2nd Standard Poem: ವಿವಾದದ ಕಿಡಿ ಹೊತ್ತಿಸಿದ 2ನೇ ತರಗತಿಯ ಈ ಕವಿತೆ; ಅದರಲ್ಲಿ ಅಂತಹದ್ದೇನಿದೆ?

ಗೋ ನಾಟ್ ಟು ಟೆಂಪಲ್ ಎನ್ನುವ ಶೀರ್ಷಿಕೆಯಡಿ ಇರುವ ಈ ಕವಿತೆಯಲ್ಲಿ ಎಳೆಯ ಮನಸ್ಸುಗಳಲ್ಲಿ ಹಿಂದೂ ಧರ್ಮ ಹಾಗೂ ಅದರ ಆಚರಣೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.

2ನೇ ತರಗತಿ ಪದ್ಯ

2ನೇ ತರಗತಿ ಪದ್ಯ

  • Share this:
ದಕ್ಷಿಣ ಕನ್ನಡ(ಅ.15): ಕರ್ನಾಟಕ ಸರಕಾರದ(Karnataka Governmnet) ಶಿಕ್ಷಣ ಇಲಾಖೆ (Education Department) ಹೊರತಂದಿರುವ ಎರಡನೇ ತರಗತಿಯ(2nd Standard) ಇಂಗ್ಲಿಷ್ ಪಠ್ಯ ಪುಸ್ತಕ(English Text book) ಇದೀಗ ವಿವಾದದ ಕಿಡಿಯಾಗಿ ಮಾರ್ಪಟ್ಟಿದೆ. ರವೀಂದ್ರನಾಥ ಟಾಗೋರ್ ಬರೆದಿರುವ ಕವಿತೆಯೊಂದನ್ನು ಈ ಪುಸ್ತಕದಲ್ಲಿ ಅಳವಡಿಸಿಕೊಂಡಿದ್ದು, ಈ ಕವಿತೆಯಲ್ಲಿರುವ ಅಂಶಗಳು ಹಿಂದೂಪರ ಸಂಘಟನೆಗಳ(Pro Hindu associations) ಆಕ್ರೋಶಕ್ಕೆ ಕಾರಣವಾಗಿದೆ. ಗೋ ನಾಟ್ ಟು ಟೆಂಪಲ್(Go to Not to Temple) ಎನ್ನುವ ಶೀರ್ಷಿಕೆಯಡಿ(Title) ಇರುವ ಈ ಕವಿತೆಯಲ್ಲಿ ಎಳೆಯ ಮನಸ್ಸುಗಳಲ್ಲಿ ಹಿಂದೂ ಧರ್ಮ ಹಾಗೂ ಅದರ ಆಚರಣೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.

ಪದ್ಯದಲ್ಲಿ ಏನಿದೆ?

ಈ ಕವಿತೆಯಲ್ಲಿ ದೇವಸ್ಥಾನಕ್ಕೆ ಹೋಗೋದು ಬೇಡ, ದೇವರಿಗೆ ಹೂವು ಅರ್ಪಿಸೋದು ಬೇಡ, ದೇವರ ಮುಂದೆ ಮಂಡಿಯೂರಿ ಪ್ರಾರ್ಥಿಸುವ ಬೇಡ. ಇವುಗಳ ಬದಲು ಅಗತ್ಯ ಇರುವವರಿಗೆ ನೆರವಾಗೋಣ ಮೊದಲಾದ ವಿಚಾರಗಳನ್ನು ಹೇಳಲಾಗಿದೆ.

ಪೋಷಕರಿಂದಲೂ ಆಕ್ರೋಶ

ಪ್ರೌಢಾವಸ್ಥೆಯಲ್ಲಿರುವ ಮಕ್ಕಳಿಗೆ ತಿಳಿಸಬೇಕಾದ ಈ ರೀತಿಯ ವಿಚಾರಗಳನ್ನು ಎರಡನೇ ತರಗತಿಯ‌ ಮಕ್ಕಳ ಮೇಲೆ ಹೇರುವಂತಹ ಪ್ರಯತ್ನ ಈ ಕವಿತೆಯ ಮೂಲಕ ನಡೆದಿದೆ ಎಂದು ಮಕ್ಕಳ ಪೋಷಕರೂ ಆರೋಪಿಸಿದ್ದಾರೆ. ಕೇವಲ ಹಿಂದೂ ಧರ್ಮಕ್ಕೆ ಸಂಬಂಧಿಸಿದ ದೇವಸ್ಥಾನಗಳ ಬಗ್ಗೆ ಮಾತ್ರ ಈ ಕವಿತೆಯಲ್ಲಿ ಉಲ್ಲೇಖಿಸಿದ್ಧು, ಒಂದು ವೇಳೆ ಜಾತ್ಯಾತೀತತೆಯನ್ನು ಮಕ್ಕಳಿಗೆ ಬೋಧಿಸುವ ಉದ್ಧೇಶವಿದ್ದಲ್ಲಿ, ದೇವಸ್ಥಾನಗಳ ಜೊತೆ ಮಸೀದಿ ಹಾಗೂ ಚರ್ಚ್ ಗಳನ್ನೂ ಸೇರಿಸಿ ಕವಿತೆಯಲ್ಲಿ ಮಾರ್ಪಾಡು ಮಾಡಿ ಎನ್ನುವ ಒತ್ತಾಯವನ್ನೂ ಹಿಂದೂ ಸಂಘಟನೆಗಳು ಮಾಡಲಾರಂಭಿಸಿದೆ.

ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮೂಲಕ ಈ ಪಠ್ಯ ಪುಸ್ತಕವನ್ನು ಹೊರತರಲಾಗಿದೆ. ಈ ಪುಸ್ತಕವನ್ನು ಹೊರತಂದು ಹಲವು ದಿನಗಳು ಕಳೆದಿದ್ದು,ಇದೀಗ ಈ ಪಠ್ಯ ಪುಸ್ತಕದ ನಿರ್ದಿಷ್ಟ ಪೇಜ್ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಲಾರಂಭಿಸಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಹಿಂದೂ ಸಂಘಟನೆಗಳು, ಅದರಲೂ ಭಜರಂಗದಳ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದು, ಸರಕಾರ ಹಾಗೂ ಶಿಕ್ಷಣ ಇಲಾಖೆ ತಕ್ಷಣವೇ ಈ ಕವಿತೆಯನ್ನು ಪುಸ್ತಕದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದೆ.

ಇದನ್ನೂ ಓದಿ:Morning Digest: ಅ.17ರವರೆಗೆ ರಾಜ್ಯದಲ್ಲಿ ಮಳೆ, ಜಂಬೂ ಸವಾರಿಗೆ ಕ್ಷಣಗಣನೆ, ಚಿನ್ನ-ಬೆಳ್ಳಿ ದರ ಏರಿಕೆ; ಬೆಳಗಿನ ಟಾಪ್ ನ್ಯೂಸ್​ಗಳು

ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ  ಭಜರಂಗದಳದ ಪ್ರಾಂತ್ಯ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಕೇವಲ ಹಿಂದೂ ಧರ್ಮವನ್ನು ಕೇಂದ್ರೀಕರಿಸಿ ಧರ್ಮವನ್ನು ಹೀನಾಯವಾಗಿ ಬಿಂಬಿಸುವ ಇಂಥಹ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ಇದೀಗ ಎಳೆಯ ಮಕ್ಕಳ ಪಠ್ಯದಲ್ಲೂ ಹಿಂದೂ ಧರ್ಮ ಹಾಗೂ ಆಚರಣೆಯ ಬಗ್ಗೆ ನಿರ್ಲಕ್ಷ್ಯ ತೋರಿಸುವಂತಹ ಪಠ್ಯಗಳನ್ನು ಅಳವಡಿಸುವಂತಹ ವ್ಯವಸ್ಥೆಗಳು ನಡೆಯುತ್ತಿದೆ. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ಗಮನಹರಿಸಬೇಕು. ಶಿಕ್ಷ ಸಚಿವರು ವಿವಾದಿತ ಕವಿತೆಯನ್ನು ತಕ್ಷಣವೇ ಪಠ್ಯದಿಂದ ತೆಗೆಯುವ ಕೆಲಸ ಮಾಡಬೇಕು. ಇಲ್ಲದೇ ಹೋದಲ್ಲಿ ಭಜರಂಗದಳ ರಾಜ್ಯದಾದ್ಯಂತ ಈ ವಿಚಾರವಾಗಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ಕೇವಲ ಹಿಂದೂ ಸಂಘಟನೆಗಳು ಮಾತ್ರವಲ್ಲದೆ ಮಕ್ಕಳ ಪೋಷಕರೂ ಇಂಥಹ ಪಠ್ಯಗಳನ್ನು ಮಕ್ಕಳಿಗೆ ಕಲಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಎಳೆಯ ಮಕ್ಕಳಿಗೆ ಇಂಥ ವಿಚಾರಗಳ ಅಗತ್ಯವಿಲ್ಲ. ಪ್ರೌಢಾವಸ್ಥೆಯಲ್ಲಿ ಕಲಿಸುವಂತಹ ವಿಚಾರವನ್ನು ಮಕ್ಕಳ ಮನಸ್ಸಿನಲ್ಲಿ ಹೇರುವ ಪ್ರಯತ್ನಗಳು ನಡೆಯಬಾರದು ಎನ್ನುತ್ತಾರೆ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಮಗುವಿನ ಪೋಷಕರಾದ ಸುನಿಲ್. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೂ ಗ್ರಾಸವಾಗಿದ್ದು, ಹಿಂದೂ ಧರ್ಮದ ಬಗ್ಗೆ ತತ್ಸಾರ ಮೂಡಿಸುವ ಪ್ರಕ್ರಿಯೆ ಶಾಲೆಗಳ ಮೂಲಕವೇ ನಡೆಯುತ್ತಿರುವುದಕ್ಕೆ ಭಾರೀ ಆಕ್ರೋಶವೂ ಕೇಳಿ ಬರಲಾರಂಭಿಸಿದೆ.
Published by:Latha CG
First published: