HOME » NEWS » District » 4 THOUSAND DOSAGE CORONA VACCINE WAS CAME TO KODAGU RHHSN RSK

ಕೊಡಗಿಗೆ ಬಂದು ತಲುಪಿದ 4 ಸಾವಿರ ಡೋಸ್ ಕೋವಿಡ್ ವ್ಯಾಕ್ಸಿನ್; ಶನಿವಾರದಿಂದ ಲಸಿಕೆ ವಿತರಣೆ

39 ಸೆಂಟರ್ ಗಳಲ್ಲೂ ವೈಟಿಂಗ್ ರೂಂ, ವ್ಯಾಕ್ಸಿನ್ ವಿತರಣೆ ಕೊಠಡಿ ಮತ್ತು ಅಬ್ಸರ್ವೇಷನ್ ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಯಾವುದೇ ಗೊಂದಲವಿಲ್ಲದೆ ವ್ಯಾಕ್ಸಿನ್ ವಿತರಣೆ ಮಾಡಲಾಗುವುದು ಎಂದು ಕೊಡಗು ಸಿಇಓ ಹೇಳಿದ್ದಾರೆ. ಒಟ್ಟಿನಲ್ಲಿ ಕೊಡಗಿನ 6560 ಜನರಿಗೆ ಮೊದಲ ಹಂತದಲ್ಲೇ ವ್ಯಾಕ್ಸಿನ್ ವಿತರಣೆ ಮಾಡಬೇಕಾಗಿದ್ದು, ಜಿಲ್ಲಾಡಳಿತ ಇನ್ನೂ 2560 ಡೋಸ್ ವ್ಯಾಕ್ಸಿನ್ ಗಾಗಿ ಕಾಯುತ್ತಿದೆ.

news18-kannada
Updated:January 14, 2021, 9:49 PM IST
ಕೊಡಗಿಗೆ ಬಂದು ತಲುಪಿದ 4 ಸಾವಿರ ಡೋಸ್ ಕೋವಿಡ್ ವ್ಯಾಕ್ಸಿನ್; ಶನಿವಾರದಿಂದ ಲಸಿಕೆ ವಿತರಣೆ
ಕೊಡಗಿಗೆ ಬಂದ ಕೊರೋನಾ ಲಸಿಕೆ.
  • Share this:
ಕೊಡಗು: ಬಹುನಿರೀಕ್ಷಿತ ಕೋವಿಶೀಲ್ಡ್ ವ್ಯಾಕ್ಸಿನ್ ಗಡಿಜಿಲ್ಲೆ ಕೊಡಗಿಗೂ ಬಂದು ತಲುಪಿದೆ. 400 ವೈಯಲ್ ನಲ್ಲಿ ನಾಲ್ಕು ಸಾವಿರ ಡೋಸೇಜ್ ವಾಕ್ಸಿನ್ ಕೊಡಗಿಗೆ ಬಂದು ತಲುಪಿದೆ. ಮೈಸೂರಿನಿಂದ ಪೊಲೀಸ್ ಭದ್ರತೆಯಲ್ಲಿ ಲಸಿಕೆ ತರಲಾಗಿದ್ದು, ಪ್ರಭಾರ ಜಿಲ್ಲಾಧಿಕಾರಿಯಾಗಿರುವ ಕೊಡಗು ಸಿಇಓ ಭನ್ವರ್ ಸಿಂಗ್ ಮೀನಾ ಅವರು ಮಡಿಕೇರಿಯಲ್ಲಿ, ಡಿಎಚ್‍ಓ ಕಚೇರಿ ಬಳಿ ವ್ಯಾಕ್ಸಿನ್ ಸ್ವೀಕರಿಸಿದರು. ಮೈಸೂರಿನಿಂದ ಬಂದ ವಾಹನದ ಸೀಲ್ ತೆರೆದು ಪರಿಶೀಲಿಸಿದ ಭನ್ವರ್ ಸಿಂಗ್ ಮೀನಾ ಮತ್ತು ಕೊಡಗು ಕುಟುಂಬ ಕಲ್ಯಾಣ ಅಧಿಕಾರಿ ಆನಂದ್ ವ್ಯಾಕ್ಸಿನ್ ಸ್ವೀಕರಿಸಿದರು.

ಒಂದು ಫ್ರೀಜರ್ ನಲ್ಲಿ 400 ವೈಯಲ್ ಗಳನ್ನು ತರಲಾಗಿದ್ದು, ಅದರಲ್ಲಿ 4 ಸಾವಿರ ವ್ಯಾಕ್ಸಿನ್ ಇವೆ. ಸದ್ಯ ವ್ಯಾಕ್ಸಿನ್ ಅನ್ನು ಡಿಎಚ್‍ಓ ಕಚೇರಿಯಲ್ಲಿರುವ ಔಷಧಿ ಸಂಗ್ರಹಣಾಲಯದಲ್ಲಿ ಸಂಗ್ರಹಿಸಿ ಇಡಲಾಗಿದೆ. ಇದೇ ಹದಿನಾರರಂದು ಅಂದರೆ ಶನಿವಾರದಂದು ಜಿಲ್ಲೆಯ ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಲಸಿಕೆ ವಿತರಿಸಲಿದ್ದು, ಜಿಲ್ಲೆಯ ಐದು ಕಡೆಗಳಲ್ಲಿ ವ್ಯಾಕ್ಸಿನ್ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಡಿಕೇರಿಯ ಜಿಲ್ಲಾಸ್ಪತ್ರೆ, ಸೋಮವಾರಪೇಟೆಯ ತಾಲ್ಲೂಕು ಆರೋಗ್ಯ ಕೇಂದ್ರ, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರ ವಿರಾಜಪೇಟೆಯ ತಾಲ್ಲೂಕು ಆರೋಗ್ಯ ಕೇಂದ್ರ ಮತ್ತು ವಿರಾಜಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದರಲ್ಲಿಯೂ ವ್ಯಾಕ್ಸಿನ್ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಹೇಳಿದ್ದಾರೆ.

ಇದನ್ನು ಓದಿ: ಕಣ್ಣಿನಿಂದ ನೋಡಲಾಗದ ಸಿಡಿ ಇದೆ, ಅದು ಈಗ ಡಿಕೆ ಶಿವಕುಮಾರ್ ಬಳಿ ಇದೆ; ಯತ್ನಾಳರಿಂದ ಮತ್ತೊಂದು ಸ್ಫೋಟಕ ಹೇಳಿಕೆ

ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಇಲಾಖೆ ಸಿಬ್ಬಂದಿ, ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 6560 ಆರೋಗ್ಯ ಇಲಾಖೆ ಸಿಬ್ಬಂದಿಗಳಿದ್ದು ಅವರಿಗೆ ಮೊದಲ ಹಂತದಲ್ಲಿ ಚಿಕಿತ್ಸೆ ಕೊಡಲು ನಿರ್ಧರಿಸಲಾಗಿದೆ. ಸದ್ಯ ನಾಲ್ಕು ಸಾವಿರ ಡೋಸ್ ವ್ಯಾಕ್ಸಿನ್ ಬಂದಿದ್ದು ಇನ್ನೂ ಎರಡೂವರೆ ಸಾವಿರ ಡೋಸೇಜ್ ಬರಲಿದೆ ಎಂದಿದ್ದಾರೆ. ವ್ಯಾಕ್ಸಿನ್ ಪಡೆಯುವವರು ಕೋವಿಡ್ ಪೋರ್ಟಲ್ ಸೈಟ್ ಇದ್ದು ಅದರಲ್ಲಿ ನೋಂದಾಯಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಒಟ್ಟು 39 ಕೇಂದ್ರಗಳಲ್ಲಿ ವ್ಯಾಕ್ಸಿನ್ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವ ಕೇಂದ್ರದಲ್ಲಿ ಎಷ್ಟು ಗಂಟೆಗೆ ವ್ಯಾಕ್ಸಿನ್ ದೊರೆಯಲಿದೆ ಎನ್ನೋ ಮಾಹಿತಿ ಫಲಾನುಭವಿಯ ಮೊಬೈಲ್ ಗೆ ಮೆಸೇಜ್ ಹೋಗಲಿದೆ. ಇದರ ಆಧಾರದಲ್ಲಿ ಫಲಾನುಭವಿ ಹೋಗಿ ವ್ಯಾಕ್ಸಿನ್ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಮೊದಲಿಗೆ ಸರ್ಕಾರಿ ವೈದ್ಯಕೀಯ ಸಿಬ್ಬಂದಿಗೆ ಈಗ ಬಂದಿರುವ 4000 ಡೋಸೇಜ್ ಕೊಡಲಾಗುವುದು. ನಂತರ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗೂ ವ್ಯಾಕ್ಸಿನ್ ದೊರೆಯಲಿದೆ.  ವ್ಯಾಕ್ಸಿನ್ ವಿತರಣೆಯಾಗಲಿರುವ 39 ಸೆಂಟರ್ ಗಳಲ್ಲೂ ವೈಟಿಂಗ್ ರೂಂ, ವ್ಯಾಕ್ಸಿನ್ ವಿತರಣೆ ಕೊಠಡಿ ಮತ್ತು ಅಬ್ಸರ್ವೇಷನ್ ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಯಾವುದೇ ಗೊಂದಲವಿಲ್ಲದೆ ವ್ಯಾಕ್ಸಿನ್ ವಿತರಣೆ ಮಾಡಲಾಗುವುದು ಎಂದು ಕೊಡಗು ಸಿಇಓ ಹೇಳಿದ್ದಾರೆ. ಒಟ್ಟಿನಲ್ಲಿ ಕೊಡಗಿನ 6560 ಜನರಿಗೆ ಮೊದಲ ಹಂತದಲ್ಲೇ ವ್ಯಾಕ್ಸಿನ್ ವಿತರಣೆ ಮಾಡಬೇಕಾಗಿದ್ದು, ಜಿಲ್ಲಾಡಳಿತ ಇನ್ನೂ 2560 ಡೋಸ್ ವ್ಯಾಕ್ಸಿನ್ ಗಾಗಿ ಕಾಯುತ್ತಿದೆ.
Published by: HR Ramesh
First published: January 14, 2021, 9:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading