HOME » NEWS » District » 5000 RS FINE IS FIXED FOR THOSE ENTER MANMANE VILLAGE IN LOCKDOWN TIME IN SIDDAPUR TALUK OF UTTARA KANNADA KARWAR HK

ಕೊರೋನಾ ಸೋಂಕು ತಡೆಗೆ ಜಾರಿಗೆ ಬಂತು ದಂಡ ಪ್ರಯೋಗ : ಈ ಊರಿಗೆ ಯಾರೆ ಬಂದರೂ ಐದು ಸಾವಿರ ರೂಪಾಯಿ ದಂಡ

ಕೊರೋನಾ ಸೋಂಕು ತಡೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದ ಜನರು ಪರ ಊರಿನಿಂದ ಬರುವ ಜನರಿಗೆ ನಿಷೇಧ ಹೇರಿದ್ದಾರೆ

news18-kannada
Updated:July 21, 2020, 11:24 AM IST
ಕೊರೋನಾ ಸೋಂಕು ತಡೆಗೆ ಜಾರಿಗೆ ಬಂತು ದಂಡ ಪ್ರಯೋಗ : ಈ ಊರಿಗೆ ಯಾರೆ ಬಂದರೂ ಐದು ಸಾವಿರ ರೂಪಾಯಿ ದಂಡ
ಮನಮನೆ
  • Share this:
ಕಾರವಾರ(ಜುಲೈ.21): ಕೊರೋನಾ ಸೋಂಕು ನಿಯಂತ್ರಣಕ್ಕೆ ಸರಕಾರ ಹತ್ತಾರು ಕಾರ್ಯಕ್ರಮ ಮಾಡಿಕೊಂಡು ಬಂದಿದೆ, ಇನ್ನೂ ಕೂಡಾ ವಿವಿಧ ನಿಯಮಗಳನ್ನ ಜಾರಿಗೆ ತರಲು ತಜ್ಞರ ಸಲಹೆ ಪಡೆದುಕೊಳ್ಳುತ್ತಲೆ ಇದೆ. ಇದು ಒಂದೆಡೆ ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಡೆಗೆ ಗ್ರಾಮಸ್ಥರೆ ಒಂದು ನಿಯಮ ಜಾರಿಗೆ ತಂದಿದ್ದಾರೆ. ಪರ ಊರಿನಿಂದ ಕದ್ದು ಮುಚ್ಚಿ ಈ ಗ್ರಾಮಕ್ಕೆ ಬಂದ್ರೆ ಐದು ಸಾವಿರ ದಂಡ ಖಚಿತ ಅಂತೆ ಹೀಗೆ ಕಠಿಣ ಕ್ರಮವನ್ನ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದ ಜನರು ಕೈಗೊಂಡಿದ್ದಾರೆ.

ಏನಿದು ನಿಯಮ, ನಿಯಮ‌ ಮೀರಿದ್ರೆ ಏನಾಗುತ್ತೆ?

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಹೇಳಿಕೇಳಿ ಶಿವಮೊಗ್ಗ ಜಿಲ್ಲೆಯ ಗಡಿ ತಾಲೂಕು, ಇಲ್ಲಿನ ಜನ ಮಾರುಕಟ್ಟೆ ಮಾಡಲು ಮತ್ತು ವ್ಯಾಪಾರ ವಹಿವಾಟಿಗೆ ಹೆಚ್ಚಾಗಿ ಸಾಗರ, ಶಿವಮೊಗ್ಗವನ್ನೆ ನಂಬಿ‌ಕೊಂಡಿದ್ದಾರೆ. ಕಳೆದ ಒಂದು ವಾರದಲ್ಲಿ ಇಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕೂಡಾ ಏರಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಕೊರೋನಾ ಸೋಂಕು ತಡೆಗೆ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದ ಜನರು ಪರ ಊರಿನಿಂದ ಬರುವ ಜನರಿಗೆ ನಿಷೇಧ ಹೇರಿದ್ದಾರೆ. ಜತೆಗೆ ಮನ್ಮನೆ ಗ್ರಾಮದ ಜನರು ಕೂಡಾ ಬೇರೆ ಊರಿಗೆ ಹೋಗುವದನ್ನ ನಿಷೇಧಿಸಲಾಗಿದೆ.

ಬೆಂಗಳೂರಿನಿಂದ ಯಾರಾದರು ಕದ್ದು ಮುಚ್ಚಿ ಗ್ರಾಮಕ್ಕೆ ಬಂದರೆ ಐದು ಸಾವಿರ ರೂ ದಂಡ ನಿಗಧಿ ಮಾಡಲಾಗಿದೆ. ಮತ್ತು ಕದ್ದು ಮುಚ್ಚಿ ಬಂದವರ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಸಾವಿರ ರೂ ಪ್ರೋತ್ಸಾಹ ಧನ ಕೂಡಾ ಇಡಲಾಗಿದೆ. ಹೀಗೆ ಕಟ್ಟುನಿಟ್ಟಿನ ಕ್ರಮವನ್ನ ಮನ್ಮನೆ ಗ್ರಾಮದಲ್ಲಿ ಗ್ರಾಮಭಿವೃದ್ದಿ ಸಮಿತಿಯಿಂದ ಕೈಗೊಳ್ಳಲಾಗಿದೆ.

ಧ್ವನಿ ವರ್ಧಕದ ಮೂಲಕ ತಿಳಿಸುತ್ತಿರುವುದು


ಈ‌ ನಿಯಮ ಜಾರಿಯಲ್ಲಿದೆ ಎಂದು ಹೇಳಲು ಇಲ್ಲಿ ದಿನಕ್ಕೆ ಎರಡರಿಂದ ಮೂರು ಬಾರಿ ಧ್ವನಿ ವರ್ಧಕದ ಮೂಲಕ ಘೋಷಣೆ ಕೂಗಿ ಹೇಳಲಾಗುತ್ತದೆ. ಪ್ರತಿಯೊಂದು ರಸ್ತೆಯಲ್ಲೂ ಹೀಗೆ ಜಾಗೃತಿ ಮೂಡಿಸಲು ಧ್ವನಿವರ್ಧಕ ಹೇಳಲಾಗುತ್ತೆ. ಜತೆಗೆ ಶಿವಮೊಗ್ಗ ಹೋಗುವದನ್ನ ಸಂಪೂರ್ಣ ನಿಷೇಧ ಹೇರಲಾಗಿದೆ. ನಿಯಮ ಮೀರಿ ಹೊದರೆ ಅವರನ್ನ ಮತ್ತೆ ಗ್ರಾಮಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ.

ಇದನ್ನೂ ಓದಿ :  ಬಕ್ರೀದ್ ಗೆ ಬಲಿಕೊಡಲು ತಂದಿದ್ದ ಎಂಟು ಒಂಟೆಗಳ ರಕ್ಷಣೆ ; ಆರು ಜನ ಆರೋಪಿಗಳ ಬಂಧನಇನ್ನು ಈಗ ಜುಲೈ ತಿಂಗಳು ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಹಾಗೆ ಮನ್ಮನೆ ಗ್ರಾಮದಲ್ಲಿಯೂ ಕೂಡಾ ಈಗ ಭತ್ತದ ಸಸಿ ನಾಟಿ ಕಾರ್ಯ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಮನ್ಮನೆ ಪಕ್ಕದ ಊರಿನಿಂದ ಅಥವಾ ಪಕ್ಕದ ಗ್ರಾಮದಿಂದಲೂ ಕೂಡಾ ಭತ್ತದ ಸಸಿ ನಾಟಿ ಮಾಡಲು ಕೃಷಿ ಕಾರ್ಮಿಕರನ್ನ ಕರೆತರಲು ನಿಷೇಧ ಹೇರಲಾಗಿದೆ.

ಗ್ರಾಮದ ಜನರೇ ಅವರವರ ಹೊಲದಲ್ಲಿ ಸಸಿ ನಾಟಿ ಮಾಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ, ಒಂದು ವೇಳೆ ಈ‌ನಿಯಮ ಉಲ್ಲಂಘನೆ ಮಾಡಿದ್ರೆ ಕರೆಯಿಸಿಕೊಂಡ ಮಾಲೀಕನಿಗೆ ಐದು ಸಾವಿರ ದಂಡ ವಿಧಿಸಲಾಗುತ್ತದೆ. ಹೀಗೆ ಮನ್ಮನೆ ಗ್ರಾಮದ ಜನರು ಎಲ್ಲಿಯೂ ಹೋಗುವಂತಿಲ್ಲ. ಮನ್ಮನೆ ಗ್ರಾಮಕ್ಕೆ ಯಾರು ಕೂಡಾ ಬರುವಂತಿಲ್ಲ, ನಿಯಮ ಮೀರಿದ್ರೆ ತಲೆ ದಂಡ ಪಕ್ಕಾ.
Published by: G Hareeshkumar
First published: July 21, 2020, 11:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories