ವಿಜಯಪುರ (ಫೆಬ್ರವರಿ. 17)- ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 15-20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, "ಸಚಿವ ರಮೇಶ ಜಾರಕಿಹೊಳಿ 5 ಶಾಸಕರು ಸಂಪರ್ಕದಲ್ಲಿದ್ದಾರೆ ಅಂತ ಹೇಳಿದ್ದಾರಲ್ವ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅಸಮಾಧಾನದಲ್ಲಿದ್ದಾರೆ. ಇಂಥ 15 ರಿಂದ 20 ಶಾಸಕರು ತಮ್ಮ ಸಂಪರ್ಕಲ್ಲಿದ್ದಾರೆ. ಆದರೆ, ನಮಗೆ ಈಗ ಅವಶ್ಯಕತೆ ಇಲ್ಲ. ಅವರೇ ನಮ್ಮನ್ನು ಸೇರಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ನಮಗೆ ಪ್ರತಿಪಕ್ಷಗಳ ಶಾಸಕರ ಅವಶ್ಯಕತೆಯಿಲ್ಲ. ಚುನಾವಣೆ ಸಂದರ್ಭದಲ್ಲಿಯೂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ" ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಇದೇ ವೇಳೆ, ಬಸವ ಕಲ್ಯಾಣ, ಮಸ್ಕಿ ಮತ್ತು ಸಿಂದಗಿ ವಿಧಾನ ಸಭೆ ಬೈ ಎಲೆಕ್ಷನ್ ಮತ್ತು ಬೆಳಗಾವಿ ಬೈ ಎಲೆಕ್ಷನ್ ಕುರಿತು ಮಾತನಾಡಿರುವ ನಳೀನ್ ಕುಮಾರ್ ಕಟೀಲ್, "ರಾಜ್ಯದಲ್ಲಿ ಮೂರು ವಿಧಾನಸಭೆ ಮತ್ತು ಒಂದು ಲೋಕಸಭೆ ಬೈ ಎಲೆಕ್ಷನ್ ನಡೆಯಲಿದೆ. ಪಕ್ಷದ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ" ಎಂದು ತಿಳಿಸಿದರು.
ಶಾಸಕ ಯತ್ನಾಳ್ಗೆ ನೊಟೀಸ್ ನೀಡಲಾಗಿದೆ;
ಈ ಮಧ್ಯೆ, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ ನೊಟೀಸ್ ಕಳುಹಿಸಿದೆ. ಅದು ತಲುಪಿದ ಮೇಲೆ ಯತ್ನಾಳ್ ಉತ್ತರ ನೀಡಲಿ ಎಂದು ತಿಳಿಸಿದರು. ಈ ಮೂಲಕ ಯತ್ನಾಳ್ ಅವರಿಗೆ ಶಿಸ್ತು ಸಮಿತಿ ನೊಟೀಸ್ ನೀಡಿರುವುದನ್ನು ನಳೀನಕುಮಾರ ಕಟೀಲ ಖಚಿತ ಪಡಿಸಿದರು.
ಇದನ್ನೂ ಓದಿ: ಪಂಜಾಬ್ ಸ್ಥಳೀಯ ಚುನಾವಣೆ; ರೈತ ಹೋರಾಟಕ್ಕೆ ಬಿಜೆಪಿ ಧೂಳೀಪಟ, ಹೊಸ ಇತಿಹಾಸ ನಿರ್ಮಿಸಿದ ಕಾಂಗ್ರೆಸ್!
ಯತ್ನಾಳ್ ಅವರ ಎಲ್ಲಾ ಮಾತುಗಳಿಗೆ ನಾನು ಉತ್ತರ ಕೊಡುವುದಿಲ್ಲ. ಅದಕ್ಕೆಲ್ಲ ಸಂಬಂಧಿಸಿದವರು ಉತ್ತರ ನೀಡಲಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ನಿಗಮ, ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬುದು ಯತ್ನಾಳ ಅವರ ಭಾವನೆ ಅಷ್ಟೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ