• Home
  • »
  • News
  • »
  • district
  • »
  • 2 ವರ್ಷಗಳ ಅಂತರದಲ್ಲಿ ಒಂದೇ ಮನೆಯಲ್ಲಿ 2 ಬಾರಿ ಕಳ್ಳತನ; Prime Minister ಕಚೇರಿವರೆಗೆ ತಲುಪಿದ ಸುದ್ದಿ!

2 ವರ್ಷಗಳ ಅಂತರದಲ್ಲಿ ಒಂದೇ ಮನೆಯಲ್ಲಿ 2 ಬಾರಿ ಕಳ್ಳತನ; Prime Minister ಕಚೇರಿವರೆಗೆ ತಲುಪಿದ ಸುದ್ದಿ!

ಒಂದೇ ಮನೆಯಲ್ಲಿ 2 ಸಲ ಕಳ್ಳತನ

ಒಂದೇ ಮನೆಯಲ್ಲಿ 2 ಸಲ ಕಳ್ಳತನ

ಬೇರೆ ದಾರಿ ಕಾಣದ ಕಾವ್ಯ ಅವರು ತಮ್ಮ ಸ್ಥಿತಿಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಪ್ರಧಾನಿ ಮೋದಿಯವರ ಕಚೇರಿಯಿಂದ ಪೊನ್ನಂಪೇಟೆ ಪೊಲೀಸ್ ಠಾಣೆಗೂ ಕ್ರಮ ವಹಿಸುವಂತೆ ಸೂಚನೆ ಪತ್ರವೂ ಬಂದಿತ್ತು. ಆದರೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಮಾತ್ರ ಯಶಸ್ವಿ ಆಗಿಲ್ಲ.

ಮುಂದೆ ಓದಿ ...
  • Share this:

ಕೊಡಗು :  ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ 576 ಗ್ರಾಂ ಗೂ ಹೆಚ್ಚು ಚಿನ್ನಾಭರಣ ಕಳುವಾಗಿ (Gold Jewellery Theft) 5 ವರ್ಷಗಳೇ ಕಳೆದರೂ ಇಂದಿಗೂ ತಮ್ಮ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಮನೆಯ ಒಡತಿ ಕಾವ್ಯಶ್ರೀ ಅವರು 2018 ರಲ್ಲಿ ಪ್ರಧಾನ ಮಂತ್ರಿಯವರಿಗೆ (Prime Minister) ಪತ್ರ (Letter) ಬರೆದು ಅವರ ಮೊರೆ ಹೋಗಿದ್ದರು. ಅದಾಗಿ ಮೂರು ವರ್ಷವಾದರೂ ಇಂದಿಗೂ  ವಸ್ತುಗಳೂ ಪತ್ತೆಯಾಗಿಲ್ಲ. ಹೀಗಾಗಿ ಆ ಮಹಿಳೆ ಎಸ್ಪಿ ಕಚೇರಿ (SP Office), ಮಾಧ್ಯಮಗಳ (Media) ಎದುರು ಬೇಡುತ್ತಿದ್ದಾರೆ. ಯಾರಿಗೂ ಗೊತ್ತಾಗದಂತೆ ಕಿಡಿಗೇಡಿಗಳು ಎಷ್ಟೇ ಜಾಗರೂಕರಾಗಿ ತಮ್ಮ ಕೈಚಳಕ ತೋರಿಸಿದರೂ ಒಂದಲ್ಲ ಒಂದು ಕ್ಲೂ ಅನ್ನು ಬಿಟ್ಟಿರುತ್ತಾರೆ. ಆ ಜಾಡನ್ನೇ ಹಿಡಿವ ಪೊಲೀಸರು ಖದೀಮರನ್ನು ಹೆಡೆಮುರಿ ಕಟ್ಟುತ್ತಾರೆ. ಆದರೆ ಇಲ್ಲಿ ಕಳ್ಳತನ ಆಗಿರೋದು ಪೊಲೀಸ್ ಠಾಣೆ ಎದುರಿನಲ್ಲೇ. ನಾಲ್ಕಾರು ಚಿನ್ನದ ಚೈನ್, ಹತ್ತಾರು ಜೊತೆ ಕಿವಿಯೋಲೆ ಸೇರಿದಂತೆ ಮನೆಯಲ್ಲಿದ್ದ ಇಡೀ ಚಿನ್ನಾಭರಣಗಳನ್ನು ಕದ್ದೊಯ್ದಿದ್ದರು.


ಪೊಲೀಸರ ಕಾರ್ಯಾಚರಣೆ ವಿರುದ್ಧ ಅಸಮಾಧಾನ 


ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ ಪೊಲೀಸ್ ಠಾಣೆಯ ಎದುರೇ ಕಾವ್ಯಶ್ರೀ ಮತ್ತು ಉತ್ತಪ್ಪ ದಂಪತಿಯ ಮನೆಯಲ್ಲಿ 2016 ರಲ್ಲಿ ಮನೆ ಕಳವಾಗಿತ್ತು.  ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದರು. ಡಾಗ್ ಸ್ಕ್ವಾಡ್ ಕೂಡ ಬಂದು ಪರಿಶೀಲನೆ ಮಾಡಿತ್ತು. ಆದರೆ ಯಾವುದೇ ಸುಳಿವು ದೊರೆತ್ತಿರಲಿಲ್ಲವಂತೆ. 576 ಗ್ರಾಂ ಗೂ ಹೆಚ್ಚು ಚಿನ್ನ, ಬೆಳ್ಳಿಯ ವಸ್ತುಗಳ ಕಳವಾಗಿದ್ದರೂ ಪೊಲೀಸರು ಮಾತ್ರ ಆ ಪ್ರಕರಣವನ್ನು ಯಾಕೆ ಅಷ್ಟು ಲಘುವಾಗಿ ತೆಗೆದುಕೊಂಡರೇ ಎನ್ನೋ ಪ್ರಶ್ನೆ ಉದ್ಭವಿಸದೆ ಇರಲಾರದು.


2ನೇ ಬಾರಿ ಕಳ್ಳತನದಿಂದ ದಂಪತಿ ಕಂಗಾಲು 


ಮನೆಯ ಮುಂಬಾಗಿಲಿನ ಬೀಗ ಹೊಡೆದಿದ್ದ ಖದೀಮರು ಮನೆಯಲ್ಲಿ ಬೀರು ಹೊಡೆದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ 2016 ರ ರಲ್ಲೇ ಪ್ರಕರಣ ದಾಖಲಾಗಿತ್ತು. ಅಂದು ದೂರು ನೀಡಿದ್ದ ಕಾವ್ಯಶ್ರೀ ಅವರು ಪೊಲೀಸರು ಹುಡುಕುತ್ತಾರೆ ಎಂದು ಸುಮ್ಮನಾಗಿದ್ದರು. ಮತ್ತೆ ಎರಡು ವರ್ಷಗಳಲ್ಲೇ ಕಾವ್ಯ ಮತ್ತು ಉತ್ತಪ್ಪ ದಂಪತಿ ಇಬ್ಬರೂ ದುಡಿದ ಸಂಬಳ ತಮ್ಮ ತೋಟದ ಆದಾಯ ಎಲ್ಲವನ್ನೂ ಒಂದಷ್ಟು ಉಳಿತಾಯ ಮಾಡಿ ಮತ್ತೆ ಚಿನ್ನಾಭರಣ ಸಂಪಾದಿಸಿದ್ದರು. ವಿಪರ್ಯಾಸವೆಂದರೆ 2018 ರಲ್ಲಿ ಮತ್ತೆ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಆಗ ಕಾವ್ಯಶ್ರೀ ದಂಪತಿಗಳು ಸಂಪೂರ್ಣ ಕುಗ್ಗಿ ಹೋಗಿದ್ದರು. 


ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿ ಕಚೇರಿಯಿಂದ ಸೂಚನೆ


ಬೇರೆ ದಾರಿ ಕಾಣದ ಕಾವ್ಯ ಅವರು ತಮ್ಮ ಸ್ಥಿತಿಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಪ್ರಧಾನಿ ಮೋದಿಯವರ ಕಚೇರಿಯಿಂದ ಪೊನ್ನಂಪೇಟೆ ಪೊಲೀಸ್ ಠಾಣೆಗೂ ಕ್ರಮ ವಹಿಸುವಂತೆ ಸೂಚನೆ ಪತ್ರವೂ ಬಂದಿತ್ತು. ಆದರೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಮಾತ್ರ ಯಶಸ್ವಿ ಆಗಿಲ್ಲ. ಹೀಗಾಗಿಯೇ ಮಹಿಳೆ ಕಾವ್ಯ ಅವರು ಇದೀಗ ಎಸ್ಪಿ ಕಚೇರಿ ಮತ್ತು ಮಾಧ್ಯಮಗಳನ್ನು ಎಡತಾಕುವಂತೆ ಆಗಿದೆ.


ಇದನ್ನೂ ಓದಿ: Bitcoin Scamನಲ್ಲಿ ಕಾಂಗ್ರೆಸ್ ನಾಯಕರಾದ ಹ್ಯಾರೀಸ್, ಲಮಾಣಿ ಪುತ್ರರು ಭಾಗಿಯಾಗಿದ್ದಾರೆ: BJP ಆರೋಪ


ಇತ್ತೀಚೆಗೆ ಬೆಂಗಳೂರಿನಲ್ಲಿ ಸಿನಿಮೀಯ ಶೈಲಿಯಲ್ಲಿ (Filmy Style Robbery) ಒಂಟಿ ಮಹಿಳೆ ಮನೆಗೆ ನುಗ್ಗಿ ಕಳ್ಳತನ ಮಾಡಿರೋ ಘಟನೆ ನಡೆದಿದೆ. ಇದೇ ತಿಂಗಳ 6 ನೇ ತಾರೀಖು ಸಂಜೆ ಏಳು ಗಂಟೆ ಸುಮಾರಿಗೆ ದಂಡುಪಾಳ್ಯದ ಗ್ಯಾಂಗ್ ನಂತೇ (Dandupalya Gang) ಮಹಿಳೆಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ರು. ಮನೆಯಲ್ಲಿ ಕಳ್ಳತನವಾಗಿರುವ (Robbery) ಬಗ್ಗೆ ಯಾರಿಗಾದರೂ ಹೇಳಿದರೆ ಜೀವಸಹಿತ ಬಿಡುವುದಿಲ್ಲ. ನಾವು ಈಗಾಗಲೇ ಎಂಟು ಕೊಲೆ ಮಾಡಿದ್ದೇನೆ. ಪೊಲೀಸರಿಗೆ ವಿಷಯ ತಿಳಿಸಿದರೆ 9ನೇ ಕೊಲೆ ನೀನೇ ಆಗುವೆ ಎಂದು ಕಳ್ಳತನ ಮಾಡಿದ ಮನೆಯ ಮಾಲಕಿಗೆ ಸಿನಿಮೀಯ ಶೈಲಿಯಲ್ಲಿ ಬೆದರಿಸಿ(Threat) ಖದೀಮನನ್ನು ಚಿಕ್ಕಜಾಲ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

Published by:Kavya V
First published: