HOME » NEWS » District » 5 TEAMS PARTICIPATING IN THE SKATING HOCKEY CHAMPIONSHIP IN CHANDIGARH TRAINING AT KARAWARA DKK MAK

ಚಂಡೀಗಢದಲ್ಲಿ ನಡೆಯಲಿರುವ ಸ್ಕೇಟಿಂಗ್ ಹಾಕಿ ಚಾಂಪಿಯನ್ ಶಿಪ್​ಗೆ ರಾಜ್ಯದ 5 ತಂಡ ಭಾಗಿ; ಕಾರವಾರದಲ್ಲಿ ತರಬೇತಿ

ಸ್ಕೇಟಿಂಗ್ ಆಡುವುದು ಸುಲಭವಲ್ಲ. ತರಬೇತಿ ಜತೆಗೆ ಸ್ಕೇಟಿಂಗ್ ಮಾಡುವುದಕ್ಕೆ ಸೂಕ್ತ ಸ್ಥಳ ಕೂಡ ಬೇಕು. ಆದರೆ ಇಂತಹ ಕ್ರೀಡೆಗೆ ಕಳೆದ ಕೆಲ ವರ್ಷಗಳಿಂದ ಕೈಗಾದಲ್ಲಿ ಉತ್ತಮ‌ ರಿತಿಯಲ್ಲಿ ಪ್ರೋತ್ಸಾಹೊಸಲಾಗುತ್ತಿದೆ.

news18-kannada
Updated:March 13, 2021, 7:24 AM IST
ಚಂಡೀಗಢದಲ್ಲಿ ನಡೆಯಲಿರುವ ಸ್ಕೇಟಿಂಗ್ ಹಾಕಿ ಚಾಂಪಿಯನ್ ಶಿಪ್​ಗೆ ರಾಜ್ಯದ 5 ತಂಡ ಭಾಗಿ; ಕಾರವಾರದಲ್ಲಿ ತರಬೇತಿ
ಸ್ಕೇಟಿಂಗ್ ಹಾಕಿ ತರಬೇತಿ.
  • Share this:
ಕಾರವಾರ: ಕಾಲಿಗೆ ಸ್ಕೇಟಿಂಗ್ ಕಟ್ಟಿಕ್ಕೊಂಡು ಓಡೋದೆ ಒಂದು ಸಾಹಸ. ಅದ್ರಲ್ಲಿಯೂ ಸ್ಕೇಟಿಂಗ್ ಮೂಲಕ ಹಾಕಿ ಆಡೋದು ಅಂದ್ರೆ ಸುಲಭವೆನಲ್ಲ. ಆದರೆ ಇಂತಹ ಸಾಹಸಿ ಕ್ರೀಡೆಯಲ್ಲಿ ಪಳಗಿದ ಬಾಲಕ-ಬಾಲಕಿಯರನ್ನೊಳಗೊಂಡ ಐದು ತಂಡಗಳು ರಾಜ್ಯದಿಂದ ಚಂಡಿಗಡದಲ್ಲಿ ನಡೆಯುವ  ನ್ಯಾಷನಲ್ ಲೆವಲ್ ರೋಲರ್ ಹಾಕಿ ಚಾಂಪಿಯನ್ ಶಿಪ್ ಗೆ ಸಜ್ಜಾಗಿದ್ದಾರೆ.. ಇವರಿಗೆ ಕಾರವಾರದ ಕೈಗಾದಲ್ಲಿ ತರಬೇತಿ ನೀಡುತ್ತಿದ್ದು ಉತ್ತಮ ಪ್ರದರ್ಶನ ತೋರುವ ಭತವಸೆ ಹುಟ್ಟಿ ಹಾಕಿದ್ದಾರೆ. ಸ್ಕೇಟಿಂಗ್ ಅಂದ್ರೆ ಇನ್ನು ಅದೇಷ್ಟೊ ಮಂದಿಗೆ ಪರಿಚಯವೇ ಇಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡು ವೇಗವಾಗಿ ಮುನ್ನುಗ್ಗಬಹುದಾದ ಈ ಸಾಹಸಿ ಕ್ರೀಡೆಯಲ್ಲಿ ಇದೀಗ ಇನ್ನು ಬಾಲ್ಯಾವಸ್ಥೆಯಲ್ಲಿರುವ ಮಕ್ಕಳು ಹಾಕಿ ಆಡಿ ಚಾಂಪಿಯನ್ ಆಗಲು ಮುಂದಾಗಿದ್ದಾರೆ.

ಚಂಡಿಗಡದಲ್ಲಿ ಮಾರ್ಚ್ 31 ರಿಂದ ಎಪ್ರಿಲ್ 11 ರವರೆಗೆ ನ್ಯಾಷನಲ್ ಲೆವಲ್ ಸ್ಕೇಟಿಂಗ್ ರೋಲರ್ ಹಾಕಿ ಚಾಂಪಿಯನ್ ಶಿಪ್ ನಡೆಯಲಿದೆ. ಇದಕ್ಕಾಗಿ ರಾಜ್ಯದಿಂದ ಒಟ್ಟು ಐದು ತಂಡಗಳ ಆಯ್ಕೆ ಮಾಡಲಾಗಿದ್ದು ಕಳೆದ 10 ದಿನಗಳಿಂದ ಕಾರವಾರದ ಕೈಗಾ ದಲ್ಲಿ ತರಬೇತಿ ನೀಡಲಾಗುತ್ತಿದೆ. ಕಠೀಣ ತರಬೇತಿಯೊಂದಿಗೆ ಮಕ್ಕಳು ಸಜ್ಜಾಗಿದ್ದು, ಪ್ರದರ್ಶನದ ಬಳಿಕ ನಮ್ಮ ಮಕ್ಕಳು ಇಂಡಿಯಾ ಟೀಮ್ ಗೆ ಆಯ್ಕೆಯಾಗುವ ವಿಶ್ವಾಸ ಇದೆ ಎನ್ನುತ್ತಾರೆ ತರಬೇತುದಾರರು...ಕಠೀಣ ಪರಿಶ್ರಮದೊಂದಿಗೆ ತರಬೇತಿ ನೀಡಿ ಸ್ಕೇಟಿಂಗ್ ಹಾಕಿ ತಂಡ ರಚನೆ ಮಾಡಲಾಗುತ್ತಿದೆ.

ರೋಮಾಂಚಕ ಸ್ಕೇಟಿಂಗ್ ಹಾಕಿಗೆ ಕಾರವಾರದಲ್ಲಿ ತರಬೇತಿ

ಇನ್ನು ಸ್ಕೇಟಿಂಗ್ ಆಡುವುದು ಸುಲಭವಲ್ಲ. ತರಬೇತಿ ಜತೆಗೆ ಸ್ಕೇಟಿಂಗ್ ಮಾಡುವುದಕ್ಕೆ ಸೂಕ್ತ ಸ್ಥಳ ಕೂಡ ಬೇಕು. ಆದರೆ ಇಂತಹ ಕ್ರೀಡೆಗೆ ಕಳೆದ ಕೆಲ ವರ್ಷಗಳಿಂದ ಕೈಗಾದಲ್ಲಿ ಉತ್ತಮ‌ ರಿತಿಯಲ್ಲಿ ಪ್ರೋತ್ಸಾಹೊಸಲಾಗುತ್ತಿದೆ. ಇಲ್ಲಿನ ತರಬೇತುದಾರರು ಆಸಕ್ತಿಯುಳ್ಳ ಸ್ಕೇಟರ್ ಗಳನ್ನು ಹುಡುಕಿ ತರಬೇತಿ ನೀಡುತ್ತಿದ್ದಾರೆ.ಇನ್ನು ಚಂಡಿಗಡದಲ್ಲಿ ನಡೆಯಲಿರುವ ಚಾಂಪಿಯನ್ ಶಿಪ್ ನಲ್ಲಿ ಒಟ್ಟು 22 ರಾಜ್ಯದ ಸ್ಕೇಟಿಂಗ್ ತಂಡಗಳು ಭಾಗವಹಿಸಲಿವೆ.

ಇದನ್ನೂ ಓದಿ: Kalave Mosagara| ಏನಿದು ಜಗವೇ ಹೊಸದು ಎನ್ನುತ್ತಿದ್ದಾರೆ ಭರತ್; ಕಾಲವೇ ಮೋಸಗಾರ ಚಿತ್ರದ ರೊಮ್ಯಾಂಟಿಕ್ ಡುಯೆಟ್

ಸದ್ಯ ರಾಜ್ಯದ ವಿವಿಧ ಭಾಗಗಳಿಂದ ಉತ್ತಮವಾಗಿ ಆಡುವವರನ್ನೊಳಗೊಂಡ ಉತ್ತಮ ತಂಡವನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ. ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಕಠೀಣ ಅಭ್ಯಾಸ ನಡೆಸಿದ್ದು ಉತ್ತಮ‌ ರಿತಿಯಲ್ಲಿ ತರಬೇತಿ ನೀಡಿದ್ದಾರೆ. ಚಾಂಪಿಯನ್ ಶಿಪ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಇದೆ ಎನ್ನುತ್ತಾರೆ ಸ್ಕೇಟರ್...ಜತೆಗೆ ವಿವಿಧ ವಿಭಾಗದಲ್ಲಿ ಸ್ಕೇಟಿಂಗ್ ಹಾಕಿ ನಡೆಯಲಿದೆ, ಜುನಿಯರ್, ಸಿನಿಯರ್, ಮತ್ತು ವಯೋಮಿತಿಯ ವಿಭಾಗದಲ್ಲಿ ಹಾಕಿ ಚಾಂಪಿಯನ್ ಶಿಪ್ ನಡೆಯಲಿದೆ.
Youtube Video
ಒಟ್ಟಾರೆ ಸಾಹಸಿ ಕ್ರೀಡೆ ಸ್ಕೇಟಿಂಗ ನಲ್ಲಿ ಪಳಗಿದ ರಾಜ್ಯದ ಸುಮಾರು 60 ಕ್ಕೂ ಹೆಚ್ಚು ಮಕ್ಕಳು ಇದೀಗ ಚಂಡಿಗಡದಲ್ಲಿ ನಡೆಯಲಿರುವ ಸ್ಕೇಟಿಂಗ್ ರೋಲರ್ ಹಾಕಿ ಚಾಂಪಿಯನ್ ಶಿಪ್ ಗೆ ಸಜ್ಜಾಗಿದ್ದಾರೆ. ಮಕ್ಕಳು ಉತ್ತಮ‌ ಪ್ರದರ್ಶನದ ಜೊತೆಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವಂತಾಗಲಿ ಎಂಬುದೇ ಎಲ್ಲರ ಹಾರೈಕೆ.
Published by: MAshok Kumar
First published: March 13, 2021, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories