ಮೈಸೂರಿನಲ್ಲಿ ಕೊರೋನಾ ಸೋಂಕಿತರ ಕಿತಾಪತಿ; ರಾಂಗ್ ನಂಬರ್ ನೀಡಿ 230ಕ್ಕೂ ಹೆಚ್ಚು ಜನ ಎಸ್ಕೇಪ್

ಮೈಸೂರಿನಲ್ಲಿ ಇನ್ನೊಂದು ಆತಂಕವೂ ಶುರುವಾಗಿದ್ದು, ತಳ್ಳೋ ಗಾಡಿಯಲ್ಲಿ ವ್ಯಾಪಾರ ಮಾಡುವ ಹಾಗೂ ಎಪಿಎಂಸಿ ಮಾರುಕಟ್ಟೆಯ ಎಲ್ಲರಿಗೂ ರ್‍ಯಾಂಡಮ್ ಟೆಸ್ಟ್ ಮಾಡಲು ನಿರ್ಧರಿಸಿದ್ದು ನಾಳೆಯಿಂದ ಆ ಕೆಲಸವು ಶುರುವಾಗಲಿದೆ. ಸದ್ಯ ಇವರಿಂದಲು ಕೊರೋನಾ ಹರಡುವ ಭೀತಿ ಇದೆ ಎಂಬ ಮಾತುಗಳು ಕೇಳಿ ಬಂದಿದೆ ಅಂತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

news18-kannada
Updated:August 5, 2020, 7:37 AM IST
ಮೈಸೂರಿನಲ್ಲಿ ಕೊರೋನಾ ಸೋಂಕಿತರ ಕಿತಾಪತಿ; ರಾಂಗ್ ನಂಬರ್ ನೀಡಿ 230ಕ್ಕೂ ಹೆಚ್ಚು ಜನ ಎಸ್ಕೇಪ್
ಸಾಂದರ್ಭಿಕ ಚಿತ್ರ.
  • Share this:
ಮೈಸೂರು (ಆಗಸ್ಟ್‌ 04); ಜಿಲ್ಲೆಯಲ್ಲಿ ದಿನೇ‌ ದಿನೇ ಕೊರೋನಾ ಪಾಸಿಟೀವ್ ಪ್ರಕರಣ ಹೆಚ್ಚಾಗುತ್ತಿದ್ದು, ಮೈಸೂರು ಜಿಲ್ಲಾಡಳಿತ ಕೊರೋನಾ ನಿಯಂತ್ರಣಕ್ಕೆ ನಾನಾ ಮಾರ್ಗೋಪಾಯ ಹುಡುಕುತ್ತಿದೆ. ಈ ನಡುವೆ 230 ಮಂದಿ ಸೋಂಕಿತರು ಇದೀಗಾ ಏಸ್ಕೇಪ್ ಆಗಿದ್ದು ಮೊಬೈಲ್ ನಂಬರ್ ತಪ್ಪುತಪ್ಪಾಗಿ ನೀಡಿ ಜಿಲ್ಲಾಡಳಿತಕ್ಕೆ ಮತ್ತಷ್ಟು ಭೀತಿ ಹುಟ್ಟಿಸಿದ್ದಾರೆ. ಅಷ್ಟಕ್ಕು ಈ ಬಗ್ಗೆ ಕಾರ್ಯಚರಣೆ ಹೇಗಿದೆ? ಆರೋಗ್ಯ ಇಲಾಖೆ ತೆಗೆದುಕೊಂಡ ನಿರ್ಣಯಗಳೇನು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಸಾಂಸ್ಕೃತಿಕ ನಗರಿ ಮೈಸೂರು ದಿನದಿಂದ ದಿನಕ್ಕೆ ಕೊರೋನಾ ಹಾಟ್‌ಸ್ಪಾಟ್ ಆಗಿ ಪರಿವರ್ತನೆಗೊಳ್ಳುತ್ತಿದ್ದು, ಕಂಟ್ರೋಲ್ ಮೀರಿ ಪಾಸಿಟಿವ್ ಪ್ರಕರಣ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಇದಕ್ಕಾಗಿ ಮೈಸೂರು ಜಿಲ್ಲಾಡಳಿತ ಸಾಕಷ್ಟು ಕ್ರಮ ತೆಗೆದುಕೊಂಡು ಇದನ್ನ ಕಂಟ್ರೋಲ್ ಮಡೋದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರೂ ಇದಕ್ಕೆ ಕೆಲವರು ಅನವಶ್ಯಕವಾಗಿ ಮತ್ತಷ್ಟು ಸಮಸ್ಯೆ ತಂದೊಡ್ಡುತ್ತಿದ್ದಾರೆ.

ಹೌದು... ಮೈಸೂರಿನಲ್ಲಿ ಇದೀಗಾ ರಾಂಗ್ ನಂಬರ್ ಕೊಟ್ಟು ಪಾಸಿಟಿವ್ ಬಂದವರು ಏಸ್ಕೇಪ್ ಆಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗಾ ಬರೋಬ್ಬರಿ 230ಮಂದಿ ಇದೇ ರೀತಿ ಪಾಸಿಟೀವ್ ಬಂದವರು ರಾಂಗ್ ನಂಬರ್ ನೀಡಿ ಏಸ್ಕೇಪ್‌ ಆಗಿದ್ದು ಆರೋಗ್ಯ ಇಲಾಖೆಗೆ ಅವರ ಪತ್ತೇ ಕಾರ್ಯ ತುಂಭಾ ಕಷ್ಟವಾಗುತ್ತಿದೆ. ಜನರು ಇದಕ್ಕೆ ಸಹಕಾರ ಕೊಡಬೇಕು ಅಂತಾರೆ ಡಿಹೆಚ್‌ಓ ಡಾ.ವೆಂಕಟೇಶ್.

ಇದನ್ನೂ ಓದಿ : ಕುಲಭೂಷಣ್ ಜಾಧವ್ ಪರ ವಕೀಲರನ್ನು ನೇಮಕ ಮಾಡಿಕೊಳ್ಳಲು ಭಾರತಕ್ಕೆ ಮತ್ತೊಂದು ಅವಕಾಶ ನೀಡಿದ ಪಾಕ್‌ ನ್ಯಾಯಾಲಯ

ಇನ್ನು ಮತ್ತೊಂದು ಅಂಶ ಹೇಳಲೇಬೇಕು. ಮೈಸೂರಿನಲ್ಲಿ ಇನ್ನೊಂದು ಆತಂಕವೂ ಶುರುವಾಗಿದ್ದು, ತಳ್ಳೋ ಗಾಡಿಯಲ್ಲಿ ವ್ಯಾಪಾರ ಮಾಡುವ ಹಾಗೂ ಎಪಿಎಂಸಿ ಮಾರುಕಟ್ಟೆಯ ಎಲ್ಲರಿಗೂ ರ್‍ಯಾಂಡಮ್ ಟೆಸ್ಟ್ ಮಾಡಲು ನಿರ್ಧರಿಸಿದ್ದು ನಾಳೆಯಿಂದ ಆ ಕೆಲಸವು ಶುರುವಾಗಲಿದೆ. ಸದ್ಯ ಇವರಿಂದಲು ಕೊರೋನಾ ಹರಡುವ ಭೀತಿ ಇದೆ ಎಂಬ ಮಾತುಗಳು ಕೇಳಿ ಬಂದಿದೆ ಅಂತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಒಟ್ಟಾರೆ, ಮೈಸೂರಿನಲ್ಲಿ ಒಂದು ಕಡೆ ಕರೋನಾ ಸೋಂಕನ್ನು ನಿಯಂತ್ರಿಸಲು ಮುಂಬೈ ಮಾದರಿಯ ಕಾರ್ಯಾಚರಣೆ ಮಾಡಲು ಮುಂದಾದರೆ, ಮತ್ತೊಂದು ಕಡೆ ಕೊರೋನಾ ಸೋಂಕಿತರು ಆರೋಗ್ಯ ಇಲಾಖೆಯ ದಿಕ್ಕು ತಪ್ಪಿಸುತ್ತಿರುವುದು ದೊಡ್ಡ ಪ್ರಮಾದಕ್ಕೆ ಎಡೆಮಾಡಿಕೊಟ್ಟಿದೆ. ಈಗಲಾದರೂ ಜನ ಸಾಮಾನ್ಯರು ಸರಿಯಾದ ಮಾಹಿತಿ ನೀಡಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಲಿ ಅನ್ನೋದಷ್ಟೇ ಎಲ್ಲರ ಆಶಯ.
Published by: MAshok Kumar
First published: August 5, 2020, 7:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading