ಕೊಡಗಿನಲ್ಲಿ ಆಘಾತ ನೀಡಿದ ಕೊರೋನಾ ಮಹಾಮಾರಿ; ಒಂದೇ ದಿನ 26 ಕೇಸ್, ನೂರರ ಗಡಿ ದಾಟಿದ ಸಂಖ್ಯೆ

ಕಾವೇರಿ ಉಗಮಸ್ಥಾನ ತಲಕಾವೇರಿ, ಭಗಂಡೇಶ್ವರ ನೆಲೆಸಿರುವ ಬಾಗಮಂಡಲ ಸೇರಿದಂತೆ ಹಲವು ಪ್ರಮುಖ ಗ್ರಾಮಗಳಿಗೂ ಮಹಾಮಾರಿ ತನ್ನ ಕಬಂಧಬಾಹು ಚಾಚಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 122 ಪ್ರಕರಣಗಳು ದಾಖಲಾಗಿದ್ದು, 16 ಜನರು ಗುಣಮುಖರಾಗಿದ್ದಾರೆ.

news18-kannada
Updated:July 9, 2020, 9:42 PM IST
ಕೊಡಗಿನಲ್ಲಿ ಆಘಾತ ನೀಡಿದ ಕೊರೋನಾ ಮಹಾಮಾರಿ; ಒಂದೇ ದಿನ 26 ಕೇಸ್, ನೂರರ ಗಡಿ ದಾಟಿದ ಸಂಖ್ಯೆ
ಸಾಂದರ್ಭಿಕ ಚಿತ್ರ.
  • Share this:
ಕೊಡಗು (ಜುಲೈ 09): ಜಿಲ್ಲೆಯಲ್ಲಿ ಡೆಡ್ಲಿ ಕೊರೋನಾ ವೈರಸ್ ಆಘಾತ ನೀಡಿದೆ. ಇಂದು ಒಂದೇ ದಿನ 26 ಕೊರೋನಾ ಪಾಸಿಟಿವ್ ಕೇಸುಗಳು ದಾಖಲಾಗುವ ಮೂಲಕ ಕೊಡಗಿನ ಜನತೆಗೆ ಆತಂಕ ಉಂಟು ಮಾಡಿದೆ.

ಎಂಟು ತಿಂಗಳ ಮಗು, 9 ವರ್ಷದ ಬಾಲಕ ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರಿಗೆ ಕೊರೋನಾ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಈಗ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆದು ಶತಕವನ್ನು ದಾಟಿದೆ. ಕಕ್ಕಬ್ಬೆ, ಕಿರುಂದಾಡು, ಪಾರಾಣೆ, ಸಂಪಾಜೆ, ಕುಟ್ಟ, ಕೈಕಾಡು, ಬಾವಲಿ, ಕುದುರೆಪಾಯ ತಣ್ಣಿಮಾನಿ, ಸಣ್ಣಪುಲಿಕೋಟು ಸೇರಿದಂತೆ ಹಲವು ಹಳ್ಳಿಗಳಿಗೂ ಮಹಾಮಾರಿ ಹಬ್ಬಿದೆ.

ಕಾವೇರಿ ಉಗಮಸ್ಥಾನ ತಲಕಾವೇರಿ, ಭಗಂಡೇಶ್ವರ ನೆಲೆಸಿರುವ ಬಾಗಮಂಡಲ ಸೇರಿದಂತೆ ಹಲವು ಪ್ರಮುಖ ಗ್ರಾಮಗಳಿಗೂ ಮಹಾಮಾರಿ ತನ್ನ ಕಬಂಧಬಾಹು ಚಾಚಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 122 ಪ್ರಕರಣಗಳು ದಾಖಲಾಗಿದ್ದು, 16 ಜನರು ಗುಣಮುಖರಾಗಿದ್ದಾರೆ.

ಇದನ್ನೂ ಓದಿ: Reliance-BP: ರಿಲಾಯನ್ಸ್‌-ಬ್ರಿಟೀಷ್‌ ಪೆಟ್ರೋಲಿಯಂ; ಜಂಟಿ ಇಂಧನ ಉದ್ಯಮ ಆರಂಭಿಸಿದ ಜಾಗತಿಕ ಕಂಪೆನಿಗಳು

ಇನ್ನು 105 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿದ್ದು, ಕಂಟೈನ್ಮೆಂಟ್ ಝೋನ್‍ಗಳು ಬರೋಬ್ಬರಿ 58 ಕ್ಕೆ ಏರಿಕೆಯಾಗಿವೆ. ರೆಸಾರ್ಟ್‍ಗಳ ಸಿಬ್ಬಂದಿಗಳಿಗೂ ಕೊರೋನಾ ಸೋಂಕು ತಗುಲಿದ್ದು, ಆರೋಗ್ಯ ಕಾರ್ಯಕರ್ತರಿಗೆ ದಿನದಿಂದ ದಿನಕ್ಕೆ ಮಹಾಮಾರಿ ಸುತ್ತಿಕೊಳ್ಳುತ್ತಲೇ ಇದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಇತ್ತೀಚಿನ ಕೆಲವು ದಿನಗಳಿಂದ ನಿರಂತರವಾಗಿ ಮಹಾಮಾರಿ ಉಲ್ಬಣಗೊಳ್ಳುತ್ತಿದ್ದು, ಜನರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
Published by: MAshok Kumar
First published: July 9, 2020, 9:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading