HOME » NEWS » District » 3 THOUSAND DOSE CORONAVIRUS VACCINE CAME TO YADAGIRI DISTRICT RHHSN NMPG

ಕೋವ್ಯಾಕ್ಸಿನ್ ವಿತರಣೆಗೆ ಯಾದಗಿರಿಯಲ್ಲಿ ಸಿದ್ದತೆ; ಜಿಲ್ಲೆಗೆ 3 ಸಾವಿರ ಡೋಸ್, 5 ಕೇಂದ್ರಗಳಲ್ಲಿ ಲಸಿಕೆ ವಿತರಣೆ

ನೂತನ ಜಿಲ್ಲಾಸ್ಪತ್ರೆ, ಸುರಪುರ ಹಾಗೂ ಶಹಾಪುರ ತಾಲೂಕು ಆಸ್ಪತ್ರೆ ಯ ಎರಡು ಕೇಂದ್ರಗಳು, ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರ, ಸುರಪುರ ನಗರ ಆರೋಗ್ಯ ಕೇಂದ್ರ ಈ 5 ಕೇಂದ್ರಗಳಿಗೆ ಇಂದು ಲಸಿಕೆ ವಿತರಣೆ ಮಾಡಲಾಗುತ್ತಿದೆ. ವ್ಯಾಕ್ಸಿನ್ ವೆಹಿಕಲ್ ಮೂಲಕ ಕೋಲ್ಡ್ ಸೌಕರ್ಯಗಳೊಂದಿಗೆ ಎಲ್ಲಾ ಐದು ಕೇಂದ್ರಗಳಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ.

news18-kannada
Updated:January 15, 2021, 2:30 PM IST
ಕೋವ್ಯಾಕ್ಸಿನ್ ವಿತರಣೆಗೆ ಯಾದಗಿರಿಯಲ್ಲಿ ಸಿದ್ದತೆ; ಜಿಲ್ಲೆಗೆ 3 ಸಾವಿರ ಡೋಸ್, 5 ಕೇಂದ್ರಗಳಲ್ಲಿ ಲಸಿಕೆ ವಿತರಣೆ
ಕೊರೋನಾ ಲಸಿಕೆ
  • Share this:
ಯಾದಗಿರಿ; ದೇಶದ ಜನರನ್ನು ಭಯಗೊಳಿಸಿ ಜನರ ಸಾವಿಗೆ ಕಾರಣವಾದ ಕೊರೋನಾ ಕಾಯಿಲೆಗೆ ಕಡಿವಾಣ ಹಾಕಲು ಈಗಾಗಲೇ ಕೇಂದ್ರ ಸರಕಾರ ದೇಶಾದ್ಯಂತ ಕೋವ್ಯಾಕ್ಸಿನ್ ಪೂರೈಕೆ ಮಾಡಿದೆ. ನಾಳೆ ರಾಷ್ಟಾದ್ಯಂತ ಕೋವ್ಯಾಕ್ಸಿನ್ ವಿತರಣೆಯ ಅಭಿಯಾನ ನಡೆಸಲು ಕೇಂದ್ರ ಸರಕಾರ ಸಜ್ಜಾಗಿದೆ. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಲಸಿಕೆ ವಿತರಣೆಯಿಂದ ದೇಶದ ಜನರ ಆತಂಕ ನಿವಾರಣೆಯಾಗಿದೆ. ಯಾದಗಿರಿ ಜಿಲ್ಲೆಗೆ ಕೂಡ ಕೇಂದ್ರ ಸರಕಾರ 3 ಸಾವಿರ ಕೋವ್ಯಾಕ್ಸಿನ್ ಡೋಸ್ ಗಳನ್ನು ಪೂರೈಕೆ ಮಾಡಿದೆ. ಈಗಾಗಲೇ ನಿನ್ನೆ ಲಸಿಕೆಗಳನ್ನು ಕಲಬುರಗಿಯಿಂದ ಯಾದಗಿರಿಗೆ ವಿತರಣೆ ಮಾಡಲಾಗಿದೆ. ಲಸಿಕೆ ಸಂಗ್ರಹಣೆ ಉಗ್ರಾಣವನ್ನು ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ, ಸಿಇಓ ಶಿಲ್ಪಾ ಶರ್ಮಾ ಅವರು ಉದ್ಘಾಟನೆ ಮಾಡಿದರು. ನಂತರ ಡಿಎಚ್ ಓ ಕಚೇರಿಯ ಕೋಲ್ಡ್ ಸ್ಟೋರ್ ರೂಂನಲ್ಲಿ ಲಸಿಕೆ ಸಂಗ್ರಹಣೆ ಮಾಡಲಾಗಿದೆ.

ಡಿಎಚ್ ಓ ಭೇಟಿ ಪರಿಶೀಲನೆ...!

ಇಂದು ಯಾದಗಿರಿ ಜಿಲ್ಲೆಯ 5 ಕೇಂದ್ರಗಳಿಗೆ ಕೋವ್ಯಾಕ್ಸಿನ್ ಪೂರೈಕೆ ಮಾಡಲಾಗುತ್ತಿದ್ದು, ಪೂರೈಕೆ ಮಾಡುತ್ತಿರುವ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ‌ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಅವರು ಕೋಲ್ಡ್ ಸ್ಟೋರ್ ರೂಂ ಪರಿಶೀಲನೆ ಮಾಡಿ ಅಧಿಕಾರಿಗಳಿಂದ ಅಗತ್ಯ ಸಿದ್ದತೆ ಮಾಹಿತಿ ಪಡೆದರು.

ಇದನ್ನು ಓದಿ: ಹೌಸಿಂಗ್ ಪ್ರಾಜೆಕ್ಟ್ ಜಮೀನು ವಂಚನೆ: ಬಿಎಸ್​ವೈ, ನಿರಾಣಿ ರಾಜೀನಾಮೆಗೆ ಅಲಂ ಪಾಷಾ ಆಗ್ರಹ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಅವರು ಮಾತನಾಡಿ, ಯಾದಗಿರಿ ಜಿಲ್ಲೆಗೆ ಈಗಾಗಲೇ ಕೇಂದ್ರ ಸರಕಾರ 3 ಸಾವಿರ ಕೋವ್ಯಾಕ್ಸಿನ್ ಲಸಿಕೆಯನ್ನು ಪೂರೈಕೆ ಮಾಡಿದೆ. ಜಿಲ್ಲೆಯಲ್ಲಿ 5 ಲಸಿಕೆ ವಿತರಣೆ ಕೇಂದ್ರಗಳನ್ನು ಆರಂಭ ಮಾಡಲಾಗಿದ್ದು, ಪ್ರತಿ ಕೇಂದ್ರಕ್ಕೆ 100 ಲಸಿಕೆ ನೀಡಲಾಗುತ್ತಿದೆ. ನಾಳೆ 500 ಜನ ಕೊರೋನಾ ವಾರಿಯರ್ಸ್‌ ಗಳಿಗೆ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ನೂತನ ಜಿಲ್ಲಾಸ್ಪತ್ರೆ, ಸುರಪುರ ಹಾಗೂ ಶಹಾಪುರ ತಾಲೂಕು ಆಸ್ಪತ್ರೆ ಯ ಎರಡು ಕೇಂದ್ರಗಳು, ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರ, ಸುರಪುರ ನಗರ ಆರೋಗ್ಯ ಕೇಂದ್ರ ಈ 5 ಕೇಂದ್ರಗಳಿಗೆ ಇಂದು ಲಸಿಕೆ ವಿತರಣೆ ಮಾಡಲಾಗುತ್ತಿದೆ. ವ್ಯಾಕ್ಸಿನ್ ವೆಹಿಕಲ್ ಮೂಲಕ ಕೋಲ್ಡ್ ಸೌಕರ್ಯಗಳೊಂದಿಗೆ ಎಲ್ಲಾ ಐದು ಕೇಂದ್ರಗಳಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ನಾಳೆ ಪ್ರತಿ ಕೇಂದ್ರದಲ್ಲಿ 100 ಜನ ಕೊರೋನಾ ವಾರಿಯರ್ಸ್‌ ಗಳಿಗೆ ಲಸಿಕೆ ಕೊಡಲಾಗುತ್ತಿದೆ. ಈಗಾಗಲೇ ಆರೋಗ್ಯ ಇಲಾಖೆಯು 5 ಸಾವಿರ ಕೊರೋನಾ ವಾರಿಯರ್ಸ್‌ ಗಳಿಗೆ ಲಸಿಕೆ ವಿತರಣೆ ಮಾಡಲು ಪಟ್ಟಿ ಸಿದ್ದತೆ ಮಾಡಿಕೊಂಡಿದೆ. ನಾಳೆ 500 ವಾರಿಯರ್ಸ್‌ ಗಳಿಗೆ ಲಸಿಕೆ ನೀಡಿದ ನಂತರ ಮತ್ತೆ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತದೆ. 5 ಕೇಂದ್ರಗಳಿಗೆ ಲಸಿಕೆ ವಿತರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಲಸಿಕೆ ವಿತರಣೆ ವಾಕ್ಸಿನ್ ವೆಹಿಕಲ್ ಮೂಲಕ ಲಸಿಕೆ ಪೂರೈಕೆ ಮಾಡಲಾಗುತ್ತಿದೆ.
Published by: HR Ramesh
First published: January 15, 2021, 2:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories