HOME » NEWS » District » 25 PEOPLE HAVE TESTED CORONAVIRUS POSITIVE WHO ATTEND FUNERAL RHHSN RSK

ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ 25 ಜನರ ಹೆಗಲೇರಿದ ಕೋವಿಡ್!

ಯಾವುದೇ ವ್ಯಕ್ತಿಗೆ ಸೋಂಕು ಇರುವುದು ದೃಢಪಡುತ್ತಿದ್ದಂತೆ ಅವರಿಗೆ ಸೀಲ್ ಹಾಕಬೇಕು. ಸೀಲ್ ಹಾಕದಿದ್ದರೆ, ಸೋಂಕಿತ ಎಲ್ಲಿಯೇ ಓಡಾಡಿದರೂ ಗೊತ್ತಾವುದಿಲ್ಲ. ಇದರಿಂದ ಇನ್ನಷ್ಟು ಜನರಿಗೆ ಸೋಂಕು ವ್ಯಾಪಕವಾಗಿ ಹರಡುತ್ತದೆ. ಸೋಂಕಿತರ ಮನೆಯ ಸುತ್ತಮುತ್ತಲಿನವರಿಗೂ ಪರೀಕ್ಷೆ ಮಾಡಬೇಕು. ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕೂಡಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಕೊಡಗಿನ ಎಲ್ಲಾ ಪ್ರವಾಸಿ ತಾಣಗಳನ್ನು ಸಂಪೂರ್ಣ ಬಂದ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

news18-kannada
Updated:April 16, 2021, 4:25 PM IST
ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ 25 ಜನರ ಹೆಗಲೇರಿದ ಕೋವಿಡ್!
ಪ್ರಾತಿನಿಧಿಕ ಚಿತ್ರ.
  • Share this:
ಕೊಡಗು: ಅವರೆಲ್ಲರೂ ತಮ್ಮ ಸಂಬಂಧಿ ಇನ್ನಿಲ್ಲ, ಕೊನೆ ಬಾರಿಯಾದರೂ ಮುಖ ನೋಡಿ ಸಂಸ್ಕಾರ ಮುಗಿಸಿ ಬರೋಣ ಎಂದು ಹೋಗಿದ್ದರು. ಹಾಗೆ ಸಂಸ್ಕಾರಕ್ಕೆಂದು ಹೋದವರಲ್ಲಿ 25 ಜನರಿಗೆ ಕೋವಿಡ್ ಸೋಂಕು ಹರಡಿದೆ. ಅಚ್ಚರಿ ಎಂದರೆ ಸತ್ತ ಮಹಿಳೆಗೆ ಕೋವಿಡ್ ಇರಲಿಲ್ಲ. ಬೇರೆ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದರು. ಆದರೂ ಕೊಡಗಿನ ಕುಶಾಲನಗರದಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆಯ 25 ಜನರಿಗೆ ಸೋಂಕು ಹರಡಿತ್ತು. ಹೀಗೆ ಸೋಂಕು ಹರಡೋದಕ್ಕೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನೋದು ಸ್ಪಷ್ಪವಾಗಿ ಗೋಚರಿಸುತ್ತದೆ.

ಕುಶಾಲನಗರದ ಗೋಪಾಲ್ ಸರ್ಕಲ್ ನ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಆ ಮಹಿಳೆಯ ಶವವನ್ನು ತಂದು ಕುಶಾಲನಗರದಲ್ಲಿ ಸಂಸ್ಕಾರ ಮಾಡಲಾಯಿತು. ಹೀಗೆ ಸಂಸ್ಕಾರದಲ್ಲಿ ಭಾಗವಹಿಸಿದ್ದವರಿಗೆ ಕೊರೋನಾ ಎನ್ನೋ ಮಹಾಮಾರಿ ಅದ್ಹೇಗೋ ಒಕ್ಕರಿಸಿಬಿಟ್ಟಿತ್ತು. ಬಳಿಕ ಆರೋಗ್ಯ ಸರಿಯಿಲ್ಲವೆಂದು ಆಸ್ಪತ್ರೆಗೆ ಹೋದ 25 ಜನರಿಗೆ ಕೋವಿಡ್ ದೃಢಪಟ್ಟಿತ್ತು. ಇಲ್ಲಿ ನಡೆದಿದ್ದು ಇಷ್ಟೇ, ಮೃತಪಟ್ಟ ಮಹಿಳೆಯ ಮಗಳಿಗೆ ಕೋವಿಡ್ ಇತ್ತು. ಆಕೆಯನ್ನು ಕುಶಾಲನಗರದ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಮೃತಪಟ್ಟ ಮಹಿಳೆಯ ಶವವನ್ನು ಕುಶಾಲನಗರಕ್ಕೆ ತಂದು ಸಂಸ್ಕಾರ ಮಾಡುವಾಗ ಆಕೆಯ ಮಗಳು ಎಲ್ಲರಂತೆ ಸಾಮಾನ್ಯವಾಗಿಯೇ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಹೀಗಾಗಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಈಕೆಯ ಸಂಪರ್ಕಕ್ಕೆ ಬಂದಿದ್ದ 25 ಜನರಿಗೆ ಯಾರಿಗೂ ಗೊತ್ತಿಲ್ಲದಂತೆ ಕೋವಿಡ್ ಹೆಗಲೇರಿಬಿಟ್ಟಿತ್ತು.

ಕೋವಿಡ್ ಹರಡೋದಕ್ಕೆ ಇದೇ ಮೂಲ ಎನ್ನೋದು ಈಗ ಸ್ಥಳೀಯರಿಂದ ಬಯಲಾಗಿದೆ. ಕೋವಿಡ್ ಇರುವ ಆಕೆಯನ್ನು ಎಲ್ಲರಿಂದ ಸಪರೇಟ್ ಇರುವಂತೆ ಆರೋಗ್ಯ ಇಲಾಖೆ ಕ್ರಮ ವಹಿಸಿದ್ದರೆ, ಅಥವಾ ಕೋವಿಡ್ ಬಂದ ಆಕೆಯನ್ನು ನಿತ್ಯ ಫಾಲೋಪ್ ಮಾಡಿದ್ದರೆ ಇಂದು ಕೊಡಗಿನಲ್ಲಿ ಇಪ್ಪತ್ತೈದು ಜನರಿಗೆ ಕೋವಿಡ್ ಸೋಂಕು ಹರಡುತ್ತಿರಲಿಲ್ಲ. ಆದರೆ ಆರೋಗ್ಯ ಇಲಾಖೆ ಮಾತ್ರ ಬೆಂಗಳೂರಿನಿಂದ ಮೃತದೇಹವನ್ನು ತಂದ ಯಾರಿಂದಲೋ ಹರಡಿರಬಹುದು ಎಂದು ಹೇಳುತ್ತಿದೆ. ಇದೊಂದೇ ಘಟನೆಯಲ್ಲ ಕೊಡಗಿನಲ್ಲಿ ಇಂತಹ ನಾಲ್ಕೈದು ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನು ಓದಿ: CM BS Yediyurappa | ಮತ್ತೆ ಕೊರೋನಾ ಸೋಂಕಿಗೆ ತುತ್ತಾದ ಸಿಎಂ ಬಿಎಸ್ ಯಡಿಯೂರಪ್ಪ; ಮಣಿಪಾಲ್ ಆಸ್ಪತ್ರೆಗೆ ದಾಖಲು

ಅದರಲ್ಲೂ ಕೋವಿಡ್ ಸೋಂಕಿಗೆ ಒಳಗಾಗಿ ಹೋಂ ಐಸೋಲೇಷನ್ ನಲ್ಲಿ ಉಳಿಯುತ್ತಿರುವವರ ಬಗ್ಗೆ ಆರೋಗ್ಯ ಇಲಾಖೆ ಸರಿಯಾಗಿ ಗಮನಿಸುತ್ತಿಲ್ಲ ಎನ್ನೋದು ಸ್ಥಳೀಯರ ಆರೋಪ. ಹೀಗಾಗಿಯೇ ಮೃತಪಟ್ಟ ಮಹಿಳೆಯ ಮಗಳಿಂದ 25 ಜನರಿಗೆ ಕೋವಿಡ್ ಹರಡಿದೆ ಎನ್ನೋದು ಸ್ಪಷ್ಟವಾಗಿದೆ.

ಕೊಡಗಿನಲ್ಲಿ ಕೋವಿಡ್ ವೇಗವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಬೇಕೆಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚಿಸಿದ್ದಾರೆ. ಯಾವುದೇ ವ್ಯಕ್ತಿಗೆ ಸೋಂಕು ಇರುವುದು ದೃಢಪಡುತ್ತಿದ್ದಂತೆ ಅವರಿಗೆ ಸೀಲ್ ಹಾಕಬೇಕು. ಸೀಲ್ ಹಾಕದಿದ್ದರೆ, ಸೋಂಕಿತ ಎಲ್ಲಿಯೇ ಓಡಾಡಿದರೂ ಗೊತ್ತಾವುದಿಲ್ಲ. ಇದರಿಂದ ಇನ್ನಷ್ಟು ಜನರಿಗೆ ಸೋಂಕು ವ್ಯಾಪಕವಾಗಿ ಹರಡುತ್ತದೆ. ಸೋಂಕಿತರ ಮನೆಯ ಸುತ್ತಮುತ್ತಲಿನವರಿಗೂ ಪರೀಕ್ಷೆ ಮಾಡಬೇಕು. ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕೂಡಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಕೊಡಗಿನ ಎಲ್ಲಾ ಪ್ರವಾಸಿ ತಾಣಗಳನ್ನು ಸಂಪೂರ್ಣ ಬಂದ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Published by: HR Ramesh
First published: April 16, 2021, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories