• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • LockDown: ಚಿಕ್ಕಮಗಳೂರಿನಲ್ಲಿ ಮತ್ತೆ 4 ದಿನ ಸಂಪೂರ್ಣ ಲಾಕ್​ಡೌನ್; ನಿಯಮ ಕಠಿಣಗೊಳಿಸಲು ಮುಂದಾದ ಜಿಲ್ಲಾಡಳಿತ

LockDown: ಚಿಕ್ಕಮಗಳೂರಿನಲ್ಲಿ ಮತ್ತೆ 4 ದಿನ ಸಂಪೂರ್ಣ ಲಾಕ್​ಡೌನ್; ನಿಯಮ ಕಠಿಣಗೊಳಿಸಲು ಮುಂದಾದ ಜಿಲ್ಲಾಡಳಿತ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಜಿಲ್ಲಾಡಳಿತ ವಿಧಿಸಿದ್ದ ಕಠಿಣ ಲಾಕ್‍ಡೌನ್‍ನಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದೆ.

  • Share this:

ಚಿಕ್ಕಮಗಳೂರು : ಕಾಫಿನಾಡಲ್ಲಿ ಮತ್ತೆ 4 ದಿನ ಸಂಪೂರ್ಣ ಲಾಕ್​ಡೌನ್ ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ. ಮೇ 24 ರಿಂದ 28ರ ತನಕ ಲಾಕ್ ಡೌನ್ ಮುಂದುವರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕೊರೋನಾ ಪ್ರಕರಣ ಹೆಚ್ಚಾದ ಹಿನ್ನೆಲೆ ಮೇ 20 ರಿಂದ ನಾಲ್ಕು ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು, ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ಇನ್ನು ನಾಲ್ಕು ದಿನದ ಅವಶ್ಯಕತೆ ಇದ್ದು, ಇನ್ನು ನಾಲ್ಕು ದಿನ ಜಿಲ್ಲೆಯಾದ್ಯಂದ ಲಾಕ್ ಡೌನ್ ಮುಂದುವರೆಸಿಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


ಜಿಲ್ಲಾಡಳಿತ ವಿಧಿಸಿದ್ದ ಕಠಿಣ ಲಾಕ್‍ಡೌನ್‍ನಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರೀಯೇ ವ್ಯಕ್ತವಾಗಿದೆ. ರಾಜ್ಯಸರ್ಕಾರ ಮೇ.24ರಿಂದ ಬೆಳಿಗ್ಗೆ 6ಗಂಟೆಯಿಂದ 10ಗಂಟೆಯವರೆಗೂ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಿ ಮುಂದಿನ 14ದಿನಗಳ ಕಾಲ ಕಠಿಣಕಫ್ರ್ಯೂ ವಿಧಿಸಿ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಜಿಲ್ಲಾಡಳಿತ ಮೇ.20ರಿಂದ ಮೇ.24ರವರೆಗೆ ವಿಧಿಸಿದ್ದ ಲಾಕ್ ಡೌನ್ ಮುಂದುವರೆಯಲಿದ್ದು, ಕೆಲವೊಂದು ಬದಲಾವಣೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಈ ಹಿಂದೇ ಜಿಲ್ಲೆಗೆ ಸೀಮಿತಗೊಳಿಸಿ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧಗಳೇ ಶೇ.95ರಷ್ಟು ಅನ್ವಯವಾಗಲಿದೆ. ತಳ್ಳುಗಾಡಿ ಮತ್ತು ಗೂಡ್ಸ್‍ಗಳಲ್ಲಿ ಹಣ್ಣು ತರಕಾರಿ ಮಾರಾಟಕ್ಕೆ ಸಮಯ ನಿಗಧಿ ಮಾಡಿಲ್ಲ ಮನೆ ಮನೆಗೆ ತೆರಳಿ ಮಾರಾಟ ಮಾಡಬಹುದಾಗಿದೆ ಎಂದ ಅವರು, ದಿನಸಿಅಂಗಡಿ, ಸೂಪರ್ ಮಾರ್ಕೇಟ್ ಹೋಮ್ ಡೆಲವರಿ ನೀಡಲು ಬೆಳಿಗ್ಗೆ 6ಗಂಟೆಯಿಂದ 10ಗಂಟೆ ವರೆಗೂ ಅವಕಾಶ ನೀಡಲಾಗಿದೆ ಎಂದರು.


ಕೃಷಿ ಚಟುವಟಿಕೆಗೆ ಪೂರಕವಾದ ರಸಗೊಬ್ಬರ ಬಿತ್ತನೆಬೀಜ ಸೇರಿದಂತೆ ಅಗತ್ಯವಸ್ತುಗ ಳನ್ನು ಹೋಮ್ ಡೆಲವರಿಗೆ ಅವಕಾಶ ನೀಡಲಾಗಿದೆ. ಸ್ಥಳದಲ್ಲೇ ಇರುವ ಕಾರ್ಮಿಕರಿಂದ ಕೃಷಿ ಚಟುವಟಿಕೆ  ನಡೆಸಲು ಅವಕಾಶವಿದೆ. ಆದರೆ, ಕಾರ್ಮಿಕರು ಒಂದು ಕಡೆಯಿಂದ ಮತ್ತೋಂದು ಕಡೆಗೆ ಓಡಾಡಲು ಅವಕಾಶವಿಲ್ಲ ಎಂದು ಹೇಳಿದರು.


ಹೋಟೆಲ್ ರೆಸ್ಟೋರೆಂಟ್‍ಗಳು ತಿಂಡಿ ತಿನಿಸುಗಳನ್ನು ಹೋಮ್‍ಡೆಲವರಿ ನೀಡಲು ಅವ ಕಾಶ ಕಲ್ಪಿಸಲಾಗಿದೆ. ಮದುವೆ ಸಮಾರಂಭದಲ್ಲಿ 10ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಸಂಸ್ಕಾರದಲ್ಲಿ 5ಜನರು ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಉಳಿದಂತಹ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಬಂದ ವರನ್ನು 14ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.


ತುರ್ತು ವೈದ್ಯಕೀಯ ಸೇವೆಗೆ ಮಾತ್ರ ವಾಹನಗಳ ಬಳಕೆಗೆ ಅವಕಾಶ ನೀಡಲಾಗಿದೆ. ಸಂಬ ಸಂಬಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ತೋರಿಸಬೇಕು. ತುರ್ತು ಸೇವೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಾಹನ ಬಳಕೆಗೆ ಅವಕಾಶವಿದೆ. ಗುರುತಿನ ಚೀಟಿ ಯನ್ನು ಕಡ್ಡಾಯವಾಗಿ ತೊರಿಸಬೇಕು ಎಂದರು.


ಇದನ್ನೂ ಓದಿ: LockDown: ದೆಹಲಿಯಲ್ಲಿ ಶೇ.2.5ಕ್ಕೆ ಇಳಿದ ಕೊರೋನಾ ಕೇಸ್; ಮೇ.31ರ ವರೆಗೆ ಲಾಕ್​ಡೌನ್ ವಿಸ್ತರಿಸಿದ ಕೇಜ್ರಿವಾಲ್


ಅಂಗಡಿ ಮುಂಗಟ್ಟುಗಳನ್ನು ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮೇ.28ರ ಬೆಳಿಗ್ಗೆ 6ಗಂಟೆಯವರೆಗೂ ಈ ನಿಯಮಗಳು ಜಾರಿಯಲ್ಲಿರಲಿದೆ ಎಂದ ಅವರು, ಜಿಲ್ಲಾಡಳಿತ ವಿಧಿಸಿರುವ ಲಾಕ್‍ಡೌನ್‍ಗೆ ಉತ್ತಮ ಸ್ವಂಧನೆ ದೊರಕಿದೆ. ಕೊರೊನಾ ಹರಡುವುದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದ ಜನರು ತಮ್ಮ ಊರುಗಳಿಗೆ ಯಾರು ಬರಬಾರದೆಂದು ರಸ್ತೆಗಳಿಗೆ ಬೇಲಿ ಹಾಕುವ ಮೂಲಕ ಸೋಂಕು ನಿಯಂತ್ರಣಕ್ಕೆ ಸ್ಪಂಧಿಸುತ್ತಿದ್ದಾರೆ ಎಂದು ತಿಳಿಸಿದರು.


ಇದನ್ನೂ ಓದಿ: Karnataka Covid Death: ರಾಜ್ಯದಲ್ಲಿ ಇಂದು 25,979 ಕೊರೋನಾ ಕೇಸ್ ಪತ್ತೆ, ಬರೋಬ್ಬರಿ 626 ಜನ ಸಾವು!


ಸೋಂಕಿತರನ್ನು ಮನೆಗಳಲ್ಲಿ ಹೋಮ್ ಐಸೋಲೇಶನ್ ಒಳಪಡಿಸುವುದರಿಂದ ಕುಟುಂಬ ದವರಿಗೆ ಸೋಂಕು ತಗುಲುತ್ತದೆ ಎಂಬ ಕಾರಣದಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸಿಸಿಸಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಓರ್ವ ಡಾಕ್ಟರ್, ಓರ್ವ ನರ್ಸ್ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಲಾಗಿದೆ ಸೋಂಕಿತರ ಆರೋಗ್ಯ ಸುಧಾರಿಸುವರೆಗೂ ಸಿಸಿಸಿ ಕೇಂದ್ರದಲ್ಲಿ ಇರುವಂತೆ ಮನವಿ ಮಾಡಿದರು.


ಸೋಂಕಿತರ ಮನೆಗಳಿಗೆ ಸ್ಟಿಕರ್ ಅಂಟಿಸಲಾಗುತ್ತಿದೆ. ಸೋಂಕಿತರು ಮನೆಯಿಂದ ಹೊರ ಬಂದರೆ ಅಂತವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ದೇಶ ವಿದೇಶದಲ್ಲಿರುವ ಡಾಕ್ಟರ್ ಗಳ ತಂಡ ಸೇವೆಗೆ ಮುಂದೇ ಬಂದಿದ್ದು, ಅವರು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.

top videos
    First published: