Honeytrap| ಕಾಫಿನಾಡಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಸೆರೆ; 6 ಮಂದಿ ಮಹಿಳೆಯರು ಸೇರಿ 13 ಜನರ ಬಂಧನ

ಈ ಗ್ಯಾಂಗ್ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದದ್ದು ಮಧ್ಯ ವಯಸ್ಕ ಹಾಗೂ ಆರ್ಥಿಕವಾಗಿ ಚೆನ್ನಾಗಿರೋ ವ್ಯಕ್ತಿಗಳನ್ನಷ್ಟೆ. ಅವರ ಪರ್ಸನಲ್ ಡೇಟಾವನ್ನ ಕಲೆಹಾಕಿ ಸೈಲೆಂಟಾಗಿ ಹನಿಟ್ರಾಪ್ ದಂಧೆಗೆ ಕೆಡವಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು.

  • Share this:
ಚಿಕ್ಕಮಗಳೂರು : ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಗ್ಯಾಂಗ್  ವೊಂದನ್ನ ಚಿಕ್ಕಮಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 6 ಮಹಿಳೆಯರು ಸೇರಿ 13 ಜನರ ತಂಡ ಇದಾಗಿದ್ದು, ಮೋಸದಿಂದ ಹನಿಟ್ರ್ಯಾಪ್ ನಡೆಸಿ ವಂಚಿಸುತ್ತಿದ್ದರು ಎಂದು ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಕಷ್ಟದ ದಾರಿ ಹೇಳಿ, ಸುಖದ ಭಯ ಹುಟ್ಸಿ ಹಣ ಪೀಕ್ತಿದ್ದ ಖತರ್ನಾಕ್ ಗ್ಯಾಂಗ್‍ನಿಂದ. ಈ ತಂಡದಲ್ಲಿ ಲೇಡಿಸ್ ಅಂಡ್ ಜೆಂಟ್ಸ್ ಎಲ್ಲರೂ ಇದ್ದಾರೆ. ಇನ್ನೂ ಶಾಕಿಂಗ್ ಅಂದ್ರೆ ತಾಯಿ-ಮಗಳು ಇದ್ದಾರೆ. ಹನಿಟ್ರ್ಯಾಪ್ ದಂಧೆ ಮಾಡ್ತಿದ್ದ ಈ ತಂಡ ಪುರುಷರನ್ನ ಪುಸಲಾಯಿಸಿ ಮೋಸದ ಬಲೆಗೆ ಬೀಳಿಸಿ ನಗ್ನ ವಿಡಿಯೋ ಮಾಡ್ಕೊಂಡು ಯಾಮಾರಿಸ್ತಿದ್ರು. ಏಕಾಂತದಲ್ಲಿರುವಾಗ ಎಂಟ್ರಿ ಕೊಡೋ ಯುವಕರು ಪೆÇಲೀಸರೆಂದು ಹೇಳಿ ಹೆದರಿಸುತ್ತಿದ್ದರು.

ಇದು ವೇಶ್ಯಾಗೃಹ. ಎಫ್‍ಐಆರ್ ಹಾಕ್ತೀವಿ ಅಂತ ಅವಾಜ್ ಹಾಕ್ತಾರೆ. ಸ್ಪಾಟ್ ಸೆಟ್ಲ್‍ಮೆಂಟ್‍ಗೆ ಆಫರ್ ಕೊಡ್ತಾರೆ. ವಿಷ್ಯ ಹೊರಬಂದ್ರೆ ಮರ್ಯಾದೆ ಅಂತ ಕೇಳಿದಷ್ಟು ಹಣ ಕೊಟ್ಟು ಮನೆ ಸೇರ್ತಿದ್ರು ಮೋಸಕ್ಕೊಳಗಾದವರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ನಿಮ್ಮ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ನಿಮ್ಮ ಕುಟುಂಬದವರಿಗೂ ಕಳಿಸುತ್ತೇವೆಂದು ಹೆದರಿಸುತ್ತಿದ್ರು. ಇದರಿಂದ ಬೇಸತ್ತ ವ್ಯಕ್ತಿಗಳು ಖಾಕಿಗೆ ವಿಚಾರ ಮುಟ್ಟಿಸಿದಾಗ ರಿಯಲ್ ಪೊಲೀಸರು 13 ಜನರನ್ನ ಅಂದರ್ ಮಾಡಿದ್ದಾರೆ.

ಈ ಗ್ಯಾಂಗ್ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದದ್ದು ಮಧ್ಯ ವಯಸ್ಕ ಹಾಗೂ ಆರ್ಥಿಕವಾಗಿ ಚೆನ್ನಾಗಿರೋ ವ್ಯಕ್ತಿಗಳನ್ನಷ್ಟೆ. ಅವರ ಪರ್ಸನಲ್ ಡೇಟಾವನ್ನ ಕಲೆಹಾಕಿ ಸೈಲೆಂಟಾಗಿ ಹನಿಟ್ರಾಪ್ ದಂಧೆಗೆ ಕೆಡವಿಕೊಳ್ತಿದ್ರು. ವಿಷಯ ತಿಳಿದ ಕೂಡಲೇ ಕ್ಷಿಪ್ರ ಕಾರ್ಯಚರಣೆ ನಡೆಸಿದ ಕಾಫಿನಾಡ ನಗರ ಖಾಕಿಗಳು 6 ಗಂಡಸರು, 7 ಹೆಂಗಸರು ಸೇರಿದಂತೆ 13 ಜನರನ್ನ ಅಂದರ್ ಮಾಡಿದ್ದಾರೆ. ಬಂದಿತರಿಂದ 2 ಲಕ್ಷದಷ್ಟು ಹಣ, 5 ಕಾರುಗಳು, ಮೊಬೈಲ್, ಸಿಮ್, ಚಿನ್ನಾಭರಣವನ್ನ ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ನಗರ ಸೇರಿದಂತೆ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಕಿರಾತಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಸುಲಭವಾಗಿ ವಾಮಮಾರ್ಗದಿಂದ ಹಣ ಮಾಡುವುದೇ ಈ ಗ್ಯಾಂಗಿನ ಗುರಿಯಾಗಿತ್ತು. ಆದರೆ, ಕಾಫಿನಾಡ ಪೆÇಲೀಸರು ಕಷ್ಟ ಹೇಳ್ಕೊಂಡು ಸುಖದ ಹೆಸರಲ್ಲಿ ಭಯ ಹುಟ್ಟಿಸ್ತಿದ್ದವರ ಹೆಡೆಮುರಿ ಕಟ್ಟಿ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: Narendra Modi| ಒಂದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಶೇ.66 ರಿಂದ ಶೇ24ಕ್ಕೆ ಇಳಿಕೆ; ಇಂಡಿಯಾ ಟುಡೆ ಸಮೀಕ್ಷೆ

ಒಟ್ಟಾರೆ, ಚಿಕ್ಕಮಗಳೂರು ನಗರ ಹಾಗೂ ಸೈಬರ್ ಪೆÇಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಖೆಡ್ಡಾಕೆ ಕೆಡವಿದ್ದಾರೆ. ಹೀಗೆ ಬಂಧಿತರಾಗಿರೋ 13 ಜನರೂ ಅನೇಕರಿಗೆ ಯಾಮಾರಿಸಿ ನಗ್ನ ವಿಡಿಯೋ ಮಾಡ್ಕೊಂಡು ಹಣ ಕಿತ್ತಿದ್ದಾರೆ. ಆದ್ರೆ, ಮರ್ಯಾದೆಗೆ ಅಂಜಿ ಅನೇಕರು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಸದ್ಯ ಇಬ್ಬರು ವ್ಯಕ್ತಿಗಳು ನೀಡಿರೋ ಮಾಹಿತಿಯಿಂದ ಈ ಗ್ಯಾಂಗನ್ನ ಅಂದರ್ ಮಾಡಲಾಗಿದೆ. 13 ಜನ ಅಂದರ್ ಆಗಿದ್ದಾರೆ. ಹಣಕ್ಕಾಗಿ ತಾಯಿ-ಮಗಳು ಈ ದಂಧೆಯಲ್ಲಿ ಪಾಲ್ಗೊಂಡಿರೋದು ದುರಂತ. ನಾಳೆ ಮತ್ತಿನ್ಯಾರ್ಯಾರು ಅರೆಸ್ಟ್ ಆಗ್ತಾರೋ ಕಾದುನೋಡ್ಬೇಕು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: