HOME » NEWS » District » 2ND PLACE TO STATE OF CHANNAPATNA STUDENT IN COMMERCE SECTION RH

PUC Result 2020: ಕಾಮರ್ಸ್ ವಿಭಾಗದಲ್ಲಿ ಚನ್ನಪಟ್ಟಣದ ವಿದ್ಯಾರ್ಥಿನಿ ರಾಜ್ಯಕ್ಕೆ 2ನೇ ಸ್ಥಾನ; ಯುವತಿಯ ಸಾಧನೆಗೆ ಎಲ್ಲೆಡೆ ಪ್ರಶಂಸೆ

ಇಂಗ್ಲಿಷ್​ನಲ್ಲಿ- 96, ಕನ್ನಡ - 100, ಎಕಾನಾಮಿಕ್ಸ್ - 100, ಬ್ಯುಸಿನೆಸ್ ಸ್ಟಡೀಸ್ - 100, ಅಕೌಂಟ್ಸ್ - 100, ಕಂಪ್ಯೂಟರ್ ಸೈನ್ಸ್ - 100 ಅಂಕ ಗಳಿಸುವ ಮೂಲಕ 600 ಕ್ಕೆ 596 ಅಂಕಗಳಿಸಿ ಶೇ.99.03 ಪಡೆದು ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾಳೆ. 

news18-kannada
Updated:July 14, 2020, 7:30 PM IST
PUC Result 2020: ಕಾಮರ್ಸ್ ವಿಭಾಗದಲ್ಲಿ ಚನ್ನಪಟ್ಟಣದ ವಿದ್ಯಾರ್ಥಿನಿ ರಾಜ್ಯಕ್ಕೆ 2ನೇ ಸ್ಥಾನ; ಯುವತಿಯ ಸಾಧನೆಗೆ ಎಲ್ಲೆಡೆ ಪ್ರಶಂಸೆ
ರಾಜ್ಯಕ್ಕೆ 2ನೇ ಸ್ಥಾನ ಪಡೆದ ಬೃಂದಾಗೆ ಸಿಹಿ ತಿನಿಸುತ್ತಿರುವುದು.
  • Share this:
ರಾಮನಗರ; ಇಂದು ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿದ್ಯಾರ್ಥಿನಿ ಬೃಂದಾ.ಜೆ.ಎನ್ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸುವ ಮೂಲಕ ಚನ್ನಪಟ್ಟಣಕ್ಕೆ ಗೌರವ ತಂದಿದ್ದಾಳೆ.

ಜಗದಾಪುರ ಗ್ರಾಮದ ನಿವಾಸಿಯಾಗಿರುವ ಬೃಂದಾ ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಳು. 1ರಿಂದ 5 ರವರೆಗೆ ಜಗದಾಪುರ ಗ್ರಾಮದಲ್ಲಿ ಓದಿದ್ದ ಈಕೆ, 5ರಿಂದ 10ನೇ ತರಗತಿವರೆಗೆ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ದೊಡ್ಡಬಳ್ಳಾಪುರದಲ್ಲಿನ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಳು. ನಂತರ ಫಸ್ಟ್ ಪಿಯುಸಿ ವ್ಯಾಸಂಗವನ್ನು ಚನ್ನಪಟ್ಟಣದ ಕೇಂಬ್ರಿಡ್ಜ್ ನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿಗೆ ಮೈಸೂರಿನ ಬಿಜಿಎಸ್ ಕಾಲೇಜಿ ಸೇರ್ಪಡೆಯಾಗಿಈ ಸಾಧನೆ ಮಾಡಿದ್ದಾಳೆ.

ತಂದೆ ನಾಗೇಶ್, ತಾಯಿ ಕಮಲಾ ವ್ಯವಸಾಯ ಮಾಡಿಕೊಂಡು ಮಗಳನ್ನು ಓದಿಸುತ್ತಿದ್ದಾರೆ. ಬೃಂದಾಗೆ ಓರ್ವ ಸಹೋದರ, ಓರ್ವ ಸಹೋದರಿಯೂ ಇದ್ದಾರೆ. ಈ ಬಾರಿಯ ಪಿಯುಸಿಯಲ್ಲಿ ಬೃಂದಾ ಇಂಗ್ಲಿಷ್​ನಲ್ಲಿ- 96, ಕನ್ನಡ - 100, ಎಕಾನಾಮಿಕ್ಸ್ - 100, ಬ್ಯುಸಿನೆಸ್ ಸ್ಟಡೀಸ್ - 100, ಅಕೌಂಟ್ಸ್ - 100, ಕಂಪ್ಯೂಟರ್ ಸೈನ್ಸ್ - 100 ಅಂಕ ಗಳಿಸುವ ಮೂಲಕ 600 ಕ್ಕೆ 596 ಅಂಕಗಳಿಸಿ ಶೇ.99.03 ಪಡೆದು ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾಳೆ.

ಇದನ್ನು ಓದಿ: PUC Result 2020: ಕಲಾ ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದ ರೈತನ ಮಗನ ಸಾಹಸಗಾಥೆ
Youtube Video

ಇನ್ನು ಬೃಂದಾ ಸಾಧನೆಗೆ ಜಗದಾಪುರ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಂದೆ ನಾಗೇಶ್ ತಾಯಿ ಕಮಲಾ ಸಹ ನಮ್ಮ ಮಗಳು ಎಲ್ಲಿಯವರೆಗೆ ಓದುತ್ತಾಳೋ ಓದಲಿ. ನಾವು ಅವಳಿಗೆ ಓದಿಸುತ್ತೇವೆಂದು ತಿಳಿಸಿದ್ದಾರೆ. ಇನ್ನು ಬೃಂದಾ ಸಹ ಮಾತನಾಡಿ, ನಾನು ಮುಂದೆ ಸಿಎ ವ್ಯಾಸಂಗ ಮಾಡುತ್ತೇನೆ. ನಮ್ಮ ತಾಲೂಕಿಗೆ ಹೆಮ್ಮೆ ಬರುವಂತೆ ಸಾಧನೆ ಮಾಡಿ ತೋರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾಳೆ.
Published by: HR Ramesh
First published: July 14, 2020, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories