• Home
  • »
  • News
  • »
  • district
  • »
  • ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶೇ.16ರಷ್ಟು ಕುಲಗೆಟ್ಟ ಮತಗಳು; ಸುಶಿಕ್ಷಿತರ ಎಡವಟ್ಟಿಗೆ ವಿಭಿನ್ನ ವ್ಯಾಖ್ಯಾನ

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶೇ.16ರಷ್ಟು ಕುಲಗೆಟ್ಟ ಮತಗಳು; ಸುಶಿಕ್ಷಿತರ ಎಡವಟ್ಟಿಗೆ ವಿಭಿನ್ನ ವ್ಯಾಖ್ಯಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ಪದವೀಧರ ಕ್ಷೇತ್ರದ ಮತದಾರರು ಎಂದರೆ ಸುಶಿಕ್ಷತರು ಅವರಿಗೆ ಹೆಚ್ಚು ಹೇಳುವುದರಲ್ಲಿ ಅರ್ಥವಿಲ್ಲ ಎಂಬ ಭಾವನೆ ಇರೋದು ಸಹಜ. ಆದರೆ, ಮತ ಎಣಿಕೆಯ ನಂತರ ಕುಲಗೆಟ್ಟ ಮತಗಳನ್ನು ನೋಡಿದಾಗ, ಕುಲಗೆಟ್ಟ ಮತಗಳ ಸಂಖ್ಯೆ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಪಡೆದ ಒಟ್ಟು ಮತಗಳಿಗಿಂತ ಹೆಚ್ಚಾಗಿವೆ.

ಮುಂದೆ ಓದಿ ...
  • Share this:

ಹುಬ್ಬಳ್ಳಿ; ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶೇಕಡಾ 16ರಷ್ಟು ಮತಗಳು ಕುಲಗೆಟ್ಟಿವೆ. ಹೀಗಾಗಿ ಮತ ಹಾಕಿರುವ ಪದವೀಧರ ಮತದಾರರ ಬಗ್ಗೆಯೇ ಹಲವು ರೀತಿಯ ವ್ಯಾಖ್ಯಾನ ಮಾಡುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಗಳಲ್ಲೂ ಇಷ್ಟೊಂದು ಮತಗಳು ಕುಲಗೆಡುವುದಿಲ್ಲ. ಆದರೆ ಪದವೀಧರರೇ ತಪ್ಪು ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.


ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಚುನಾವಣೆಯಲ್ಲಿ ಒಟ್ಟು 52068 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಬರೋಬ್ಬರಿ 8772 ಮತಗಳು ಕುಲಗೆಟ್ಟಿದ್ದು, ದಾಖಲೆಯನ್ನೇ ಸೃಷ್ಟಿಸಿದೆ. ಅಷ್ಟೇ ಅಲ್ಲ, ಜಾತ್ಯತೀತ ಜನತಾದಳ ಶಿವಶಂಕರ ಕಲ್ಲೂರು ಅವರು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದರು. ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಆದರೆ ಶಿವಶಂಕರ್ ಕಲ್ಲೂರ್ ಅವರಿಗೂ 102 ಮತಗಳನ್ನು ಹಾಕಲಾಗಿದೆ. ಹಾಗಾದರೆ, ಈ ಚುನಾವಣೆಯಲ್ಲಿ ಎಂತಹವರು ಮತ ಹಾಕಿದ್ದಾರೆಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಪದವೀಧರ ಕ್ಷೇತ್ರದ ಮತದಾರರು ಎಂದರೆ ಸುಶಿಕ್ಷತರು ಅವರಿಗೆ ಹೆಚ್ಚು ಹೇಳುವುದರಲ್ಲಿ ಅರ್ಥವಿಲ್ಲ ಎಂಬ ಭಾವನೆ ಇರೋದು ಸಹಜ. ಆದರೆ, ಮತ ಎಣಿಕೆಯ ನಂತರ ಕುಲಗೆಟ್ಟ ಮತಗಳನ್ನು ನೋಡಿದಾಗ, ಕುಲಗೆಟ್ಟ ಮತಗಳ ಸಂಖ್ಯೆ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಪಡೆದ ಒಟ್ಟು ಮತಗಳಿಗಿಂತ ಹೆಚ್ಚಾಗಿವೆ.


ಇದನ್ನು ಓದಿ: ದೀಪಾವಳಿ ಬಳಿಕ ಶಾಲಾ ಆರಂಭ ದಿನಾಂಕ ನಿಗದಿ?; ಆರ್​​ಟಿಇ ವಿದ್ಯಾರ್ಥಿ, ಪೋಷಕರ ಸಂಘದಿಂದ ಸರ್ಕಾರಕ್ಕೆ ಸಲಹೆ


ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘ ಮಂಡಳಿ ಚುನಾವಣೆ: 109 ನಾಮಪತ್ರಗಳು ಕ್ರಮಬದ್ದ


ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಆಡಳಿತ ಮಂಡಳಿ ಸದಸ್ಯ ಸ್ಥಾನಗಳ ಚುನಾವಣೆಗೆ, ಒಟ್ಟು 110 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ 109 ನಾಮಪತ್ರಗಳು ಕ್ರಮಬದ್ದವಾಗಿವೆ. ಒಬ್ಬ ಅಭ್ಯರ್ಥಿಯ ನಾಮಪತ್ರದಲ್ಲಿ ಸೂಚಕರ ಬದಲಾಗಿ ಅಭ್ಯರ್ಥಿಯೇ ಸಹಿ ಮಾಡಿದ್ದರಿಂದ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಸಾಮಾನ್ಯ 74, ಮಹಿಳೆ 11, ಹಿಂದುಳಿದ ಅ ವರ್ಗ 07, ಹಿಂದುಳಿದ ಬ ವರ್ಗ 05, ಪರಿಶಿಷ್ಟ ಜಾತಿ 05, ಪರಿಶಿಷ್ಟ ಪಂಗಡ 07 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಂದು (ನ.12) ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ನಂತರ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಹಂಚಿಕೆ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗುವುದು.


ನವೆಂಬರ್ 19 ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ಲ್ಯಾಮಿಂಗ್ಟನ್ ಶಾಲೆಯಲ್ಲಿ ಮತದಾನ ಜರುಗಲಿದೆ. ನಂತರ ಮತ ಎಣಿಕೆ ನೆಡಸಿ ವಿಜೇತ ಅಭ್ಯರ್ಥಿಗಳನ್ನು ಘೋಷಿಸಲಾಗುವುದು. ಒಟ್ಟು 2302 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಹುಬ್ಬಳ್ಳಿ ನಗರ ತಹಸೀಲ್ದಾರ್ ಹಾಗೂ ರಿಟರ್ನಿಂಗ್ ಆಫೀಸರ್ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.

Published by:HR Ramesh
First published: