Vaccine App: ಲಸಿಕೆ ಪಡೆಯಲು ಸುಲಭವಾಗಿ ಸ್ಲಾಟ್ ಬುಕ್ ಮಾಡುವ ಆಪ್, ಉಡುಪಿ ಯುವಕರ ಹೊಸಾ ಟೆಕ್ !

Vaccine App: ನಿಮ್ಮ ಮನೆಯ ಬಳಿಯ ಲಸಿಕಾ ಕೇಂದ್ರದಲ್ಲಿ ಸ್ಲಾಟ್ ಓಪನ್ ಆದ ಕೂಡಲೇ ನಿಮ್ಮ ಮೊಬೈಲ್ ನಂಬರ್​ಗೆ ಈ ಆಪ್ ಒಂದು ಮೆಸೇಜ್ ಕಳಿಸುತ್ತದೆ. ಇದರಿಂದ ನೀವು ಕ್ಷಣಾರ್ಧದಲ್ಲಿ ಲಸಿಕೆ ಪಡೆಯಲು ದಿನ ಮತ್ತು ಸಮಯ ನಿಗದಿ ಮಾಡಿಕೊಳ್ಳಬಹುದು.

ನೂತನ ಆಪ್

ನೂತನ ಆಪ್

  • Share this:
ಉಡುಪಿ: ಕೊರೋನಾ ಎರಡನೇ ಅಲೆಯಲ್ಲಿ ವ್ಯಾಕ್ಸಿನ್  ಮಹತ್ವ ಇದೀಗ ಪ್ರತಿಯೊಬ್ಬರಿಗೂ ಅರಿವಾಗಿದೆ.‌ ಹೀಗಾಗಿ ವ್ಯಾಕ್ಸಿನ್ ಪಡೆಯಲು ಕೋವಿನ್ (COWIN) ಆ್ಯಪ್‌ ಮೂಲಕ ವ್ಯಾಕ್ಸಿನ್ ಲಭ್ಯತೆ ತಿಳಿಯಲು ಹಾಗೂ ಕಾಯ್ದಿರಿಸಲು ಪರದಾಡುವವರೇ ಹೆಚ್ಚು. ಹೀಗೆ ಈ ವ್ಯಾಕ್ಸಿನ್ ತನ್ನ ಪೋಷಕರಿಗೆ ಕೊಡಿಸುವಲ್ಲಿ ಪರದಾಡಿದ ಕರಾವಳಿಯ ಯುವಕ ‌ಆ್ಯಪ್ ಒಂದನ್ನು ಹುಟ್ಟು ಹಾಕಿ ವ್ಯಾಕ್ಸಿನ್  ದಾರಿಯನ್ನ ಸುಗಮಗೊಳಿಸಿದ್ದಾನೆ.  ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ನಿವಾಸಿ ರಾಮ್ ದಾಸ್ ಈ‌ ಆ್ಯಪ್‌ ಹಿಂದಿನ ಮಾಸ್ಟರ್ ಮೈಂಡ್.. ಹೌದು ಕೇವಲ‌ 22ವರ್ಷ ವಯಸ್ಸಿನ ಈ ಯುವಕ ಹೆತ್ತವರಿಗಷ್ಟೇ ಅಲ್ಲದೆ ತನ್ನ ಇಡೀಗ ಗ್ರಾಮಕ್ಕೆ ಹೆಮ್ಮೆ ತಂದಿದ್ದಾನೆ. ಕಂಪ್ಯೂಟರ್ ಸೈನ್ಸ್ ‌ಇಂಜಿನಿಯರ್ ಆಗಿರುವ ರಾಮ್ ದಾಸ್ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಕಳೆದ ಮೇ ತಿಂಗಳಲ್ಲಿ ಜಾರಿಯಾಗಿದ್ದ ಲಾಕ್ ಡೌನ್ ವೇಳೆ ತನ್ನೂರಿಗೆ ಭಾವ ಕಾರ್ತಿಕ್ ‌ಜೊತೆ ಆಗಮಿಸಿದ ರಾಮ್ ದಾಸ್,  ತನ್ನ ತಂದೆಗೆ ವ್ಯಾಕ್ಸಿನ್ ಕೊಡಿಸಲು ಮುಂದಾಗಿದ್ದಾನೆ.‌ ಬ್ರಹ್ಮಾವರ, ಕುಂದಾಪುರ ‌ತಾಲೂಕಿನಾಧ್ಯಂತ ವ್ಯಾಕ್ಸಿನ್ ಲಭ್ಯವಿರುವ ಕೇಂದ್ರ ಹುಡುಕಾಡಿ ಸುಸ್ತಾದ್ರು ವ್ಯಾಕ್ಸಿನ್ ಸಿಕ್ಕಿಲ್ಲ. ಕೊನೆಗೆ ಈ ವ್ಯಾಕ್ಸಿನ್ ಹುಡುಕಾಟದ ಕಿರಿಕಿರಿಯೇ ದೂರ ಮಾಡೋಣ ಅಂತ‌‌ ಮೇ 3ರಂದು ಸಾಫ್ಟ್‌ವೇರ್ ‌ಇಂಜಿನಿಯರ್ ಆಗಿರೋ ಭಾವ ಕಾರ್ತಿಕ್ ಜೊತೆ 15ದಿನಗಳ ಕಾಲ ಮನೆಯಲ್ಲಿಯೇ ಆ್ಯಪ್‌ ಸಿದ್ದಪಡಿಸಿ ಈ ಆ್ಯಪ್‌ ಮೂಲಕವೇ ವ್ಯಾಕ್ಸಿನ್ ಲಭ್ಯತೆ ಪತ್ತೆ ಹಚ್ಚಿ ಸುಲಭವಾಗಿ ಹೆತ್ತವರಗೆ ವ್ಯಾಕ್ಸಿನ್ ಕೊಡಿಸಿದ್ದಾನೆ‌ ರಾಮ್ ದಾಸ್. ಹೌದು, ಈ ಯುವಕರು‌ ಕಂಡು ಈ ಆ್ಯಪ್ ಹೆಸರು ' ವ್ಯಾಕ್ ಟ್ರ್ಯಾಕ್' (VAC TRACK)... ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿ ಆ್ಯಪ್‌ನಲ್ಲಿ ಯಾರಾದ್ರೂ ತಾವು ವಾಸವಿರುವ ಸ್ಥಳದ ಪಿನ್ ಕೋಡ್ ಹಾಕಿ ವ್ಯಾಕ್ಸಿನ್ ಪಡೆದುಕೊಳ್ಳಲಿರುವ ಕೇಂದ್ರವನ್ನ ಆಯ್ಕೆ ಮಾಡಿದ್ರೆ, ಆ ಕೇಂದ್ರದಲ್ಲಿ ಯಾವುದೇ ಸಮಯದಲ್ಲಿ  ವ್ಯಾಕ್ಸಿನ್ ಲಭ್ಯವಿದ್ದಾಗ ಮೊಬೈಲ್ ನಲ್ಲಿ ನೋಟಿಫಿಕೇಶನ್ ಬರುವುದರ ಜೊತೆಗೆ ಅದನ್ನ ಓದುವವರೆಗೆ ಎಲಾರ್ಮ್ ಸದ್ದು ನಿಲ್ಲಲ್ಲ.‌

ಇದನ್ನೂ ಓದಿ: Vaastu Tips: ಮಲಗುವಾಗ ನಿಮ್ಮ ತಲೆಯನ್ನು ಯಾವ ದಿಕ್ಕಿಗೆ ಇರಿಸಿದರೆ ಆರೋಗ್ಯ ಮತ್ತು ಸಂಪತ್ತು ಒಲಿಯುತ್ತದೆ?

ನೋಟಿಫಿಕೇಶನ್ ಓದಿ ಅಲಾರ್ಮ್ ನಿಲ್ಲಸುವವರೆಗೆ ವ್ಯಾಕ್ಸಿನ್ ಲಭ್ಯವಿದೆ ಎಂಬ ಸಂದೇಶ ತೋರಿಸುತ್ತೆ ಈ ಆ್ಯಪ್.  ಹೀಗಾಗಿ ಈ ಆ್ಯಪ್ ಮೂಲಕ ಬುಕ್ ಆಯ್ಕೆ ಮಾಡಿದ್ರೆ ನೇರವಾಗಿ ಕೋವಿನ್ ಆ್ಯಪ್‌ನಲ್ಲಿ ರಿಜಿಸ್ಟರ್ ಆಗುತ್ತೆ ಈ ಮೂಲಕ ಸುಲಭವಾಗಿ ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ. ಸಧ್ಯ 1 ಸಾವಿರಕ್ಕೂ ಅಧಿಕ ಮಂದಿ ಈ ಆ್ಯಪ್‌  ಡೌನ್ ಲೋಡ್ ಮಾಡಿದ್ದಾರೆ.‌ ಇಷ್ಟೇ ಅಲ್ಲ ಈ‌‌ ಆ್ಯಪ್‌ನಲ್ಲಿ ಅಪ್ ಡೇಟ್ ಕೂಡ ಮಾಡಲಾಗುತ್ತಿದೆ. ಇನ್ನು‌ ಕೆಲವು ‌ದಿನಗಳಲ್ಲೇ ಯಾವ ವ್ಯಾಕ್ಸಿನ್ ಯಾವ ವಯಸ್ಸು ಹೀಗೆ ಸಂಪೂರ್ಣ ಆಯ್ಕೆ ‌ಕೂಡ ಸಿಗಲಿದೆ. ಈ ಮೂಲಕ ಪ್ರತೀ ದಿನ ಕೋವಿನ್ (COWIN) ಆ್ಯಪ್‌ ನಲ್ಲಿ ಪಿನ್ ಕೋಡ್ ಹಾಕಿ ಸ್ಲಾಟ್ ಅಂದ್ರೆ ವ್ಯಾಕ್ಸಿನ್ ಲಭ್ಯತೆ ಹುಡುಕಾಡೋ‌ ಸನ್ನಿವೇಶ ಈ ವ್ಯಾಕ್‌‌ಟ್ರಾಕ್ (VAC TRACK) ಮೂಲಕ ದೂರವಾಗುತ್ತೆ.  ಇನ್ನು ಈ ಆ್ಯಪ್‌ಕಂಡುಹಿಡಿದ ರಾಮ್ ದಾಸ್ ಹಾಗೂ ಕಾರ್ತಿಕ್ ನ್ಯೂಸ್18ಕನ್ನಡ ಕ್ಕೆ‌‌ ಪ್ರತಿಕ್ರಿಯಿಸಿದ್ದು ಹೀಗೆ.‌

ನಾವು ಹೆತ್ತವರಿಗೆ ವ್ಯಾಕ್ಸಿನ್‌ ಹುಡುಕಾಡಲು ಕಷ್ಟಪಟ್ಟದ್ದಕ್ಕೆ ಆ್ಯಪ್‌ ಸಿದ್ದಪಡಿಸಲು ಪ್ರೇರಣೆ ಸಿಕ್ಕಿದೆ.‌ ನಾನು ಆ್ಯಪ್‌ಸಿದ್ದಪಡಿಸಿದ ಬಳಿಕ‌‌ ಭಾವ ಕಾರ್ತಿಕ್‌ ಕೋವಿನ್ ಆಪ್ ನನ್ನ ಆ್ಯಪ್‌ಗೆ‌ ಸಂಪರ್ಕ ಮಾಡಲು‌ ಸಹಕರಿಸಿದ್ರು. ಹೀಗೆ ನಾವು ಈ ಆ್ಯಪ್ ಕಂಡುಹಿಡಿಯುವ ಮೂಲಕ ಬಹಳಷ್ಟು ಮಂದಿಗೆ ವ್ಯಾಕ್ಸಿನ್ ‌ಸಿಗುವಂತಾಗಿರುವುದು ಖುಷಿ‌ ಕೊಟ್ಟಿದೆ. ಪ್ರತಿಯೊಬ್ಬರು ವ್ಯಾಕ್ ಟ್ರ್ಯಾಕ್ ಮೂಲಕ ಸುಲಭವಾಗಿ ವ್ಯಾಕ್ಸಿನ್ ಪಡೆಯಬಹದು. ನಮಗೆ ಈ‌‌ ಆ್ಯಪ್‌ ಮೂಲಕ  ಯಾವುದೇ ಲಾಭವಿಲ್ಲ. ಆದ್ರೆ ಇದು ಒಂದು ರೀತಿ ಸಮಾಜ‌‌ ಸೇವೆ. ಮುಂದಿನ‌‌ ದಿನಗಳಲ್ಲಿ ಸಮಾಜಕ್ಕೆ ಅಗತ್ಯವಾಗೋ ಯಾವುದೇ ಆ್ಯಪ್‌ ‌(APP) ಬೇಡಿಕೆ‌ ಬಂದಲ್ಲಿ ‌ನಾವು ಸಿದ್ದಪಡಿಸುತ್ತೇವೆ ಅಂತ ಹೇಳಿದ್ರು. ‌  ಸಧ್ಯ ಅದೆಷ್ಟೊ ಮಂದಿಗೆ ವ್ಯಾಕ್ಸಿನ್ ಹುಡುಕಾಟದ ಕಿರಿಕಿರಿ ಈ ಆ್ಯಪ್ ಒಂದು ತಪ್ಪಿಸಿದೆ.‌ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಈ ಆ್ಯಪ್ ಪರಿಚಯಿಸಿದ್ರೆ ವ್ಯಾಕ್ಸಿನ್ ಪಡೆಯಲು ಸರತಿ ಸಾಲು ಕಡಿಮೆ ಮಾಡುವ ಜೊತೆಗೆ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗುವಂತೆ ಮಾಡಬಹುದು.
Published by:Soumya KN
First published: