HOME » NEWS » District » 3 THOUSAND CRORE BRIBE TAKE IN THE COVID NAME SAYS SIDDARAMAIAH RHHSN

ಕೋವಿಡ್‌ನಲ್ಲೇ 3 ಸಾವಿರ ಕೋಟಿ ಲಂಚ ಹೊಡೆದಿದ್ದಾರೆ; ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗಂಭೀರ ಆರೋಪ

ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ಆರಂಭಿಸಿದ್ದು, ಪ್ರತಿ ಜಿಲ್ಲೆಯಲ್ಲೂ ಜನಯಾತ್ರೆ ಸಮಾವೇಶ ನಡೆಸುತ್ತಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ಸಮಾವೇಶ ನಡೆಸಲಾಗಿದೆ. ಯಾವ ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದೆಯೋ ಆ ಕ್ಷೇತ್ರಗಳಿಂದಲೇ ಪಕ್ಷದ ಬಲವರ್ಧನೆಗೆ ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಾಗುತ್ತಿದೆ.

news18-kannada
Updated:March 3, 2021, 7:25 PM IST
ಕೋವಿಡ್‌ನಲ್ಲೇ 3 ಸಾವಿರ ಕೋಟಿ ಲಂಚ ಹೊಡೆದಿದ್ದಾರೆ; ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗಂಭೀರ ಆರೋಪ
ಸಿದ್ದರಾಮಯ್ಯ
  • Share this:
ಚಿಕ್ಕಬಳ್ಳಾಪುರ: 2020-21 ವರ್ಷವನ್ನು ಸಂಘರ್ಷದ ವರ್ಷ ಎಂದು ಘೋಷಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಜನರ ಶೋಷಣೆ ಮಾಡುತ್ತಿವೆ. ಯಾವೊಬ್ಬ ಜನರೂ ಕೂಡ ನೆಮ್ಮದಿಯಿಂದ ಬದುಕುತ್ತಿಲ್ಲ. ಮೋದಿ ಹಾಗೂ ಯಡಿಯೂರಪ್ಪನವರ ಜನ ವಿರೋಧಿ, ರೈತ ವಿರೋಧಿ, ಬಡ ವಿರೋಧಿ ನೀತಿಗಳೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಚಿಕ್ಕಬಳ್ಳಾಪುರದಲ್ಲಿ ಇಂದಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಜನಧ್ವನಿ ಯಾತ್ರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಮಾತೆತ್ತಿದರೆ ದುಡ್ಡಿಲ್ಲ ಅಂತಾರೆ. ಕೊರೋನಾ ಕಾರಣ ಹೇಳಿ ನುಣುಚಿಕೊಳ್ಳುವ ಯತ್ನ ಮಾಡುತ್ತಾರೆ.  ಕೋವಿಡ್‌ನಲ್ಲೇ 3 ಸಾವಿರ ಕೋಟಿ ಲಂಚ ಹೊಡೆದಿದ್ದಾರೆ. ನಾನು ದಾಖಲೆ ಸಮೇತ ವಿಧಾನಸೌಧದಲ್ಲಿ ಮಾತನಾಡಿದ್ದೆ. ಅದನ್ನು ಆರೋಗ್ಯ ಸಚಿವ ಸುಧಾಕರ್ ಒಪ್ಪಿಕೊಂಡರು. ಸಮಸ್ಯೆಗೆ ಪರಿಹಾರವ ಕೊಡಲು ಆಗುತ್ತಿಲ್ಲ. ಯಾವುದೇ ಹೊಸ ಕೆಲಸ ಮಾಡಿದ್ದಾರಾ?. ಅಧಿಕಾರ ನಡೆಸದೆ ಹೋದರೆ ಕುರ್ಚಿಬಿಟ್ಟು ಇಳಿಯಿರಿ ಎಂದು ಆಗ್ರಹಿಸಿದರು.

ಯಡಿಯೂರಪ್ಪ ನಿಂದೇನಪ್ಪಾ,...? ನಿಂದೇನಪ್ಪಾ ಯಡಿಯೂರಪ್ಪ.. ನಿನ್ನದು ಬರಿ ಜೀರೋ. ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದರು. ಅವರ ಮಗ ಆರ್‌ಟಿಜಿಎಸ್ ಮೂಲಕ ಲಂಚ ಪಡೆಯುತ್ತಾನೆ. ಲಂಚದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಜಹಾಗೂ ಅವರ ಮಗ ಬಿ.ವೈ.ವಿಜಯೇಂದ್ರ ವಿರುದ್ಧ ಹರಿಹಾಯ್ದರು.

ಇದನ್ನು ಓದಿ: Cabinet Meeting | ಮೀಸಲಾತಿ ಬೇಡಿಕೆ; ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಗೆ ಸರ್ಕಾರ ನಿರ್ಧಾರ

ಎತ್ತಿನಹೊಳೆ ವಿರೋಧಿಸಿದವರು ಮಣ್ಣಿನ ಮಕ್ಕಳು. ಜೆಡಿಎಸ್ ಎತ್ತಿನಹೊಳೆ ಯೋಜನೆಗೆ ವಿರೋಧಿಸಿತ್ತು. 13 ಸಾವಿರ ಕೋಟಿ ಹಣ ನೀಡಿದ್ದೆವು. ಕೋಲಾರಕ್ಕೆ ಕೆ.ಸಿ.ವ್ಯಾಲಿ, ಚಿಕ್ಕಬಳ್ಳಾಪುರಕ್ಕೆ ಹೆಚ್.ಎನ್.ವ್ಯಾಲಿ ತಂದ್ವಿ. ಬೈ ಎಲೆಕ್ಷನ್‌ನಲ್ಲಿ ನಾವು ಸೋತಿದ್ದೇವೆ.  ಯಾವ ಕಾರಣಕ್ಕೂ ಮತ್ತೊಮ್ಮೆ ಇಲ್ಲಿ ಸೋಲಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಜನಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರು, ಕೋಲಾರ ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ದೊಡ್ಡದು. ಮುಖ್ಯಮಂತ್ರಿಯನ್ನು ಪಡೆದ ಗಂಡು ಭೂಮಿ. ಮೋದಿ ಬಂದ ಮೇಲೆ ಸ್ವತಂತ್ರವೇ ಅತಂತ್ರವಾಗಿದೆ. ಉದ್ಯೋಗ ಸೃಷ್ಟಿ ಇಲ್ಲದೇ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಮೋದಿ ಮೋದಿ ಎನ್ನುತ್ತಿದ್ದವರು ಈಗ ಡಿಕೆ ಡಿಕೆ ಎನ್ನುತ್ತಿದ್ದಾರೆ.  ಸಿದ್ದರಾಮಯ್ಯ ಅವರನ್ನು ಅನ್ನದಾತ ಅನ್ನದಾತ ಎನ್ನುತ್ತಿದ್ದಾರೆ. ಇವರಿಬ್ಬರ ಜೋಡಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನೆಯಾಗಲಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ಆರಂಭಿಸಿದ್ದು, ಪ್ರತಿ ಜಿಲ್ಲೆಯಲ್ಲೂ ಜನಯಾತ್ರೆ ಸಮಾವೇಶ ನಡೆಸುತ್ತಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ಸಮಾವೇಶ ನಡೆಸಲಾಗಿದೆ. ಯಾವ ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದೆಯೋ ಆ ಕ್ಷೇತ್ರಗಳಿಂದಲೇ ಪಕ್ಷದ ಬಲವರ್ಧನೆಗೆ ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಿನಿಂದಲೇ ತಯಾರಾಗುತ್ತಿದೆ.
Published by: HR Ramesh
First published: March 3, 2021, 7:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories