Kalaburagi Accident: 2 ಪ್ರತ್ಯೇಕ ಬೈಕ್​ ಅಪಘಾತದಲ್ಲಿ 4 ಸಾವು.. ಯಾರೊಬ್ಬರೂ ಹೆಲ್ಮೆಟ್​​ ಧಿರಿಸಿರಲಿಲ್ಲ!

ಒಬ್ಬರು ಅಂತ್ಯಕ್ರಿಯೆಯಿಂದ ಮನೆಗೆ ಹೊರಟ್ಟಿದ್ದರು. ಆದರೆ ಒಂದು ತಪ್ಪಿನಿಂದ ಜೀವ ಕಳೆದುಕೊಂಡಿದ್ದಾರೆ. ಮತ್ತೊಬ್ಬರು ಹೋಗಿದ್ದು ATMಗೆ, ಸೇರಿದ್ದು ಮಸಣಕ್ಕೆ. ಇನ್ನಾದ್ರೂ ಎಚ್ಚೆತ್ತುಕೊಳ್ಳಿ ಹೆಲ್ಮೆಟ್​ ಕಡ್ಡಾಯವಾಗಿ ಧರಿಸಿ.

ಮೃತರು

ಮೃತರು

  • Share this:
     ಕಲಬುರಗಿ: ಎಲ್ಲವೂ  ಸರಿಯಾಗಿದ್ದರೆ, ಆ ಕುಟುಂಬಗಳಲ್ಲಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕಾಗಿತ್ತು. ಆದ್ರೆ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ ಸೂತಕದ ಛಾಯೇ ಆವರಿಸಿದೆ.  ಬೈಕ್‌ಗಳ ಮಧ್ಯೆ ಡಿಕ್ಕಿಯಿಂದ ನಾಲ್ವರು ಬಾರದ ಲೋಕ್ಕಕೆ ಹೋಗಿದ್ದಾರೆ. ಅಂತ್ಯಕ್ರಿಯೆ  ಮಗಿಸಿಕೊಂಡು ಮನೆಗೆ ಹೊರಟಿದ್ದವರ ಮಸಣ ಸೇರಿದ್ದಾರೆ. ಎಟಿಎಂ ನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದವರು ಮೃತಪಟ್ಟಿದ್ದಾರೆ.

    ಹಬ್ಬ ಇಲ್ಲ ಸೂತಕೆವೇ ಎಲ್ಲಾ..! 

    ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬೈಕ್ ಮತ್ತು ಮೃತದೇಹಗಳು. ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ.  ಮತ್ತೊಂದಡೆ ಮುಂದೇನು ಅನ್ನೋ ಚಿಂತೆಯಲ್ಲಿರುವ ಮತ್ತೊಂದು ಕುಟುಂಬ.  ಇಂತಹದೊಂದು ದೃಶ್ಯ ಕಂಡುಬಂದಿದ್ದು ಕಲಬುರಗಿ ನಗರದ ಶವಾಗಾರದ ಮುಂದೆ. ಅಷ್ಟಕ್ಕೂ ಇವರ ಕಣ್ಣೀರು, ಆತಂಕಕ್ಕೆ ಕಾರಣ, ಬೈಕ್ ಅಪಘಾತದಲ್ಲಿ ನಾಲ್ವರು ಬಾರದ ಲೋಕಕ್ಕೆ ಹೋಗಿದ್ದು.  ಜಿಲ್ಲೆಯಲ್ಲಿ ಇಂದು ಸಂಭ್ರಮದಿಂದ ಗಣೇಶನ  ಹಬ್ಬವನ್ನು ಆಚರಿಸಲಾಗುತ್ತಿದೆ. ಆದ್ರೆ ಆ ನಾಲ್ಕು ಕುಟುಂಬಗಳಿಗೆ ಹಬ್ಬದ ಸಂಭ್ರಮದ ದೂರದ ಮಾತಾಗಿದೆ.

    2 ಅಪಘಾತ 4 ಸಾವು..!

    ನಿನ್ನೆ ಸಂಜೆ ನಗರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಬೈಕ್ ಅಪಘಾತದಲ್ಲಿ ನಾಲ್ವರು ಬಾರದ ಲೋಕಕ್ಕೆ ಹೋಗಿದ್ದಾರೆ. ಕಮಲಾಪುರ ತಾಲೂಕಿನ ಮಡಕಿ ತಾಂಡಾ ಬಳಿ  ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಉಂಟಾದ ಪರಿಣಾಮ, ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಕಲಬುರಗಿ ತಾಲೂಕಿನ ಬೇಲೂರು ಜೆ ಗ್ರಾಮದ ನಾಗಪ್ಪ, ಕಮಲಾಪುರ ತಾಲೂಕಿನ ಲಾಡ ಮುಗಳಿ ಗ್ರಾಮದ ಅಂಬರೀಶ್ ಮತ್ತು ಅನೀಲ್  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದರಲ್ಲಿ ಬೇಲೂರು ಗ್ರಾಮದ ನಿವಾಸಿಯಾಗಿರೋ ನಾಗಪ್ಪ, ಸಂಬಂಧಿಕರ ಅಂತ್ಯಕ್ರಿಯೆ ಹೋಗಿದ್ದ. ಅಂತ್ಯಕ್ರಿಯೆ ಮುಗಿಸಿಕೊಂಡು ತನ್ನೂರಿಗೆ ಮರಳಿ ಹೋಗುತ್ತಿದ್ದ.

    ಹೋಗಿದ್ದು ATMಗೆ ಸೇರಿದ್ದ ಮಸಣ! 

    ಇತ್ತ ಲಾಡಮುಗಳಿ ಗ್ರಾಮದ ನಿವಾಸಿಗಳಾದ ಅನೀಲ್ ಮತ್ತು ಅಂಬರೀಶ್,  ಮಹಗಾಂವ್ ಕ್ರಾಸ್ ಬಳಿಯಿರುವ ಎಟಿಎಮ್‌ಗೆ ಹೋಗಿ ಹಣ ಡ್ರಾ ಮಾಡಿಕೊಂಡು ಮರಳಿ ತಮ್ಮೂರಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಸ್ಥಳದಲ್ಲಿಯೇ ಮೂವರು ಪ್ರಾಣ ಬಿಟ್ಟಿದ್ದಾರೆ.  ಮತ್ತೊಂದಡೆ ಕಲಬುರಗಿ ನಗರದ ಹೊರವಲಯದ ವಿಶ್ವವಿದ್ಯಾಲಯ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ, 32 ವರ್ಷದ ತೇಜು ಜಾದವ್  ಅನ್ನೋ ವ್ಯಕ್ತಿ ಬಾರದ ಲೋಕ್ಕಕೆ ಹೋಗಿದ್ದಾನೆ.

    ಇದನ್ನೂ ಓದಿ: ಪ್ರೇಮಿಗಳಿಗೆ ಧರ್ಮ ಸಂಕಟ: ಇವರ ಪ್ರಕಾರ ಅಣ್ಣ-ತಂಗಿ.. ಅವರ ಪ್ರಕಾರ ಮದುವೆ ಆಗಬಹುದು.. ಏನಿದು ಸಿನಿಮೀಯ ಕಥೆ?

    ಅಪಘಾತದಲ್ಲಿ ಮೃತಪಟ್ಟವರೆಲ್ಲಾ ತಮ್ಮ ಮನೆಗೆ ಆಧಾರ ಸ್ತಂಭವಾಗಿದ್ದರು.  ಆದ್ರೆ ವಿಧಿಯಾಟಕ್ಕೆ ನಾಲ್ವರು ಕೂಡಾ ಬಲಿಯಾಗಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ನಾಗಪ್ಪಗೆ ಒಂದುವರೆ ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಪತ್ನಿ ಗರ್ಭಿಣಿ. ನಾಗಪ್ಪ ಮಗುವಿನ ನಿರೀಕ್ಷೆಯಲ್ಲಿದ್ದರು. ಆದ್ರೆ ಮಗುವಿನ ಮುಖ ನೋಡುವ ಮೊದಲೇ ಅವರೇ ಬಾರದ ಲೋಕ್ಕಕೆ ಹೋಗಿದ್ದಾರೆ. ಇನ್ನು ಅಪಘಾತದಲ್ಲಿ ಮೃತಪಟ್ಟ ನಾಲ್ವರು ಕೂಡಾ ಹೆಲ್ಮೇಟ್ ಹಾಕಿರಲಿಲ್ಲಾ ಅನ್ನೋದು ಆಘಾತಕಾರಿ ಸಂಗತಿಯಾಗಿದೆ. ನಾಲ್ವರು ಮೃತಪಟ್ಟವರು ಕೂಡಾ ತಲೆಗೆ ಗಂಬೀರವಾಗಿ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವ ವಾಗಿ ಮೃತಪಟ್ಟಿದ್ದಾರೆ. ಹೆಲ್ಮೇಟ್ ಹಾಕಿದ್ರೆ ನಾಲ್ವರು ಕೂಡಾ ಬದಕುಳಿಯುವ ಸಾಧ್ಯತೆಯಿತ್ತು. ಆದ್ರೆ ಹೆಲ್ಮೇಟ್ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ನಾಲ್ವರು ಕೂಡಾ ಸಾವಿನ ಮನೆ ಸೇರಿದ್ದಾರೆ.

    ಕಲಬುರಗಿ ಜಿಲ್ಲೆಯಲ್ಲಿ ಒಂದಡೆ ಹಬ್ಬದ ಸಂಭ್ರಮ ಜೋರಾಗಿದ್ದರೆ, ಮತ್ತೊಂದಡೆ ಬೈಕ್ ಅಪಘಾತದಲ್ಲಿ ನಾಲ್ವರು ಬಾರದ ಲೋಕಕ್ಕೆ ಹೋಗಿದ್ದರಿಂದ ಕುಟುಂಬಗಳು ಸಾವಿನ ಮನೆಗಳಾಗಿದ್ದವು. ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವದರಿಂದ, ಹೆಲ್ಮೇಟ್ ಇಲ್ಲದೇ ಬೈಕ್  ಓಡಿಸುತ್ತಿರುವದರಿಂದ ಅಪಘಾತದಲ್ಲಿ ಅನೇಕರು ಬಲಿಯಾಗುತ್ತಿದ್ದಾರೆ. ಇನ್ನಾದ್ರು ಜನರು ತಮ್ಮ ಜೀವವನ್ನು ಕಾಪಾಡಿಕೊಳ್ಳುವ ಕೆಲಸ ಮಾಡಬೇಕಿದೆ.

    ವರದಿ: ಅರುಣ್​​ ಕುಮಾರ್​
    Published by:Kavya V
    First published: