ರಾಜ್ಯದಲ್ಲಿ ಅತಿವೃಷ್ಟಿಯಿಂದ 1685 ಕಿ.ಮೀ. ರಸ್ತೆ , 456 ಸೇತುವೆ ಹಾನಿ; ಡಿಸಿಎಂ ಗೋವಿಂದ ಕಾರಜೋಳ

ಬಾಗಲಕೋಟೆ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದ್ದು,  ಲೋಕೋಪಯೋಗಿ ಇಲಾಖೆಯ ಹಾನಿಗೊಳಗಾದ  ಸಾರ್ವಜನಿಕ ಆಸ್ತಿಪಾಸ್ತಿಯನ್ನು ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ.

news18-kannada
Updated:August 14, 2020, 9:16 PM IST
ರಾಜ್ಯದಲ್ಲಿ ಅತಿವೃಷ್ಟಿಯಿಂದ 1685 ಕಿ.ಮೀ. ರಸ್ತೆ , 456 ಸೇತುವೆ ಹಾನಿ; ಡಿಸಿಎಂ ಗೋವಿಂದ ಕಾರಜೋಳ
ಗೋವಿಂದ ಕಾರಜೋಳ.
  • Share this:
ಬಾಗಲಕೋಟೆ ( ಆ.14 ): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ  ಪ್ರವಾಹದಿಂದ ಲೋಕೋಪಯೋಗಿ ಉಲಾಖೆಯ 1685 ಕಿ.ಮೀ‌ ರಸ್ತೆ, 456 ಸೇತುವೆ ಹಾಗೂ 46 ಕಟ್ಟಡಗಳು ಹಾನಿಗೊಳಗಾಗಿದೆ. ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು  2697 ಕೋಟಿ ರೂ ಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ‌ ಗೋವಿಂದ  ಕಾರಜೋಳ  ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದ್ದು,  ಲೋಕೋಪಯೋಗಿ ಇಲಾಖೆಯ ಹಾನಿಗೊಳಗಾದ  ಸಾರ್ವಜನಿಕ ಆಸ್ತಿಪಾಸ್ತಿಯನ್ನು ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ  2.65 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಪೈಕಿ 2.36 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಈ ವರೆಗೆ 98952 ಮೆಟ್ರಿಕ್ ಟನ್ ರಸಗೊಬ್ಬರವನ್ನು ರೈತರಿಗೆ ಪೂರೈಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಯೂರಿಯಾ 29,950 ಮೆ.ಟನ್ ಅವಶ್ಯಕತೆಗೆ 37,559 ಮೆ.ಟನ್ ಪೂರೈಸಲಾಗಿದೆ. ಡಿಎಪಿ 18,982 ಮೆ.ಟನ್, ಕಾಂಪ್ಲೇಕ್ಸ್ 26752 ಮೆ.ಟನ್, ಎಂಒಪಿ 14226 ಮೆ.ಟನ್, ಎಸ್ಎಸ್.ಎ 1433 ಮೆ.ಟನ್ ಪೂರೈಸಲಾಗಿದೆ ಎಂದರು. ಜುಲೈ ಮಾಹೆಯಲ್ಲಿ ಕಾಪುದಾಸ್ತು ಅಡಿ ಸಹಕಾರ ಸಂಘಗಳಿಗೆ 3,436 ಮೆ.ಟನ್, ಖಾಸಗಿ ವಿತರಕರಿಗೆ 2,672 ಮೆ.ಟನ್ ಯೂರಿಯಾ ಗೊಬ್ಬರ ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಸರ್ಕಾರವನ್ನು ಕೆಡವಲು ಯತ್ನಿಸಿದವರ ಕುತಂತ್ರ ವಿಫಲವಾಗಿದೆ; ಬಿಜೆಪಿ ನಾಯಕರ ವಿರುದ್ಧ ಅಶೋಕ್ ಗೆಹ್ಲೋಟ್‌ ಕಿಡಿ

ಕೋವಿಡ್ ಲಾಕ್‌ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಮುಸುಕಿನ ಜೋಳದ ಪ್ರತಿ ರೈತರಿಗೆ 5 ಸಾವಿರ ರೂ.ಗಳಂತೆ ಜಿಲ್ಲೆಯ 27,855 ರೈತರಿಗೆ 13.92 ಕೋಟಿ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ. ಬಿತ್ತನೆ ಬೀಜ ಯೋಜನೆಯಡಿ 1.39 ಕೋಟಿ ಸಹಾಯಧನದಲ್ಲಿ ಜಿಲ್ಲೆಯ 55,560 ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ಬೆಳೆ ವಿಮೆ ಯೋಜನೆಯಡಿ 2018-19ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನಲ್ಲಿ 65011 ರೈತರಿಗೆ 114.89 ಕೋಟಿ ರೂ. ಬೆಳೆ ವಿಮೆ‌ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.

ಪೊಲೀಸರಿಂದ ಅರಣ್ಯೀಕರಣ-ಕಾರಜೋಳ ಶ್ಲಾಘನೆ!!ಬಾಗಲಕೋಟೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಲೋಕೇಶ್ ಜಗಲಾಸರ ಅವರ ನೇತೃತ್ವದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಸಾಮಾಜಿಕ  ಅರಣ್ಯೀಕರಣಗೊಳಿಸಿರುವ ಪ್ರದೇಶಕ್ಕೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ ಅವರು ಭೇಟಿ ನೀಡಿ, ಮುಕ್ತಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ  ಶಾಸಕರಾದ ಡಾ.ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ರಾಜೇಂದ್ರ, ಸಿಇಓ‌ ಮತ್ತಿತರರು ಉಪಸ್ಥಿತರಿದ್ದರು.
Published by: MAshok Kumar
First published: August 14, 2020, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading