ಬಸ್ ಕಂಡಕ್ಟರ್ ನಿಂದ 16 ಜನರಿಗೆ ಸೋಂಕು; ಯಾದಗಿರಿ ಬಸ್ ಡಿಪೋ ಸೀಲ್‌ಡೌನ್, ಸಾರಿಗೆ ಸಿಬ್ಬಂದಿಗಳಲ್ಲಿ ಆತಂಕ...!

ಸುರಪುರ ಬಸ್ ಘಟಕದಲ್ಲಿ 335 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು ಎಲ್ಲಾ ಸಿಬ್ಬಂದಿಗಳ ಸ್ಯಾಂಪಲ್‌ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿವರಗೆ 300 ಜನರ ಸ್ಯಾಂಪಲ್‌ ಸಂಗ್ರಹ ಮಾಡಲಾಗಿದ್ದು ಅದರಲ್ಲಿ 60 ಜನರ ಸ್ಯಾಂಪಲ್‌ ವರದಿ ನೆಗೆಟಿವ್ ಬಂದಿದೆ. ಇದರಿಂದ ಸಿಬ್ಬಂದಿಗಳು ಸ್ವಲ್ಪ ನಿರಾಳರಾಗಿದ್ದಾರೆ.

news18-kannada
Updated:July 6, 2020, 7:07 AM IST
ಬಸ್ ಕಂಡಕ್ಟರ್ ನಿಂದ 16 ಜನರಿಗೆ ಸೋಂಕು; ಯಾದಗಿರಿ ಬಸ್ ಡಿಪೋ ಸೀಲ್‌ಡೌನ್, ಸಾರಿಗೆ ಸಿಬ್ಬಂದಿಗಳಲ್ಲಿ ಆತಂಕ...!
ಸಾಂದರ್ಭಿಕ ಚಿತ್ರ.
  • Share this:
ಯಾದಗಿರಿ: ಕೊರೋನಾ ಮಹಾಮಾರಿಯು ಈಗ ಈಶಾನ್ಯ ಸಾರಿಗೆ ಸಂಸ್ಥೆಗೂ ತಟ್ಟಿದೆ. ಜಿಲ್ಲೆಯ ಸುರಪುರ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಕೆಲಸ ಮಾಡುವ ಚಾಲಕ, ನಿರ್ವಾಹಕರಿಗೆ ಸೋಂಕು ವ್ಯಾಪಿಸಿದೆ. ಒಟ್ಟು 8 ಜನ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಪರಿಣಾಮ ಇಡೀ ಡಿಪೋವನ್ನು ಸೀಲ್‌ಡೌನ್ ಮಾಡಲಾಗಿದ್ದರೆ, ಉಳಿದ ಸಿಬ್ಬಂದಿಗಳಲ್ಲೂ ಕೊರೋನಾ ಆತಂಕ ಮನೆ ಮಾಡಿದೆ.

ಕಳೆದ ತಿಂಗಳು 19 ರಂದು ಸುರಪುರದ ದೀವಳಗುಡ್ಡದ ನಿವಾಸಿಯಾದ ಬಸ್ ಕಂಡಕ್ಟರ್ ಗೆ ಕೊರೋನಾ ವಕ್ಕರಿಸಿತ್ತು. ಸೋಂಕಿತ ನಿರ್ವಾಹಕ ಬಸ್ ಘಟಕ ಹಾಗೂ ಬಸ್ ನಿಲ್ದಾಣ ಮೊದಲಾದ ಕಡೆ ಓಡಾಡಿಕೊಂಡಿದ್ದರು. ಅಲ್ಲದೆ, ಸೋಂಕಿತ ವ್ಯಕ್ತಿಯ ಪತ್ನಿಗೂ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದ ಸೋಂಕಿತ ಬಸ್ ಕಂಡಕ್ಟರ್ ಹಾಗೂ ಆತನ ಪತ್ನಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆದರೆ, ಬಸ್ ಕಂಡಕ್ಟರ್ ನಿಂದ ಹರಡಿದ ಸೋಂಕಿನಿಂದ 16 ಜನರಿಗೆ ಇದೀಗ ಕೊರೋನಾ ವಕ್ಕರಿಸಿದೆ. ಬಸ್ ಘಟಕದಲ್ಲಿನ 7  ಜನರಿಗೆ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ ಮುಂಜಾಗ್ರತೆ ವಹಿಸಿ ಸುರಪುರ ಬಸ್ ಘಟಕ ಸೀಲ್ ಡೌನ್ ಮಾಡಲಾಗಿದೆ. ಸುರಪುರ ಬಸ್ ಘಟಕದಿಂದ ಯಾವುದೇ ಬಸ್ ಸಂಚಾರವಿರುವದಿಲ್ಲ ಎನ್ನಲಾಗಿದೆ.

300 ಜನ ಸಾರಿಗೆ ಸಿಬ್ಬಂದಿಗಳ ಸ್ಯಾಂಪಲ್‌ ಸಂಗ್ರಹ..!

ಸುರಪುರ ಬಸ್ ಘಟಕದಲ್ಲಿ 335 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು ಎಲ್ಲಾ ಸಿಬ್ಬಂದಿಗಳ ಸ್ಯಾಂಪಲ್‌ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿವರಗೆ 300 ಜನರ ಸ್ಯಾಂಪಲ್‌ ಸಂಗ್ರಹ ಮಾಡಲಾಗಿದ್ದು ಅದರಲ್ಲಿ 60 ಜನರ ಸ್ಯಾಂಪಲ್‌ ವರದಿ ನೆಗೆಟಿವ್ ಬಂದಿದೆ. ಇದರಿಂದ ಸಿಬ್ಬಂದಿಗಳು ಸ್ವಲ್ಪ ನಿರಾಳರಾಗಿದ್ದಾರೆ.

ಇದನ್ನೂ ಓದಿ : ರಾಜ್ಯಕ್ಕೆ ಕೈಕೊಟ್ಟ ಮುಂಗಾರು, ಹಲವೆಡೆ ಬರದ ಛಾಯೆ; ಈವರೆಗೆ ಎಲ್ಲಿಲ್ಲಿ ಎಷ್ಟೆಷ್ಟು ಮಳೆ? ಇಲ್ಲಿದೆ ವರದಿ
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆಗೆ ಮಾತನಾಡಿರುವ ಸುರಪುರ ತಾಲೂಕು ಆರೋಗ್ಯಧಿಕಾರಿ ಡಾ.ಆರ್.ವಿ.ನಾಯಕ, "ಕಂಡಕ್ಟರ್ ಮೂಲಕ 16 ಜನರಿಗೆ ಕೊರೊನಾ ಬಂದಿದ್ದು 300 ಜನರ ಸ್ಯಾಂಪಲ್‌ ಸಂಗ್ರಹ ಮಾಡಲಾಗಿದೆ. ಅದರಲ್ಲಿ 60 ಜನರ ವರದಿ ನೆಗೆಟಿವ್ ಬಂದಿದೆ. ಜನರು ಯಾವುದೇ ಆತಂಕ ಪಡದೆ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡರೆ ಕೊರೊನಾಗೆ ಭಯಪಡುವ ಅಗತ್ಯ ಇಲ್ಲ" ಎಂದು ತಿಳಿಸಿದ್ದಾರೆ.
Published by: MAshok Kumar
First published: July 6, 2020, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading