• ಹೋಂ
 • »
 • ನ್ಯೂಸ್
 • »
 • ಜಿಲ್ಲೆ
 • »
 • ಗದಗ್​ನ ಸೂರಣಗಿಯಲ್ಲಿ ಕಗ್ಗೊಲೆ; ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾದನಾ ಗಂಡ?

ಗದಗ್​ನ ಸೂರಣಗಿಯಲ್ಲಿ ಕಗ್ಗೊಲೆ; ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾದನಾ ಗಂಡ?

ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದ ಒಂದು ಕೊಲೆ

ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದ ಒಂದು ಕೊಲೆ

ಗದಗ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿಯಲ್ಲಿ 38 ವರ್ಷದ ವ್ಯಕ್ತಿ ಭೀಕರ ಕೊಲೆ; ಆತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯಿಂದ ಈ ಕೊಲೆ ಆಗಿದೆ ಎಂಬ ಆರೋಪ ಕೇಳಿಬಂದಿದೆ.

 • Share this:

ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ. ಸೂರಣಗಿ ಗ್ರಾಮದ ಜಮೀನೊಂದರಲ್ಲಿ ನಡುರಾತ್ರಿ ವ್ಯಕ್ತಿಯೊಬ್ಬನನ್ನು ಭೀಕರ ಹತ್ಯೆ ನಡೆದಿದೆ. ಭಾನುವಾರ ಬೆಳ್ಳಂಬೆಳಗ್ಗೆ ನಡೆದ ಕೊಲೆಯ ಸುದ್ದಿ ಇಡೀ ಗ್ರಾಮವನ್ನೇ ಬೆಚ್ಚಿಬಿಳಿಸಿದೆ. ಅಷ್ಟಕ್ಕೂ ಕೊಲೆಯಾದ ವ್ಯಕ್ತಿಯಾರು? ಕೊಲೆ ಮಾಡಿದ್ದಾದರೂ ಯಾರೂ, ಯಾಕೆ ಅನ್ನೋದು ಇನ್ನೂ ನಿಗೂಢವಾಗಿದೆ. ಈ ಭೀಕರ ಕೊಲೆ ನಡೆದಿದ್ದು ಸೂರಣಗಿ ಗ್ರಾಮದಲ್ಲಿ. ಗ್ರಾಮದ 38 ವರ್ಷದ ಮರಿಯಪ್ಪ ಎಂಬಾತನೇ ಕೊಲೆಯಾದ ವ್ಯಕ್ತಿ. ಮರಿಯಪ್ಪ ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದವನು. ಆದ್ರೆ, ನಿನ್ನೆಯೂ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದಾನೆ. ಮನೆಗೆ ಬರುವಾಗ ಮಕ್ಕಳಿಗೆ ಅಂತ ಮೀನು ತಂದಿದ್ದಾನೆ. ಮಕ್ಕಳ ಕೈಗೆ ಮೀನು ಕೊಟ್ಟು ಚೆನ್ನಾಗಿ ಮೀನಿನ ಸಾರು ಮಾಡಿ ಅಂತ ಹೇಳಿ ಮತ್ತೆ ಮನೆಯಿಂದ ಹೊರಗೆ ಹೋಗಿದ್ದಾನೆ. ಆದ್ರೆ, ತಡರಾತ್ರಿ ಆದರೂ ತಂದೆ ಮನೆಗೆ ಬರಲೇ ಇಲ್ಲ. ಮರಿಯಪ್ಪನ ತಾಯಿ ರಾತ್ರಿ 11 ಗಂಟೆಯಾದ್ರೂ ಮಗ ಮನೆಗೆ ಬರಲೇ ಇಲ್ಲ ಅಂತ ಹುಡುಕಾಡಿದ್ದಾಳೆ.


ಆದ್ರೆ, ಬೆಳಗ್ಗೆ ಸುದ್ದಿ ಬಂದಿದ್ದು ಮಾತ್ರ ಮರಿಯಪ್ಪ ಮರ್ಡರ್ ಆಗಿದ್ದಾನೆ ಅಂತ. ಆಗ ಮೃತನ ತಾಯಿ, ಮಕ್ಕಳಿಗೆ ಬರಸಿಡಿಲು ಬಂಡಿದಂತಾಗಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಭೀಕರವಾಗಿ ಕೊಲೆಯಾಗಿದ್ದ ಮರಿಯಪ್ಪ ದೇಹ ನೋಡಿ ಇಡೀ ಕುಟುಂಬವೇ ಕಂಗಾಲಾಗಿದೆ. ಕುಟುಂಬಸ್ಥರು ಕಣ್ಣೀರು ಹಾಕುತ್ತಿರೋ ದೃಶ್ಯ ಮಾತ್ರ ಇಡೀ ಗ್ರಾಮಸ್ಥರ ಕಣ್ಣಲ್ಲಿ ನೀರು ಬರುವಂತೆ ಮಾಡಿತು. ಆದ್ರೆ, ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಅಂತ ಕೊಲೆಯಾದ ಮರಿಯಪ್ಪನ ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ, ಮರಿಯಪ್ಪ ಕಾಣೆಯಾದಾಗ ತಾಯಿ ಹುಡುಕಾಡುತ್ತಿದ್ದರೂ ಆತನ ಹೆಂಡತಿ ಏನೂ ಆಗಿಯೇ ಇಲ್ಲವೆಂಬಂತೆ ನಿದ್ದೆ ಮಾಡಿದ್ದಳು ಎಂಬ ಆರೋಪ ಇದೆ.


ಇದನ್ನೂ ಓದಿ: ಬಸವಣ್ಣನ ಬಗ್ಗೆ ಅರುಣ್ ಸಿಂಗ್ ತಿಳಿದುಕೊಳ್ಳಲಿ ಎಂದ ಜಾರಕಿಹೊಳಿ; ಮಂಗಲಾ ಅನನುಭವಿ ಎಂದ ಸಿದ್ದರಾಮಯ್ಯಗೆ ಬಿಜೆಪಿಗರ ಕಿಡಿ


ಕೊಲೆಯಾದ ಮರಿಯಪ್ಪನ ಪತ್ನಿ ಮಂಜುಳಾ ಜೊತೆ ಇದೇ ಓಣಿಯ ಕೋಟೆಪ್ಪ ಫಕೀರಪ್ಪ ಜಗಟೆಪ್ಪನವರ ಜೊತೆ ಅನೈತಿಕ ಸಂಬಂಧ ಇತ್ತಂತೆ. ಆಗ ಓಣಿಯ ಹಿರಿಯರು ಇಬ್ಬರಿಗೂ ಬುದ್ಧಿ ಮಾತು ಹೇಳಿದ್ದಾರೆ. ಪತ್ನಿ ದಾರಿ ತಪ್ಪಿದರೂ ಮರಿಯಪ್ಪ ಮಾತ್ರ ಹೆಂಡತಿ ಬೇಕು ಹೆಂಡತಿ ಅಂತ ಪತ್ನಿ ಮಂಜುಳಾಗೆ ಬುದ್ದಿ ಹೇಳಿ ಮತ್ತೆ ಸಂಸಾರ ಮಾಡಿದ್ದಾನೆ. ಆದರೂ ಪತ್ನಿ ಮಂಜುಲಾ ತನ್ನ ಚಾಳಿ ಬಿಡದೇ ಇನಿಯನ ಜೊತೆ ಚಕ್ಕಂದ ಆಡುತ್ತಿದ್ದಳಂತೆ. ಇದು ಪತಿ ಮರಿಯಪ್ಪನಿಗೆ ಗೊತ್ತಾಗಿದೆ. ಮೂರು ಮಕ್ಕಳು ಇದ್ದಾರೆ ಅನ್ನೋ ಪರಿವೆಯೇ ಇಲ್ಲದೆ ದಾರಿ ತಪ್ಪಿದ ಪತ್ನಿ ಮಂಜುಳಾ ತನ್ನ ಚಾಳಿ ಮುಂದುವರೆಸಿದ್ದಾಳೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.


ಮಂಜುಳಾ ಜೊತೆ ಸಂಬಂಧ ಇಟ್ಟುಕೊಂಡಿರುವ ಕೋಟೆಪ್ಪ ಫಕೀರಪ್ಪ ಜಗಟೆಪ್ಪನವರನೇ ಮರಿಯಪ್ಪನ ಕೊಲೆ ಮಾಡಿದ್ದಾನೆ ಎಂದು ಮರಿಯಪ್ಪನ ಕುಟುಂಬ ಆರೋಪಿಸಿದೆ. ಊರ ಹೊರವಲಯದ ನಡುರಸ್ತೆಯಲ್ಲೇ ನಡುರಾತ್ರಿ ಕೊಚ್ಚಿ ಕೊಲೆ ಮಾಡಿದ್ದಾರೆ. ಆ ಮೇಲೆ ರಸ್ತೆಯಿಂದ ಎಳೆದು ಜಮೀನಿನಲ್ಲಿ ಹಾಕಿದ್ದಾರೆ. ಕೊಲೆ ಸುದ್ದಿ ಗೊತ್ತಾಗುತ್ತಿದ್ದಂತೆ ಎಸ್ಪಿ ಎನ್ ಯತೀಶ್, ಡಿವೈಎಸ್​ಪಿ ಶಿವಾನಂದ, ಸಿಪಿಐ ವಿಕಾಸ್ ಲಮಾಣಿ ಸ್ಥಳಕ್ಕೆ ಧಾವಿಸಿದ್ದಾರೆ. ಕೊಲೆಯ ಭೀಕರತೆ ಅರಿತ ಅಧಿಕಾರಿಗಳು ಸ್ವಾನ ದಳ ತರಿಸಿದ್ದಾರೆ. ಆದ್ರೆ ಶಾನ ಮಾತ್ರ ಕೊಲೆಯಾದ ಸ್ಥಳದಿಂದ ನೇರವಾಗಿ ಹೋಗಿದ್ದು ಕೊಲೆಯಾದ ಆರೋಪಿ ಮನೆ ಹತ್ತಿರವೇ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.


ಇದನ್ನೂ ಓದಿ: ಮಲೈ ಮಹದೇಶ್ವರಬೆಟ್ಟ: 400 ಕೆಜಿ ಅನುಪಯುಕ್ತ ಬೆಳ್ಳಿ ಕರಗಿಸಿ ಶುದ್ದ ಗಟ್ಟಿಗಳನ್ನು ಮಾಡುವ ಪ್ರಕ್ರಿಯೆ ಆರಂಭ


ಮುದ್ದಾದ ಮೂರು ಮಕ್ಕಳ ಸಂಸಾರ ಬಿಟ್ಟು ಇನಿಯನ ಜೊತೆ ಚೆಕ್ಕಂದ ಆಡಿದ ಪತ್ನಿ ಮಂಜುಳಾ ಎದೆಯಲ್ಲೂ ಈಗ ಢವಢವ ಶುರುವಾಗಿದೆ. ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ. ದಾರಿ ತಪ್ಪಿದ ಹೆಂಡತಿ ಅಂತ ಗೊತ್ತಿದ್ರೂ ಕೂಡ, ಪತ್ನಿ ತಪ್ಪು ಮನ್ನಿಸಿ ಸಂಸಾರ ಮಾಡಿದ ಗಂಡನನ್ನೇ ಇನಿಯ ಹಾಗೂ ಪತ್ನಿ ಸೇರಿ ಮುಹೂರ್ತ ಇಟ್ರಾ ಅನ್ನೋ ಗುಸುಗುಸು ಸುರಣಗಿ ಗ್ರಾಮದಲ್ಲಿ ಹೇಳಿಬರುತ್ತಾ ಇದೆ. ಅದೇನೇ ಇರಲಿ ಏನೂ ಅರಿಯದ ಮೂರು ಮಕ್ಕಳು ಮಾತ್ರ ಪ್ರೀತಿಯ ತಂದೆ ಇಲ್ಲದೇ ಅನಾಥವಾಗಿದ್ದು ಮಾತ್ರ ದುರಂತವೇ ಸರಿ.

top videos


  ವರದಿ: ಸಂತೋಷ ಕೊಣ್ಣೂರ

  First published: