• Home
  • »
  • News
  • »
  • district
  • »
  • Corona Death: ಕಳೆದ ಹತ್ತು‌ ದಿನದಲ್ಲಿ 170 ಸಾವು, ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಹೆಚ್ಚಿದ ಆತಂಕ!

Corona Death: ಕಳೆದ ಹತ್ತು‌ ದಿನದಲ್ಲಿ 170 ಸಾವು, ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಹೆಚ್ಚಿದ ಆತಂಕ!

ಕೊರೋನಾ ಸೋಂಕಿತ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ.

ಕೊರೋನಾ ಸೋಂಕಿತ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ.

ದಿನೇ ದಿನೇ ಸಾವಿನ ಸಂಖ್ಯೆ ಯಥಾ ಸ್ಥಿತಿಯಲ್ಲಾಗುತ್ತಿದ್ದು, ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ವಾರ್ಡಿನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೇ ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

  • Share this:

ಕಾರವಾರ (ಮೇ 25); ಕೊರೋನಾ ಎರಡನೇ ಅಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ಹೆಚ್ಚಳದೊಂದಿಗೆ ಸಾವಿನ ಪ್ರಮಾಣವೂ ಹೆಚ್ಚಾಗಿರುವುದು ಎಲ್ಲರಲ್ಲೂ ಆತಂಕವನ್ನ ಸೃಷ್ಟಿಮಾಡಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಹತ್ತು ದಿನದಲ್ಲಿ 171 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದು, ರಾಜ್ಯದಲ್ಲಿಯೇ ಅತಿಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಯ ಪಟ್ಟಿಗಳಲ್ಲಿದೆ. ಇನ್ನು ಕೊರೋನಾ ಸೋಂಕಿತರಿಗೆ ಚಿಕಿತ್ಸೆಗೆ ಹೆಚ್ಚಿನ ಗಮನವನ್ನ ಕೊಡುತ್ತಿದ್ದರು ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ನಡುವೆ ಕಳೆದ ಹತ್ತು ದಿನದಲ್ಲಿ 171 ಜನ ಸೋಂಕಿಗೆ ಬಲಿಯಾಗಿದ್ದು ಜಿಲ್ಲೆಯ ಜನರನ್ನ ಇನ್ನಷ್ಟು ಆತಂಕ ಪಡುವಂತೆ ಮಾಡಿದೆ.


ಹೇಗಿದೆ ಅಂಕಿ ಅಂಶ?


ಕಳೆದ ಮೇ 14ರಂದು 8 ಜನ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾಗಿದ್ದರೆ, 15 ರಂದು 8, 16 ರಂದು 21, 17 ರಂದು 15, 18 ರಂದು 27, 19 ರಂದು 11, 20 ರಂದು 16, ಮೇ 21 ರಂದು 16, 22 ರಂದು 21, 23 ರಂದು 18 ಹಾಗೂ 24 ರಂದು 10 ಸೋಂಕಿತರು ಜಿಲ್ಲೆಯಲ್ಲಿ ಬಲಿಯಾಗಿದ್ದಾರೆ. ಇನ್ನು ಜಿಲ್ಲೆಯ ಶಿರಸಿ ಹಾಗೂ ದಾಂಡೇಲಿ ತಾಲೂಕು ಒಳಗೊಂಡ ಹಳಿಯಾಳದಲ್ಲಿ ತಲಾ 33 ಮಂದಿ ಕೊರೋನಾ ಸೋಂಕಿಗೆ ಬಲಿಯಾಗುವ ಮೂಲಕ ಜಿಲ್ಲೆಯಲ್ಲಿಯೇ ಅತಿಹೆಚ್ಚು ಸೋಂಕಿತರು ಮೃತಪಟ್ಟ ತಾಲೂಕುಳಾಗಿವೆ.


ಇನ್ನು ಮುಂಡಗೋಡದಲ್ಲಿ 21, ಕಾರವಾರದಲ್ಲಿ 23, ಹೊನ್ನಾವರದಲ್ಲಿ 19, ಭಟ್ಕಳದಲ್ಲಿ 10, ಅಂಕೋಲಾದಲ್ಲಿ 13, ಸಿದ್ದಾಪುರದಲ್ಲಿ 6, ಜೊಯಿಡಾದಲ್ಲಿ 9, ಯಲ್ಲಾಪುರದಲ್ಲಿ ಈರ್ವರು ಸೋಂಕಿತರು ಬಲಿಯಾಗಿದ್ದಾರೆ. ಕುಮಟಾ ಪಟ್ಟಣದಲ್ಲಿ ಮಾತ್ರ ಕಳೆದ ಹತ್ತು ದಿನಗಳಲ್ಲಿ ಸೋಮವಾರ (ಮೇ 24) ಓರ್ವ ಮೃತಪಟ್ಟಿದ್ದಾನೆ.ಕಳೆದ ಎಂಟು ದಿನದಿಂದ ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಸಾವಿನ ಸಂಖ್ಯೆ ದಾಖಲಾಗುತ್ತಿದೆ.


ಇದನ್ನೂ ಓದಿ: ಕಪ್ಪು ಶಿಲೀಂಧ್ರ: ಹೆಚ್ಚುತ್ತಿರುವ ಆತಂಕ ಎದುರಿಸಲು ಭಾರತದ ಪ್ಲ್ಯಾನ್‌ ಏನು..? ಏಮ್ಸ್ ವೈದ್ಯರು ಹೇಳಿದ್ದು ಹೀಗೆ..!


ದಿನೇ ದಿನೇ ಸಾವಿನ ಸಂಖ್ಯೆ ಯಥಾ ಸ್ಥಿತಿಯಲ್ಲಾಗುತ್ತಿದ್ದು, ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ವಾರ್ಡಿನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೇ ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ ಎನ್ನಲಾಗಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಸೋಂಕಿತರ ಸಂಖ್ಯೆಗಿಂತ ಹೆಚ್ಚಾಗಿದೆ.


ಆದರೆ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗದೇ ಅದೇ ಸ್ಥಿತಿಯಲ್ಲಿರುವುದು ಈ ಬಗ್ಗೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಇನ್ನಷ್ಟು ಆಸಕ್ತಿ ವಹಿಸಿ ಜನರ ಸಾವಿನ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.


ಇದನ್ನೂ ಓದಿ: PM Caresಗೆ 2.5 ಲಕ್ಷ ದೇಣಿಗೆ ನೀಡಿದ್ದವನ ತಾಯಿ ಬೆಡ್ ಸಿಗದೆ ಸಾವು; ಇನ್ನೆಷ್ಟು ದೇಣಿಗೆ ಬೇಕು ಎಂದ ವ್ಯಕ್ತಿ


ನಿಯಂತ್ರಣ ತರುವಲ್ಲಿ ಜಿಲ್ಲಾಡಳಿತ ವಿಫಲವಾಯಿತೇ...?:


ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಪಾಸಿಟಿವಿಟಿ ರೇಟ್‌ನಲ್ಲಿ ಹೆಚ್ಚಿದ್ದು, ಜಿಲ್ಲಾಡಳಿತದ ತಡವಾದ ತೀರ್ಮಾನ ಸೋಂಕಿನ ಹೆಚ್ಚಳಕ್ಕೆ ಕಾರಣವಾಯಿತೇ ಎನ್ನುವ ಮಾತು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೊರೋನಾ ಪ್ರಕರಣ ಕಡಿಮೆ ಇರುವ ವೇಳೆಯಲ್ಲಿಯೇ ಜಿಲ್ಲೆಗೆ ಮಹಾರಾಷ್ಟ್ರ ಹಾಗೂ ಬೆಂಗಳೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಇನ್ನು ಹೊರ ಊರಿನಿಂದ ಬಂದವರು ಮದುವೆ, ಕಾರ್ಯಕ್ರಮ ಗಳಿಗೆ ತಿರುಗಾಟ ಮಾಡುವುದಲ್ಲದೇ, ಯಾರ ಭಯವಿಲ್ಲದೇ ಊರೆಲ್ಲ ಸುತ್ತಾಟ ನಡೆಸಿದ್ದರು. ಇದು ಸೋಂಕು ಗ್ರಾಮೀಣ ಪ್ರದೇಶದಲ್ಲೂ ಹರಡಲು ಪ್ರಮುಖ ಕಾರಣವಾಗಿತ್ತು.


ಆ ವೇಳೆಯೇ ಜಿಲ್ಲಾಡಳಿತ ಹೊರ ಊರಿನಿಂದ ಬಂದವರಿಗೆ ಸೀಲ್ ಹಾಕಿ ಕ್ವಾರಂಟೈನ್ ಮಾಡಿದ್ದರೆ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣವನ್ನ ಕಡಿಮೆ ಮಾಡಬಹು ದಿತ್ತು. ಹೋಂ ಕ್ವಾರಂಟೈನ್ ಗೆ ಹೆಚ್ಚಿನ ಒತ್ತು ನೀಡಿದ್ದು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರ ತೆರೆಯುವಲ್ಲಿ ನಿಧಾನಗತಿ ಮಾಡಿದರು.


ಸೋಂಕಿನ ಪ್ರಮಾಣ ಹೆಚ್ಚಳವಾದ ನಂತರ ಗಡಿಯಲ್ಲಿ ಭದ್ರತೆ ಹಾಕಿ ಹೊರ ಊರಿನಿಂದ ಬಂದವರಿಗೆ ಸೀಲ್ ಹಾಕುವ, ಹೋಂ ಕ್ವಾರಂಟೈನ್ ಬಯಸದೇ ಇರುವವರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇರಲು ಆದೇಶಿಸಿದ್ದು, ಜಿಲ್ಲಾಡಳಿತದ ಆದೇಶ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತಾಗಿತ್ತು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Published by:MAshok Kumar
First published: