕ್ಕೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ತಿಳಿಸಿದ್ದಾರೆ.
First published: June 6, 2020, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading