• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಇಯರ್​ಫೋನ್​ ಹಾಕೊಂಡು ರೈಲ್ವೆ ಟ್ರ್ಯಾಕ್ ಮೇಲೆ ಪಾರ್ಟಿ, ಕುಡಿದ ನಶೆಯಲ್ಲಿ ರೈಲು ಬಂದಿದ್ದೇ ಗೊತ್ತಾಗ್ಲಿಲ್ಲ: ಇಬ್ಬರ ಸಾವು

ಇಯರ್​ಫೋನ್​ ಹಾಕೊಂಡು ರೈಲ್ವೆ ಟ್ರ್ಯಾಕ್ ಮೇಲೆ ಪಾರ್ಟಿ, ಕುಡಿದ ನಶೆಯಲ್ಲಿ ರೈಲು ಬಂದಿದ್ದೇ ಗೊತ್ತಾಗ್ಲಿಲ್ಲ: ಇಬ್ಬರ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನೇನು ಲಾಕ್​ಡೌನ್ ಮುಗಿತಾ ಇದೆ ಅಂತ ಖುಷಿಯಲ್ಲಿ ಗೆಳೆಯರೆಲ್ಲಾ ಸೇರ್ಕೊಂಡು ರೈಲ್ವೆ ಟ್ರ್ಯಾಕ್ ಬಳಿಯಲ್ಲಿ ಪಾರ್ಟಿ ಶುರು ಮಾಡಿದ್ದಾರೆ. ಇಯರ್​ಫೋನ್ ಹಾಕಿಕೊಂಡು ಹಾಡು ಕೇಳುತ್ತಾ, ದೊಡ್ಡ ದನಿಯಲ್ಲಿ ಕರಾಓಕೆ ಕೂಡಾ ನಡೆದಿದೆ. ಕ್ಷಣದಲ್ಲೇ ಬಂದ ರೈಲು ನಶೆಯಲ್ಲಿದ್ದವರನ್ನು ಮಸಣಕ್ಕೆ ಕಳಿಸಿದೆ.

ಮುಂದೆ ಓದಿ ...
  • Share this:

ಚಿತ್ರದುರ್ಗ : ವೀಕೆಂಡ್ ಪಾರ್ಟಿ ಮಾಡೋಕೆ ಹೋಗಿದ್ದ ಇಬ್ಬರು   ರೈಲಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಕಳೆದ ವರ್ಷದಿಂದ ರಾಜ್ಯದಲ್ಲಿ ಕೊರೋನಾ ಸೋಂಕು ಅನೇಕ ಬದಲಾವಣೆಗಳನ್ನ ಮಾಡಿದೆ. ಅದರಲ್ಲೂ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ಅದೆಷ್ಟೋ ಮಂದಿ ಜನರು ಲಾಕ್ ಡೌನ್ ನಿಂದ ಮತ್ತೆ ಸಿಟಿ ಬಿಟ್ಟು ಹಳ್ಳಿಗಳಿಗೆ ಬಂದು ನೆಲಸಿರೋ ಸಾಕಷ್ಟು ಉದಾಹರಣೆಗಳು ಇವೆ. ಇದರಿಂದ ಜೀವನ, ಕೆಲಸದ ಒತ್ತಡ, ದುಡಿಮೆ ಅಂತ ಬ್ಯುಸಿಯಾಗಿ, ಎಲ್ಲರಿಂದ ದೂರವಿದ್ದು ಬದುಕು ಹಂತ ತಲುಪಿದ್ದ  ಜನರು ಕೊಂಚ ರಿಲಾಕ್ಸ್ ಆಗಿ ಸ್ನೇಹಿತರು, ಸಂಬಂಧ,  ಅಂತ ಹಳೆಯ ನೆನಪುಗಳನ್ನ ನೆನೆದು ಜೀವಿಸೋಕೆ ಪ್ರಾರಂಭ ಮಾಡಿದ್ರು. ಅದ್ರಲ್ಲೂ ಯುವಕರಂತೂ ಗುಂಡು ತುಂಡಿನ ಪಾರ್ಟಿಗಳನ್ನ ಮಾಡುತ್ತಾ ಶಾಲೆ, ಕಾಲೇಜು ಜೀವನ ಮೆಲುಕು ಹಾಕುತ್ತಾ ಖುಷಿ ಅನುಭವಿಸಿದ ದಿನಗಳು ಸಾಕಷ್ಟು.


ಆದರೇ ಈ ಸಂತೋಷದ ಕ್ಷಣ ಚಿತ್ರದುರ್ಗ ಜಿಲ್ಲೆಯ ಇಬ್ಬರು ಗಳೆಯರ ಪಾಲಿಗೆ ಮರಣದ ದಿನವಾಗಿ ಜೀವವನ್ನೆ ಬಲಿ‌ಪಡೆದಿದೆ. ಅದೇನಂದ್ರೆ ಕೊರೋನಾ ಎರಡನೇ ಅಲೆ ಶುರುವಾದ ಪರಿಣಾಮ ಎಲ್ಲೆಲ್ಲಿಯೋ ಇದ್ದ  ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೋಕಿನ ಬೋವಿ ಕಾಲೋನಿಯಲ್ಲಿ ಇದ್ದ ಯುವಕರು ಊರಿಗೆ ವಾಪಾಸ್ ಆಗಿದ್ರು. ಕೋವಿಡ್ ತಡೆಯೋಕೆ ಸರ್ಕಾರ ಹೇರಿದ್ದ ಲಾಕ್ಡೌನಲ್ಲ್ಲಿ ದಿನವಿಡೀ ಕೆಲಸವಿಲ್ಲದೆ ಕಾಲ ಕಳೆಯೋದು ಅನಿವಾರ್ಯವಾಗಿತ್ತು. ಇದರ ನಡುವೆ ಗ್ರಾಮದ ದೇವರಾಜ್ ಹಾಗೂ ಸುನೀಲ್ ಎಂಬ ಗೆಳಯರಿಬ್ಬರು  ಭಾನುವಾರ ಬಂತು ಅಂದ್ರೆ ವೀಕೆಂಡ್ ಪಾರ್ಟಿ ಮಾಡೋದು, ಅಲ್ಲಿ ತಮ್ಮ ಇಷ್ಟದ ಹಾಡುಗಳನ್ನ ಹಾಡೋದು, ಸಂತೋಷದ ಸಮಯದಲ್ಲಿ ಒಳ್ಳೊಳ್ಳೆ ಹಾಡುಗಳನ್ನ ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಿದ್ದರು. ಬೋವಿ ಕಾಲೋನಿ ನಿವಾಸಿ ದೇವರಾಜ್ ಹಲವು ವರ್ಷಗಳಿಂದ ಸರ್ಕಾರಿ ಶಾಲೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.


ಲಾಕ್ ಡೌನಲ್ಲಿ ಶಾಲೆಗಳಿಗೆ ರಜೆ ಇದ್ದದ್ದರಿಂದ ಊರಲ್ಲಿಯೇ ಉಳಿದಿದ್ದರು. ಊರಲ್ಲಿದ್ದರೆ ಸ್ನೇಹಿತರ ಜೊತೆ ಸೇರಿ ಕಾಲ ಕಳೆಯೋಕೆ ನಿನ್ನೆ ಭಾನುವಾರ ಆಗಿದ್ರಿಂದ ವೀಕೆಂಡ್ ಪಾರ್ಟಿ ಮಾಡೋಕೆ ಅಂತ   ಗುಂಡು, ತುಂಡು ತಯಾರಿ ಜೊತೆ, ಹಾಡು ಕೇಳೋಕೆ ಅಂತ ಸ್ಪೀಕರ್ ಬಾಕ್ಸ್, ಮೈಕ್, ಇಯರ್ ಫೋನ್ ತಂಗಡು , ಗ್ರಾಮದ ಪಕ್ಕದಲ್ಲಿದ್ದ ರೈಲ್ವೆ ಟ್ರಾಕ್  ಪಕ್ಕದ   ಜಾಗಕ್ಕೆ ತೆರಳಿದ್ರು, ಸಮಯ ಕಳೆದಂತೆಲ್ಲ ಎಣ್ಣೆ ನಿಷೆ ಏರಿ ಫುಲ್ ಟೈಟಾಗಿದ್ರು, ಆ ಎಣ್ಣೆ ಮತ್ತಲ್ಲಿ ಇಬ್ಬರು ಕರೋಕೆ ಹಾಡು ಹಾಕಿ, ಕಿವಿಗಳಿಗೆ ಇಯರ್ ಫೋನ್ ಹಾಕಿಕೊಂಡು ಎಂಜಾಯ್ ಮಾಡ್ತಿದ್ರಂತೆ.  ಇವರು ಎಣ್ಣೆ ಮತ್ತಲಿರುವಾಗಲೇ  ಹಳಿ ದಾಟಲು ಬಂದ ವೇಳೆ ರಭಸವಾಗಿ ಬಂದ ರೈಲು ಇಬ್ಬರ ಮೇಲೆ ಹರಿದು ಹೋಗಿದೆ. ರೈಲು ಹರಿದ ಪರಿಣಾಪ ದೇವರಾಜ್, (43) ಸುನೀಲ್ (28) ಇಬ್ಬರ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೆ ರೈಲು ಹರಿದ ವೇಗಕ್ಕೆ ಇಬ್ಬರ ಮೃತ ದೇಹಗಳು ಛಿದ್ರ ಛಿದ್ರವಾಗಿವೆ. ಘಟನೆ ಬಳಿಕ ಸ್ಥಳಕ್ಕೆ ಬಂದ ರೈಲ್ವೆ ಪೋಲೀಸರು,  ತಳಕು ಠಾಣೆ ಪೋಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: