2nd PUC Karnataka Result 2020: ಭೀಮಾ ತೀರದಲ್ಲಿ ಅರಳಿದ ಪ್ರತಿಭೆ: ಕಲಾ ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದ ರೈತನ ಮಗಳು

ಇಡೀ ರಾಜ್ಯಕ್ಕೆ ಕಲಾ ವಿಭಾಗದಲ್ಲಿ 9ನೇ ಸ್ಥಾನ ಪಡೆದಿದ್ದಾಳೆ. ಕನ್ನಡ ಮಾಧ್ಯಮದಲ್ಲಿ ಪಿಯು ಓದಿರುವ ಪ್ರೀತಿ ಶ್ರೀಮಂತ ನಾರಾಯಣಕರ ಕನ್ನಡದಲ್ಲಿ 97, ಹಿಂದಿಯಲ್ಲಿ 97, ಇತಿಹಾಸದಲ್ಲಿ 96, ಸಮಾಜ ಶಾಸ್ತ್ರದಲ್ಲಿ 99, ರಾಜ್ಯ ಶಾಸ್ತ್ರದಲ್ಲಿ 97 ಮತ್ತು ಶಿಕ್ಷಣ ಶಾಸ್ತ್ರದಲ್ಲಿ 100 ಅಂಕ ಪಡೆಯುವ ಮೂಲಕ ಈಗ ಇತರ ವಿದ್ಯಾರ್ಥಿನಿಯರಿಗೆ ಮಾದರಿಯಾಗಿದ್ದಾಳೆ.

ಭೀಮಾ ತೀರದಲ್ಲಿ ಅರಳಿದ ಪ್ರತಿಭೆ: ಕಲಾ ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದ ರೈತನ ಮಗಳು

ಭೀಮಾ ತೀರದಲ್ಲಿ ಅರಳಿದ ಪ್ರತಿಭೆ: ಕಲಾ ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದ ರೈತನ ಮಗಳು

  • Share this:
ವಿಜಯಪುರ(ಜು.15): ಆಕೆ ತನ್ನ ತಂದೆ-ತಾಯಿಗೆ 7ನೇ ಮಗಳು.  ಪ್ರತಿದಿನ ಬೆಳಿಗ್ಗೆ 3 ಗಂಟೆಗೆ ಎದ್ದು 5 ಗಂಟೆಯವರೆಗೆ ಓದುತ್ತಿದ್ದಳು. 6 ಗಂಟೆಗೆ ಗ್ರಾಮಕ್ಕೆ ಬರುವ ಬಸ್ಸಿನ ಮೂಲಕ ಪಕ್ಕದ ಊರಿಗೆ ತೆರಳಿ ಅಕ್ಕರೆಯಿಂದ ಪಾಠ ಕಲಿತು ಈಗ ಸಕ್ಕರೆಯಂಥ ಸಾಧನೆ ಮಾಡಿದ್ದಾಳೆ. ಈಕೆ ದೇವರ ನಾವದಗಿ ಕೆಜಿಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ. 

ಹೆಸರು ಪ್ರೀತಿ.  ಶ್ರೀಮಂತ ಮತ್ತು ಇಂದಿರಾಬಾಯಿ ನಾರಾಯಣಕರ ದಂಪತಿಯ ಏಳನೇ ಮಗಳು. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಭೀಮಾ ತೀರದ ಕುಮಸಗಿ ಗ್ರಾಮದ ವಿದ್ಯಾರ್ಥಿನಿ. ಭೀಮಾ ತೀರದ ಈ ಯುವತಿ ಇದೀಗ ಇಡೀ ಜಿಲ್ಲೆ ಮತ್ತು ರಾಜ್ಯದ ಜನ ಮೆಚ್ಚುವಂಥ ಸಾಧನೆ ಮಾಡಿದ್ದಾಳೆ. ಬಡ ರೈತ ಕುಟುಂಬದ ಪ್ರೀತಿ ಶ್ರೀಮಂತ ನಾರಾಯಣಕರ ದ್ವಿತೀಯ ಪಿಯುಸಿ ಆರ್ಟ್ಸ್ ಪರೀಕ್ಷೆಯಲ್ಲಿ ಒಟ್ಟು 586 ಅಂಕಗಳನ್ನು ಗಳಿಸುವ ಮೂಲಕ ಅಂದರೆ ಶೇ. 97.66 ಮಾರ್ಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ.

ಇಡೀ ರಾಜ್ಯಕ್ಕೆ ಕಲಾ ವಿಭಾಗದಲ್ಲಿ 9ನೇ ಸ್ಥಾನ ಪಡೆದಿದ್ದಾಳೆ. ಕನ್ನಡ ಮಾಧ್ಯಮದಲ್ಲಿ ಪಿಯು ಓದಿರುವ ಪ್ರೀತಿ ಶ್ರೀಮಂತ ನಾರಾಯಣಕರ ಕನ್ನಡದಲ್ಲಿ 97, ಹಿಂದಿಯಲ್ಲಿ 97, ಇತಿಹಾಸದಲ್ಲಿ 96, ಸಮಾಜ ಶಾಸ್ತ್ರದಲ್ಲಿ 99, ರಾಜ್ಯ ಶಾಸ್ತ್ರದಲ್ಲಿ 97 ಮತ್ತು ಶಿಕ್ಷಣ ಶಾಸ್ತ್ರದಲ್ಲಿ 100 ಅಂಕ ಪಡೆಯುವ ಮೂಲಕ ಈಗ ಇತರ ವಿದ್ಯಾರ್ಥಿನಿಯರಿಗೆ ಮಾದರಿಯಾಗಿದ್ದಾಳೆ.

ಕಳೆದ ವರ್ಷ ದೇವರ ನಾದಗಿಯ ಈ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬರು ಶೇ.96 ಅಂಕ ಗಳಿಸಿದ್ದರು. ಈ ಬಾರಿ ಆ ದಾಖಲೆಯನ್ನು ಮುರಿಯಲು ಈ ಕಾಲೇಜಿನ ಪ್ರಿನ್ಸಿಪಾಲ್ ಎಂ.ಜಿ ಉಪ್ಪಾರ ಮತ್ತು ಸಿಬ್ಬಂದಿ ಈ ವಿದ್ಯಾರ್ಥಿನಿಯ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದರು. ಈ ವಿದ್ಯಾರ್ಥಿನಿಯೂ ಅಷ್ಟೇ, ಪ್ರತಿದಿನ ನಸುಕಿನಲ್ಲಿ 3 ಗಂಟೆಗೆ ಎದ್ದು ಓದಿ, ಆರು ಗಂಟೆಗೆ ಬಸ್ಸಿನ ಮೂಲಕ ಕುಮಸಗಿಯಿಂದ ದೇವರ ನಾವದಗಿವರೆಗೆ ಸಂಚರಿಸಿ ಅಲ್ಲಿ ಪಾಠ ಕೇಳಿ ಮನೆಗೆ ಬಂದು ಮತ್ತೆ ಓದುತ್ತಿದ್ದಳು.

ಈಗ ಆಕೆಯ ಸತತ ಪರಿಶ್ರಮ ಫಲ ನೀಡಿದೆ.  ಶ್ರೀಮಂತ ಮತ್ತು ಇಂದಿರಾಬಾಯಿ ನಾರಾಯಣಕರ ದಂಪತಿಗೆ ಏಳು ಹೆಣ್ಣು ಮಕ್ಕಳಿದ್ದು, ಕೊನೆಯ ಮಗಳು ಈಗ ಮನೆತನದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾಳೆ. ಭವಿಷ್ಯದ ಬಗ್ಗೆ ಕೇಳಿದಾಗ ಓದುತ್ತೇನೆ.  ಡಿಗ್ರಿ ಮಾಡ್ತೇನೆ ಎಂದು ಹೇಳಿದ ಈ ಯುವತಿ, ಡಿಗ್ರಿ ಮುಗಿದ ಮೇಲೆ ಮತ್ತೇನು ಕನಸುಗಳಿವೆ ಎಂದಾಗ ಮತ್ತೆ ಏದುತ್ತೇನೆ ಎಂದು ಹೇಳಿದ್ದು, ಆಕೆಯಲ್ಲಿರುವ ಮುಗ್ದತೆಗೆ ಸಾಕ್ಷಿಯಾಗಿದೆ.

ವಿಜಯಪುರ ಜಿಲ್ಲೆಯ ಈಗ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ಪಟ್ಟಿಯಲ್ಲಿ ಕೊನೆಯ ಅಂದರೆ 32ನೇ ಸ್ಥಾನದಲ್ಲಿದೆ. ಆದರೆ, ಸಿಂದಗಿಯ ಜ್ಞಾನ ಭಾರತಿ ಪಿಯು ಕಾಲೇಜಿನ ಮಾಳಪ್ಪ ನಿಂಗಪ್ಪ ಹೊಸಮನಿ ಮತ್ತು ಈಗ ದೇವರ ನಾವದಗಿಯ ಕೆಜಿಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೀತಿ ಶ್ರೀಮಂತ ನಾರಾಯಣಕರ ಇಬ್ಬರೂ ಕಲಾ ವಿಭಾಗದಲ್ಲಿ ಶೇ. 97.66 ಅಂಕಗಳನ್ನು ಪಡೆಯುವ ಮೂಲಕ ಮತ್ತು ರಾಜ್ಯಕ್ಕೆ ಕಲಾ ವಿಭಾಗದಲ್ಲಿ 9ನೇ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ವಿಜ್ಞಾನ ವಿಭಾಗದಲ್ಲಿ ಶೇ.95 ಪಡೆದ ಕೂಲಿ ಕಾರ್ಮಿಕರ ಮಗಳು: ಶಿಕ್ಷಣಕ್ಕೆ ಸಹಾಯ ಭರವಸೆ ನೀಡಿದ ಸಿಸಿ ಪಾಟೀಲ್​

ಇಲ್ಲಿ ಇನ್ನೊಂದು ವಿಶೇಷವೆಂದರೆ ಇಬ್ಬರೂ ಸಿಂದಗಿ ತಾಲೂಕಿನವರಾಗಿದ್ದಾರೆ. ಮಾಳಪ್ಪ ನಿಂಗಪ್ಪ ಹೊಸಮನಿ ತಮ್ಮ ತಂದೆ-ತಾಯಿಯ ನಾಲ್ಕು ಜನ ಪುತ್ರರು ಮತ್ತು ಮೂರು ಜನ ಪುತ್ರಿಯರಲ್ಲಿ ಕೊನೆಯ ಅಂದರೆ ಏಳನೇ ಮಗನಾಗಿದ್ದಾನೆ. ಅದರಂತೆ ನಾರಾಯಣಪುರ ದಂಪತಿಯ ಏಳು ಜನ ಹೆಣ್ಣು ಮಕ್ಕಳಲ್ಲಿ ಈ ವಿದ್ಯಾರ್ಥಿನಿ ಕೊನೆಯವಳು ಅಂದರೇ ಏಳನೆಯವಳಾಗಿರುವುದು ಕೂಡ ಗಮನಾರ್ಹವಾಗಿದೆ. ಇಬ್ಬರ ಪೋಷಕರೂ ರೈತರಾಗಿರುವುದು ಮತ್ತು ಬಸವ ನಾಡಿನ ಮಣ್ಣಿನ ಮಕ್ಕಳಲ್ಲಿರುವ ಅದ್ಭುತ ಪ್ರತಿಭೆಗಳಿಗೆ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ಸಾಕ್ಷಿಯಾಗಿದೆ.
Published by:Ganesh Nachikethu
First published: