ಮದುವೆಯ ಬಳಿಕವೂ ದೂರವಾದ ಪ್ರೇಮಿಗಳು: ಅಪ್ರಾಪ್ತನೊಂದಿಗೆ 20ರ ಯುವತಿಯ ಮದುವೆಗೆ ಕಾನೂನಿನ ತಡೆ

ಯುವಕನಿಗೆ ಈಗ 17 ವರ್ಷವಾಗಿದ್ದು, ಮದುವೆಗೆ ಕಾನೂನಾತ್ಮಕವಾಗಿ 21 ವರ್ಷವಾಗಲು ಇನ್ನೂ 4 ವರ್ಷಗಳು ಬೇಕಾಗಿದೆ. ಅಲ್ಲಿಯವರೆಗೆ ಇವರ ಮದುವೆ ಕಾನೂನಾತ್ಮಕವಾಗಿ ಊರ್ಜಿತವಾಗಲ್ಲ. ಹೀಗಾಗಿ ಯುವತಿ ನಾಲ್ಕು ವರ್ಷ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಫೈಲ್​​ ಫೋಟೋ

ಫೈಲ್​​ ಫೋಟೋ

  • Share this:
ಚಿಕ್ಕಮಗಳೂರು : ಯುವತಿಯೊಬ್ಬಳು ಫೇಸ್​​ಬುಕ್​​ನಲ್ಲಿ ಪರಿಚಯವಾದ ಅಪ್ರಾಪ್ತನನ್ನು ಮದುವೆಯಾಗಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಬಿಸಿಲೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಯುವಕನ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಫೇಸ್ಬುಕ್ ಸ್ನೇಹ ಒಂದೆರಡು ವರ್ಷಗಳ ಬಳಿಕ ಪ್ರೀತಿಗೆ ತಿರುಗಿತ್ತು.

20 ವರ್ಷದ ಯುವತಿ, ಅಪ್ರಾಪ್ತ ಬಾಲಕ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಹುಡುಗಿ ಮನೆಯವರಿಗೆ ವಿಷಯ ತಿಳಿಸಿದಾಗ ಆಕೆಯ ಫೋಷಕರು ಮದುವೆಗೆ ವಿರೋಧಿಸಿದ್ದರು. ಮನೆಗೆ ಬರಬೇಡ ಪ್ರೀತಿಸಿದವನೊಂದಿಗೆ ಹೋಗು ಎಂದು ಪೋಷಕರು ಹೇಳಿದ್ದರಂತೆ. ಹುಡುಗನಿಗೆ ಅಪ್ಪ ಇಲ್ಲ. ಅಮ್ಮ ಮಾತ್ರ ಇದ್ದಾರೆ. ಹುಡುಗನ ತಾಯಿ ಸಂಬಂಧಿಕರ ಜೊತೆ ಸೇರಿ ಬ್ರಹ್ಮಸಮುದ್ರ ಗ್ರಾಮದ ಅಂತರಘಟ್ಟಮ್ಮನ ದೇವಸ್ಥಾನದಲ್ಲಿ ಜೂನ್ 16ರಂದು ಇಬ್ಬರಿಗೂ ಮದುವೆ ಮಾಡಿದ್ದರು.

ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಜೂನ್ 23 ರಂದು ಮಾಹಿತಿ ದೊರೆತಿದೆ. ಸಖರಾಯಪಟ್ಟಣ ಪೋಲೀಸರೊಡನೆ ಅಂಗನವಾಡಿ ಮೇಲ್ವಿಚಾರಕಿ ಜಾಕೀರ್ ತಾಜ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಘರಾಜ್ ಹಾಗೂ ಬಿಸಿಲೇಹಳ್ಳಿ ಗ್ರಾಮಪಂಚಾಯಿತಿ ಕಾರ್ಯದರ್ಶಿ ಇಂದ್ರಮ್ಮ ಸ್ಥಳಕ್ಕೆ ಭೇಟಿ ನೀಡಿ ಯುವತಿಯನ್ನ ವಶಕ್ಕೆ ಪಡೆದಿದ್ದಾರೆ. ಆಕೆಯ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕೊರೋನಾ ನಿಯಮ ಉಲ್ಲಂಘನೆ ಪ್ರಕರಣದಡಿ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಊಟದ ಬಳಿಕ ತೇಗದ, ಹೂಸು ಬಿಡದ ವರ ಬೇಕಾಗಿದ್ದಾನೆ : ಯುವತಿಯ ಕಂಡಿಷನ್ಸ್ ಕೇಳಿ ಕಾಲೆಳೆದ ನೆಟ್ಟಿಗರು!

ಸದ್ಯ ಯುವತಿಯನ್ನ ಜಿಲ್ಲೆಯ ಸಾಧ್ವಾರ ಕೇಂದ್ರದಲ್ಲಿ ಬಿಡಲಾಗಿದೆ. ಸಖರಾಯಪಟ್ಟಣ ಪೊಲೀಸರು ವಿಷಯವನ್ನ ಯುವತಿಯ ಪೋಷಕರ ಗಮನಕ್ಕೆ ತಂದಿದ್ದಾರೆ. ಬಾಲಕನಿಗೆ ತಿಳಿ ಹೇಳಿ ಪೋಷಕರ ಮನೆಗೆ ಕಳಿಸಿದ್ದಾರೆ.ಇವರಿಬ್ಬರು ಫೇಸ್ ಬುಕ್ ಪರಿಚಯವಾಗಿ ಸ್ನೇಹ ಬೆಳೆಸಿಕೊಂಡು ನಂತರ ಚಾಟಿಂಗ್ ಮಾಡುತ್ತಲೇ ಲವ್ ಪ್ರೊಪೋಸ್ ಮಾಡಿಕೊಂಡಿದ್ದಾರೆ. ನಂತರ ಇಬ್ಬರು ಪ್ರೇಮಾಂಕುರ ಬೆಳೆದ ಮದುವೆ ಕೂಡ ಆಗಿದ್ದಾರೆ. ಆದ್ರೆ, ಇವರಿಬ್ಬರ ಫೇಸ್ ಬುಕ್ ಪ್ರೀತಿಗೆ ಕಾನೂನಿನ ತೊಡಕಾಗಿದೆ.

ಯುವಕನಿಗೆ ಈಗ 17 ವರ್ಷವಾಗಿದ್ದು, ಮದುವೆಗೆ ಕಾನೂನಾತ್ಮಕವಾಗಿ 21 ವರ್ಷವಾಗಲು ಇನ್ನೂ 4 ವರ್ಷಗಳು ಬೇಕಾಗಿದೆ. ಅಲ್ಲಿಯವರೆಗೆ ಇವರ ಮದುವೆ ಕಾನೂನಾತ್ಮಕವಾಗಿ ಊರ್ಜಿತವಾಗಲ್ಲ. ಹೀಗಾಗಿ ಯುವತಿ ನಾಲ್ಕು ವರ್ಷ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: