ಕಲಬುರ್ಗಿಯಲ್ಲಿ ಒಂದೇ ದಿನ 16 ಜನರಿಗೆ ಪಾಸಿಟಿವ್; ಹತ್ತು ಜನ ಡಿಸ್ಚಾರ್ಜ್

ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 157ಕ್ಕೇರಿದೆ.  ಮತ್ತೊಂದೆಡೆ ಇಂದು ಒಂದೇ ದಿನ ಜಿಲ್ಲೆಯಲ್ಲಿ 10 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

news18-kannada
Updated:May 25, 2020, 8:45 PM IST
ಕಲಬುರ್ಗಿಯಲ್ಲಿ ಒಂದೇ ದಿನ 16 ಜನರಿಗೆ ಪಾಸಿಟಿವ್; ಹತ್ತು ಜನ ಡಿಸ್ಚಾರ್ಜ್
ಪ್ರಾತಿನಿಧಿಕ ಚಿತ್ರ
  • Share this:
ಕಲಬುರ್ಗಿ(ಮೇ 25): ಇಂದು ಒಂದೇ ದಿನ ಕಲಬುರ್ಗಿ ಜಿಲ್ಲೆಯಲ್ಲಿ 16 ಜನರಿಗೆ ಸೋಂಕು ದೃಢಪಟ್ಟಿದೆ. ಎಲ್ಲ 16 ಜನರೂ ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರಾಗಿದ್ದಾರೆ. ಈ ಪೈಕಿ ಓರ್ವ ಬಾಲಕಿ, ಓರ್ವ ಬಾಲಕ, ಇಬ್ಬರು ಯುವಕರು, ನಾಲ್ವರು ಮಹಿಳೆಯರು, ಉಳಿದವರು ಪುರುಷರಿದ್ದಾರೆ. ಕಾಳಗಿ ತಾಲೂಕಿನ ಹನ್ನೆರಡು, ಚಿತ್ತಾಪುರ ತಾಲೂಕಿನ ಮೂರು ಹಾಗೂ ಕಮಲಾಪುರ ತಾಲೂಕಿನ ಓರ್ವನಿಗೆ ಸೋಂಕು ದೃಢಪಟ್ಟಿದೆ.

ಕಾಳಗಿ ತಾಲೂಕಿನಲ್ಲಿ ಅತಿ ಹೆಚ್ಚು ಸೋಂಕು ದೃಢಪಟ್ಟಿವೆ. ಕೋರವಾರ ತಾಂಡಾದ 30 ವರ್ಷದ ಪುರುಷ, ಬುಗಡಿ ತಾಂಡಾದ 10 ವರ್ಷದ ಬಾಲಕ, 55 ವರ್ಷದ ಮಹಿಳೆ, 45 ವರ್ಷದ ಪುರುಷ, 18 ವರ್ಷದ ಯುವಕ, 40 ವರ್ಷದ ಪುರುಷ, 15 ವರ್ಷದ ಬಾಲಕಿ, 36 ವರ್ಷದ ಪುರುಷ ಹಾಗೂ 21 ವರ್ಷದ ಮಹಿಳೆಯಲ್ಲಿ ಸೋಂಕಿರೋದು ದೃಢಪಟ್ಟಿದೆ. ಇದೇ ಕಾಳಗಿ ತಾಲೂಕಿನ ಸೂಗೂರು(ಕೆ) ತಾಂಡಾದ 26 ವರ್ಷದ ಪುರುಷ, ಅರಣಕಲ್ ತಾಂಡಾದ 29 ವರ್ಷದ ಮಹಿಳೆ, ಅರಣಕಲ್ ನ ಸೊಂಗಸು ತಾಂಡಾದ 68 ವರ್ಷದ ಪುರುಷನಿಗೆ ಸೋಂಕು ವ್ಯಾಪಿಸಿದೆ.

ಚಾಮರಾಜನಗರಕ್ಕೀಗ ಕೊರೋನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ

ಚಿತ್ತಾಪುರ ತಾಲೂಕಿನ ರಾಮ್ ನಾಯಕ್ ತಾಂಡಾದ 18 ವರ್ಷದ ಯುವಕ, 42 ವರ್ಷದ ಪುರುಷ, 35 ವರ್ಷದ ಮಹಿಳೆ ಹಾಗೂ ಕಮಲಾಪುರ ತಾಲೂಕಿನ ಡೊಂಗರಗಾಂವದ ಭೀಮನಾಲ್ ತಾಂಡಾದ 29 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಸಂಜೆ ಬುಲೆಟಿನ್ ನಲ್ಲಿ ಮತ್ತಿಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 157ಕ್ಕೇರಿದೆ.  ಮತ್ತೊಂದೆಡೆ ಇಂದು ಒಂದೇ ದಿನ ಜಿಲ್ಲೆಯಲ್ಲಿ 10 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ ಮೋಮಿನಪುರಕ್ಕೆ ಸೇರಿದವರು ಎಂಟು ಜನರಾದರೆ, ಓರ್ವ ಮಿಜಗುರಿ ಪ್ರದೇಶಕ್ಕೆ ಸೇರಿದವರು, ಓರ್ವ ಮಹಿಳೆ ಚಿತ್ತಾಪುರ ತಾಲೂಕಿಗೆ ಸೇರಿದ್ದಾಳೆ. ಮೋಮಿನಪುರದ ಒಂದೇ ಕುಟುಂಬದ ಎಂಟು ಜನ ಗುಣಮುಖರಾಗಿದ್ದಾರೆ.

ಮೋಮಿನಪುರದ 35 ವರ್ಷದ ಪುರುಷ, 30 ವರ್ಷದ ಮಹಿಳೆ, 15 ವರ್ಷದ ಬಾಲಕಿ, 14 ವರ್ಷದ ಬಾಲಕಿ, 55 ವರ್ಷದ ಪುರುಷ, 50 ವರ್ಷದ ಮಹಿಳೆ, 60 ವರ್ಷದ ಪುರುಷ, 10 ವರ್ಷದ ಬಾಲಕಿ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರ್ಗಿ ಮಿಜಗುರಿಯ 38 ವರ್ಷದ ಪುರುಷ, ಚಿತ್ತಾಪುರ ತಾಲೂಕಿನ 30 ವರ್ಷದ ಮಹಿಳೆ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಂದೇ ಬಾರಿ ಜಿಲ್ಲೆಯಲ್ಲಿ 14 ಜನರಿಗೆ ಸೋಂಕು ದೃಢಪಟ್ಟ ವೇಳೆಯಲ್ಲಿಯೇ 10 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿರೋದು ಒಂದಷ್ಟು ನಿಟ್ಟಿಸಿರು ಬಿಡುವಂತಾಗಿದೆ.

ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕು ವ್ಯಾಪಕಗೊಳ್ಳಲಾರಂಭಿಸಿದೆ. ಇಂದು ಒಂದೇ ದಿನ 16 ಜನರಿಗೆ ಸೋಂಕು ದೃಢಪಟ್ಟಿರೋದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಿದ್ದು, ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
First published: May 25, 2020, 8:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading