ಪೊಲೀಸರಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನಲೆ; ಮೊದಲ ಹಂತದಲ್ಲಿ 20 ಸಾವಿರ ಸಿಬ್ಬಂದಿಗೆ ಪರೀಕ್ಷೆ

ಇಂದು ಐವರು ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿದೆ. ಜೆಜೆ ನಗರ ಠಾಣೆಯ ಮಹಿಳಾ ಪಿಎಸ್ಐ, ಆರ್ ಟಿ ನಗರದ ಓರ್ವ ಪೇದೆ, ಹನುಮಂತನಗರ ಠಾಣೆಯ ಓರ್ವ ಕಾನ್ಸ್ ಸ್ಟೇಬಲ್, ಜೀವನ್ ಭೀಮಾನಗರ ಠಾಣೆಯ ಓರ್ವ ಪೇದೆ ಹಾಗೂ ಹಲಸೂರು ಸಂಚಾರಿ ಠಾಣೆಯ ಓರ್ವ ಕಾನ್ಸ್‌ಟೇಬಲ್ ಗೆ ಸೋಂಕು ಪತ್ತೆಯಾಗಿದೆ.

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

  • Share this:
ಬೆಂಗಳೂರು (ಜುಲೈ 06); ಪೊಲೀಸರಲ್ಲಿ ಮಾರಣಾಂತಿಕ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮೊದಲ ಹಂತದಲ್ಲಿ 20,000 ಪೊಲೀಸರಿಗೆ ತುರ್ತಾಗಿ ಕೊವೀಡ್ ಪರೀಕ್ಷೆ ಮಾಡಿಸಲು ಇಲಾಖೆ ನಿರ್ಧರಿಸಿದೆ. ಈಗಾಗಲೇ 9 ಸಾವಿರ ಮಂದಿಯ ಪರೀಕ್ಷೆ ನಡೆದಿದ್ದು ಹಲವರ ಟೆಸ್ಟ್ ರಿಪೋರ್ಟ್ ಇಲಾಖೆ ಕೈ ಸೇರಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ತಿಳಿಸಿದ್ದಾರೆ.

ಮಾಹಾಮಾರಿ ಕೊರೋನಾ ಪೊಲೀಸರನ್ನು ಬೆಂಬಿಡದೆ ಕಾಡಲು ಮುಂದಾಗಿದೆ. ಈಗಾಗಲೇ 370 ಕ್ಕು ಹೆಚ್ಚು ಪೊಲೀಸರು ಕೊರೋನಾ ಸೋಂಕಿಗೆ ಒಳಗಾಗಿದ್ದು ಐಸೋಲೇಷನ್ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವು ಠಾಣೆಗಳ ಪೊಲೀಸರು ಕೊವೀಡ್ ಟೆಸ್ಟ್ ಮಾಡಿಸುತ್ತಿದ್ದು ಪೊಲೀಸರ ಪರೀಕ್ಷಾ ವರದಿಗಾಗಿ ಇಲಾಖೆ ಕಾಯುತ್ತಿದೆ.

ಪರಿಣಾಮ ಹಲವಾರು ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಕೆಲವು ಪೊಲೀಸರು ಟೆಸ್ಟ್ ಮಾಡಿಸಲು ತಮ್ಮ ಸ್ವಂತ ಖರ್ಚಿನಲ್ಲಿ ಹಣ ಭರಿಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರಿಗೆ ಪ್ರತ್ಯೇಕ ಕೊವೀಡ್ ಸೆಂಟರ್ ತೆರೆಯಲು ಇಲಾಖೆ ಚಿಂತನೆ ನಡೆಸಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

"ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ಕೊವೀಡ್ ಪರೀಕ್ಷೆ ನಡೆಯುತ್ತಿದೆ, ಇದರಿಂದಾಗಿ ಪೊಲೀಸರಿಗೆ ಟೆಸ್ಟ್ ಮಾಡುವುದು ವಿಳಂಬವಾಗುತ್ತಿದೆ. ಸರ್ಕಾರದ ಮೇಲೆ ನಂಬಿಕೆ ಇದೆ, ಪೊಲೀಸರು ಹೆದರುವ ಅವಶ್ಯಕತೆ ಇಲ್ಲ. ಈಗಾಗಲೇ ಸೋಂಕಿತ ಪೊಲೀಸರಲ್ಲಿ ಸಾಕಷ್ಟು ಸಿಬ್ಬಂದಿ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದು ಠಾಣೆಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿಲ್ಲ" ಎಂದು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಭರವಸೆ ನೀಡಿದ್ದಾರೆ.

ಇದೇ ವೇಳೆ "ಇಂದು ಐವರು ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿದೆ. ಜೆಜೆ ನಗರ ಠಾಣೆಯ ಮಹಿಳಾ ಪಿಎಸ್ಐ, ಆರ್ ಟಿ ನಗರದ ಓರ್ವ ಪೇದೆ, ಹನುಮಂತನಗರ ಠಾಣೆಯ ಓರ್ವ ಕಾನ್ಸ್ ಸ್ಟೇಬಲ್, ಜೀವನ್ ಭೀಮಾನಗರ ಠಾಣೆಯ ಓರ್ವ ಪೇದೆ ಹಾಗೂ ಹಲಸೂರು ಸಂಚಾರಿ ಠಾಣೆಯ ಓರ್ವ ಕಾನ್ಸ್‌ಟೇಬಲ್ ಗೆ ಸೋಂಕು ಪತ್ತೆಯಾಗಿದೆ. ಸೋಂಕಿತ ಸಿಬ್ಬಂದಿಯನ್ನ ಚಿಕಿತ್ಸೆಗೆ ಐಸೋಲೆಷನ್ ಅಸ್ಪತ್ರೆಗೆ ಕರೆದೊಯ್ಯಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.

ಇದನ್ನೂ ಓದಿ : ರಾಜ್ಯ ಸರ್ಕಾರದಿಂದ ಹೊಸ ನಿಯಮ ಜಾರಿ; ಹೊರರಾಜ್ಯದಿಂದ ಬರುವ ಎಲ್ಲರಿಗೂ ಮನೆಯಲ್ಲೇ ಕ್ವಾರಂಟೈನ್

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ. ಅಲ್ಲದೆ, 20,000 ಪೊಲೀಸರಿಗೆ ಕೋವಿಡ್‌ ಪರೀಕ್ಷೆ ನಡೆಸಲೂ ತೀರ್ಮಾನಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.
Published by:MAshok Kumar
First published: