• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Untouchability: ದೇವಸ್ಥಾನದೊಳಗೆ ಹೋಗಿದ್ದಕ್ಕೆ ದಲಿತ ಬಾಲಕನಿಗೆ ದಂಡ ವಿಧಿಸಿದ ಗ್ರಾಮಸ್ಥರು, ಎಲ್ಲಾ ದಲಿತರೂ ಈಗ ದೇವಾಲಯದೊಳಗೆ

Untouchability: ದೇವಸ್ಥಾನದೊಳಗೆ ಹೋಗಿದ್ದಕ್ಕೆ ದಲಿತ ಬಾಲಕನಿಗೆ ದಂಡ ವಿಧಿಸಿದ ಗ್ರಾಮಸ್ಥರು, ಎಲ್ಲಾ ದಲಿತರೂ ಈಗ ದೇವಾಲಯದೊಳಗೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Dalit Boy Penalized: 4 ವರ್ಷದ ಪುಟ್ಟ ಬಾಲಕ ತನ್ನ ಹುಟ್ಟುಹಬ್ಬ ಎಂದು ಖುಷಿಯಿಂದ ದೇವರಿಗೆ ನಮಿಸೋಕೆ ಆಂಜನೇಯ ದೇವಾಲಯದೊಳಗೆ ಹೋಗಿದ್ದಾನೆ. ದಲಿತ ಬಾಲಕ ದೇವಸ್ಥಾನಕ್ಕೆ ಬಂದಿದ್ದು ನೋಡಿ ಕೋಪಗೊಂಡ ಸವರ್ಣೀಯರು ಆತನಿಕಗೆ 11 ಸಾವಿರ ದಂಡ ವಿಧಿಸಿದ್ದಲ್ಲದೆ ದೇವಸ್ಥಾನವನ್ನು ಶುದ್ಧೀಕರಿಸಿದ್ದಾರೆ. ನಂತರ ಈ ಬಗ್ಗೆ ಸಭೆಗಳು ನಡೆದು ದಲಿತರೆಲ್ಲಾ ದೇವಸ್ಥಾನದೊಳಗೆ ಪ್ರವೇಶಿಸಿದ್ದಾರೆ.

ಮುಂದೆ ಓದಿ ...
  • Share this:

ಕೊಪ್ಪಳ: ಜಗತ್ತು ಇಂದು ಅಂಗೈಯಲ್ಲಿದೆ, ಒಂದು ಬಟನ್ ಹೊತ್ತಿದರೆ ಇಡೀ ಜಗತ್ತು ತೆರೆದುಕೊಳ್ಳುತ್ತದೆ, ವಿದ್ಯಾವಂತ ಸಮಾಜ ನಿರ್ಮಾಣವಾಗುತ್ತಿದೆ, ಆದರೂ ಇನ್ನೂ ಅಸ್ಪೃಶ್ಯತೆ (Untouchability) ಎಂಬ ಅಮಾನವೀಯ ಘಟನೆಗಳು ಇನ್ನೂ ವರದಿಯಾಗುತ್ತಿವೆ, ಸವರ್ಣಿಯರು ದಲಿತರಿಗೆ ದೇವಸ್ಥಾನ ಪ್ರವೇಶ, ಕ್ಷೌರಿಕರಿಗೆ ಕ್ಷೌರವನ್ನು ಸವರ್ಣಿಯರಿಗೆ ಮಾತ್ರ ಮಾಡಿ ಎಂಬ ಪ್ರಕರಣಗಳು, ಹದಿ ಹರೆಯದಲ್ಲಿ ದಲಿತ ಯುವಕ ಸವರ್ಣಿಯ ಯುವತಿಯನ್ನು ಪ್ರೀತಿಸಿದರೆ ಮಾರ್ಯಾದಾ ಹತ್ಯೆ ಮಾಡುವಂಥ ಘಟನೆಗಳು ನಡೆದಿವೆ, ಕೊಪ್ಪಳ ಜಿಲ್ಲೆಯಲ್ಲಿ (Incident in Koppala) ಇಂಥ ಘಟನೆಗಳು ಆಗಾಗ ವರದಿಯಾಗುತ್ತಲೆ ಇವೆ.ಇದಕ್ಕೆ ಇತ್ತೀಚಿನ ವರದಿ ಜಗತ್ತು ಇಷ್ಟು ಮುಂದುವರಿದರೂ ಇನ್ನೂ ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ, ಇದಕ್ಕೆ ಉದಾಹರಣೆ ಕೊಪ್ಪಳ ಜಿಲ್ಲೆಯಲ್ಲಿ ಆಡುವ ಮಗುವೊಂದು (Child entereed temple) ದೇವಸ್ಥಾನಕ್ಕೆ ಹೋಗಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿ ದೇವಸ್ಥಾನ ಶುದ್ದಿಕರಿಸಿ ಅಸ್ಫಶ್ಯತೆ ಆಚರಿಸಿದ್ದರು.ದೇವಸ್ಥಾನಕ್ಕೆ ದಲಿತ ಮಗು ಪ್ರವೇಶಿದ್ದಕ್ಕೆ ಶುದ್ದಿಕರಣ, ದಂಡ ವಿಧಿಸಿದ ಪ್ರಕರಣದ ನಂತರ , ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದರು, ಅಸ್ಪೃಶ್ಯತೆ ಆಚರಣೆ ಕೈ ಬಿಡಲು ಸೂಚನೆ ನೀಡಿದರು, ತಪ್ಪು ಕಲ್ಪನೆಯಿಂದ ಆಗಿರುವ ಘಟನೆ ಸೌಹಾರ್ದಯುತವಾಗಿ ಇರುತ್ತವೆ ಎಂದ ಗ್ರಾಮಸ್ಥರು ಹೇಳಿದ್ದಾರೆ.


ಕುಷ್ಟಗಿ ತಾಲೂಕಿನ ಮಿಯಾಪುರದಲ್ಲಿ ಈ  ಘಟನೆ ನಡೆದಿದೆ. ಸೆ 4 ರಂದು ಚನ್ನದಾಸರ ಸಮುದಾಯದ ಮಗುವೊಂದು ಆಂಜನೇಯ ದೇವಸ್ಥಾನಕ್ಕೆ ಹೋಗಿತ್ತು. ಅಂದು ಮಗುವಿನ 4ನೇ ವರ್ಷದ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಆಂಜನೇಯ ನಮಿಸಲು ಹೋಗಿತ್ತು, ದಲಿತರು ಗುಡಿ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ದೇವಸ್ಥಾನವನ್ನು ಶುದ್ಧೀಕರಿಸಿದ್ದರು. 11 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಸೆ 11 ರಂದು ಗ್ರಾಮದ ಸವರ್ಣಿಯರು ಸಭೆ ನಡೆಸಿ ದಂಡ ವಿಧಿಸಿದ್ದರು, ಇದಕ್ಕೆ ಚನ್ನದಾಸರ ಸಮುದಾಯ ಪ್ರತಿಭಟನೆ ಮಾಡಿತ್ತು.


ಎಲ್ಲರೂ ಒಂದಾಗಿ ಬಾಳುವಂತೆ ಮನವಿ


ಇಂಥ ಘಟನೆ ತಡೆಯಬೇಕು, ದಲಿತ ಸಮುದಾಯಗಳು ಎಲ್ಲರಂತೆ ಬೆರತು ಜೀವನ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು, ಈ ಘಟನೆಯ ನಂತರ ಗ್ರಾಮಕ್ಕೆ ಕುಷ್ಟಗಿ ತಹಸೀಲ್ದಾರ ಸಿದ್ದೇಶ, ಗಂಗಾವತಿ ಡಿವಾಯ್ ಎಸ್ಪಿ ರುದ್ರೇಶ ಉಜ್ಜನಕೊಪ್ಪ ಭೇಟಿ ನೀಡಿ ಸಭೆ ನಡೆಸಿದರು, ಮುಂದೆ ಇಂಥ ಘಟನೆಯಾಗದಂತೆ ಎಚ್ಚರಿಕೆ ನೀಡಿದರು,  ಅದಕ್ಕೆ ಗ್ರಾಮಸ್ಥರು ಸಹ ಒಪ್ಪಿಕೊಂಡು ಯಾವುದು ತಪ್ಪು ಕಲ್ಪನೆಯಿಂದ ಈ ರೀತಿಯಾಗಿದೆ, ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಿರುತ್ತೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ದಲಿತ ವ್ಯಕ್ತಿ ಬೈಕ್‌ ಮುಟ್ಟಿದಕ್ಕೆ ಅರೆಬೆತ್ತಲೆಗೊಳಿಸಿ ಹಲ್ಲೆ; ವಿಜಯಪುರದಲ್ಲೊಂದು ಅಮಾನವೀಯ ಘಟನೆ


ಇದು ಒಂದು ಘಟನೆಯಲ್ಲಿ ಯಲಬುರ್ಗಾ ತಾಲೂಕಿನ ಹೊಸಹಳ್ಳಿಯಲ್ಲಿ ದಲಿತ ಯುವಕರಿಗೆ ಕ್ಷೌರ ಮಾಡಿಸಿಕೊಳ್ಳುವ ವಿಷಯಕ್ಕೆ ವಾಗ್ವಾದ ಆಗಿ ನಂತರ ಇಬ್ಬರು ಯುವಕರು ನೊಂದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂಥ ಹಂತಕ್ಕೆ ಹೋಗಿತ್ತು. ಈ ಘಟನೆಯ ನಂತರ ಗ್ರಾಮದಲ್ಲಿ ಹಲವು ದಿನಗಳವರೆಗೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು.ಈ ಮಧ್ಯೆ ಕಾರಟಗಿ ತಾಲೂಕಿನ ಬರಗೂರಿನಲ್ಲಿ ದಲಿತ ಯುವಕ ಇದೇ ಗ್ರಾಮದ ಸವರ್ಣಿಯ ಯುವತಿಯನ್ನು ಪ್ರೀತಿಸಿದ್ದ, ಈ ಸಂದರ್ಭದಲ್ಲಿ ಹಲವು ಬಾರಿ ಗಲಾಟೆಯಾಗಿತ್ತು, ಆದರೆ ಕೊನೆಗೆ ಯುವಕನನ್ನು ಮಾರ್ಯಾದಾ ಹತ್ಯೆ ಮಾಡಲಾಗಿದೆ.


ಗ್ರಾಮೀಣ ಭಾಗದಲ್ಲಿ ಪಿಡುಗು


ಕೊಪ್ಪಳ ಜಿಲ್ಲೆಯಲ್ಲಿ ಈಗಲೂ ಸಹ ಗ್ರಾಮೀಣ ಪ್ರದೇಶದಲ್ಲಿ ದಲಿತರ ಮನೆಯಲ್ಲಿ ಸಮಾರಂಭಗಳು, ಸಾವುಗಳ ಸಂಭವಿಸುದರೆ ಗ್ರಾಮದಲ್ಲಿರುವ ಸವರ್ಣಿಯರ ಹೊಟೆಲ್ ಗಳು ಬಂದ್ ಮಾಡುತ್ತಾರೆ, ಗ್ರಾಮಗಳಲ್ಲಿಯ ದಲಿತರು ಹೊಟೆಲ್ ಪ್ರವೇಶಿದುವುದಿಲ್ಲ, ಇನ್ನೂ ದಲಿತರ ಮನೆಯ ಸಾವು ಹಾಗು ಸಾಮಾರಂಭಗಳಿಗೆ ಬೇರೆ ಗ್ರಾಮದ ದಲಿತರು ಆಗಮಿಸುತ್ತಾರೆ ಅವರು ಹೊಟೆಲ್ ಬಂದರೆ ಅಪವಿತ್ರವಾಗುತ್ತವೆ, ಅವರಿಗೆ ತಿಂಡಿ, ಚಹ ನೀಡಲು ನಿರಾಕರಿಸಿದರೆ ಗಲಾಟೆಯಾಗುತ್ತವೆ ಎಂಬ ಕಾರಣಕ್ಕೆ ಒಂದೊಂದು ದಿನ ಹೊಟೆಲ್ ಬಂದ್ ಮಾಡುತ್ತಾರೆ. ಒಟ್ಟಾರೆಯಾಗಿ ಅಸ್ಪೃಶ್ಯತೆ ಎಂಬ ಪಿಡುಗನ್ನು ದೂರ ಮಾಡಬೇಕು, ಈ ಘಟನೆಗಳು ಮರುಕಳಸದಂತೆ ಜನರಲ್ಲಿ ಜಾಗೃತಿ ಮೂಡಿಸಿ ಅಸ್ಪೃಶ್ಯತೆ ನಿರ್ಮೂಲನೆ ಮಾಡುವುದು ಅವಶ್ಯವಾಗಿದೆ.

top videos


    ಇಷ್ಟೆಲ್ಲಾ ರಾದ್ಧಾಂತವಾಗಿ ನಂತರ ರಾಜಿಯಾದ ಮೇಲೆ ಊರಿನ ದಲಿತರೆಲ್ಲಾ ದೇವಸ್ಥಾನದೊಳಗೆ ಹೋಗಿದ್ದಾರೆ.

    First published: