HOME » NEWS » District » 13 MEMBERS OF THE FAMILY FOUGHT CORONA SUCCESSFULLY DKK KVD

ಕುಟುಂಬದ 13 ಮಂದಿಗೂ ಸೋಂಕು; ಊರಿನವರ ಅಪಪ್ರಚಾರಕ್ಕೆ ಕುಗ್ಗದೆ ಕೊರೊನಾವನ್ನು ಗೆದ್ದೇ ಬಿಟ್ಟರು!

ಕುಟುಂಬಕ್ಕೆ ಕೊರೊನಾ ಬಂದಿರುವುದು ಊರಲ್ಲಿ ಅಪಪ್ರಚಾರಕ್ಕೂ ಕಾರಣವಾಗಿತ್ತಂತೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕುಟುಂಬದ 13 ಮಂದಿ ಸದಸ್ಯರು ಚಿಕಿತ್ಸೆ ಪಡೆದು ವಾರದಲ್ಲಿಯೇ ಗುಣಮುಖರಾಗಿದ್ದಾರೆ.

news18-kannada
Updated:May 14, 2021, 7:11 AM IST
ಕುಟುಂಬದ 13 ಮಂದಿಗೂ ಸೋಂಕು; ಊರಿನವರ ಅಪಪ್ರಚಾರಕ್ಕೆ ಕುಗ್ಗದೆ ಕೊರೊನಾವನ್ನು ಗೆದ್ದೇ ಬಿಟ್ಟರು!
ಕೊರೊನಾ ಗೆದ್ದ ಕುಟುಂಬ
  • Share this:
ಕಾರವಾರ: ಮಹಾಮಾರಿ ಕೊರೊನಾದಿಂದಾಗಿ ದೇಶವೇ ತತ್ತಿರಿಸಿ ಹೋಗಿದೆ. ಕೋವಿಡ್​ ರಿಪೋರ್ಟ್​ ಪಾಸಿಟಿವ್​ ಬಂದೊಡನೆ ಆತಂಕಕ್ಕೆ ಒಳಗಾಗೋರನ್ನು ನಿತ್ಯ ನೋಡುತ್ತಿದ್ದೇವೆ. ಇನ್ನು ಕೆಲವರು ಧೈರ್ಯದಿಂದ ಸೋಂಕಿನಿಂದ ಹೋರಾಡಿ ಗುಣಮುಖರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಾಸವಿರುವ ರೈತಾಪಿ ಕುಟುಂಬವೊಂದು ಹೆಮ್ಮಾರಿ ಸೋಂಕಿನ ವಿರುದ್ಧ ಹೋರಾಡಿ ಯಶಸ್ವಿಯಾಗಿದ್ದಾರೆ. ಒಂದೇ ಕುಟುಂಬದ 13 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಇತರರಿಗೆ ಸ್ಥೈರ್ಯ ತುಂಬುತ್ತಿದ್ದಾರೆ. ಮದುವೆ ಸಂಭ್ರಮದಲ್ಲಿರುವಾಗಲೇ 13 ಮಂದಿಗೆ ವಕ್ಕರಿಸಿದ್ದ ಮಹಾಮಾರಿಯನ್ನ ಸದ್ದಿಲ್ಲದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ಮೂಲಕ ಗೆದ್ದಿದ್ದಾರೆ.

ಮನೋಸ್ಥೈರ್ಯವೇ ನಮಗೆ ಬಲ

ಕೊರೊನಾದಿಂದಾಗಿ ಎಲ್ಲೆಡೆಯೂ ಭಯ ಸೃಷ್ಟಿಯಾಗಿದೆ. ತಮಗೆ ಅರಿವಿಲ್ಲದೆ ತಗುಲಿದ ಸೋಂಕಿನಿಂದಾಗಿ ಅದೆಷ್ಟೊ ಮಂದಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಿದ್ದಾಪುರ ತಾಲ್ಲೂಕಿನ ಹುತ್ಗಾರ್ ಗ್ರಾಮದ ದತ್ತಾತ್ರೇಯ ಬೀರಾ ಗೌಡ ಎಂಬುವವರ ರೈತಾಪಿ ಕುಟುಂಬದ 13 ಮಂದಿ ಸದಸ್ಯರು ಸೋಂಕು ತಗುಲಿ ಸಂಕಷ್ಟಕ್ಕೆ ಸಿಲುಕಿದ್ದರು. ಮೊದಲು ಮನೆಯ ಒಂದಿಬ್ಬರು ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿತ್ತು. ಸಾಲದಕ್ಕೆ ಮನೆಯಲ್ಲಿ ಎರಡೆರಡು ಮದುವೆಗೆ ತಯಾರಿಗಳು ನಡೆದಿದ್ದವು.  ಎರಡ್ಮೂರು ದಿನ ಕಳೆದರೂ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಕೊನೆಗೆ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಮೂವರಲ್ಲಿ ಸೋಂಕು ಇರುವುದು ದೃಢವಾಗಿದೆ. ಬಳಿಕ ಮನೆಮಂದಿಯೆಲ್ಲ ಪರೀಕ್ಷೆ ಮಾಡಿಸಿದ್ದು ರೋಗ ಲಕ್ಷಣವೇ ಇಲ್ಲದ 7 ತಿಂಗಳ ಮಗು ಸೇರಿ 9 ಮಂದಿಗೆ ಸೋಂಕು ಇರುವುದು ದೃಢಪಟ್ಟಿತ್ತು.  ಬಳಿಕ ವೈದ್ಯರ ಸಲಹೆಯಂತೆ ಕೊಟ್ಟ ಮಾತ್ರೆ ಸೇವಿಸಿಕೊಂಡು ಯಾರ ಸಂಪರ್ಕಕ್ಕೂ ಬಾರದೆ ಮನೆಯಲ್ಲಿದ್ದ ಕುಟುಂಬ ಈಗ ಸಂಪೂರ್ಣ ಗುಣಮುಖವಾಗಿ ಕೊರೊನಾವನ್ನು ಗೆದ್ದಿದ್ದಾರೆ.

ಊರಲ್ಲಿ ಅಪಪ್ರಚಾರಕ್ಕೂ ಕಾರಣವಾಗಿತ್ತು

ಇನ್ನು ಕುಟುಂಬಕ್ಕೆ ಕೊರೊನಾ ಬಂದಿರುವುದು ಊರಲ್ಲಿ ಅಪಪ್ರಚಾರಕ್ಕೂ ಕಾರಣವಾಗಿತ್ತಂತೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕುಟುಂಬದ 13 ಮಂದಿ ಸದಸ್ಯರು ಚಿಕಿತ್ಸೆ ಪಡೆದು ವಾರದಲ್ಲಿಯೇ ಗುಣಮುಖರಾಗಿದ್ದಾರೆ. 14 ದಿನಗಳ ಕ್ವಾರಂಟೈನ್ ಕೂಡ ಮುಗಿಸಿದ್ದಾರೆ. ಮೇ13 ರಂದು ನಡೆಯಬೇಕಿದ್ದ ಮದುವೆಯನ್ನು ಅನಿವಾರ್ಯವಾಗಿ ಮುಂದೂಡಿದ್ದಾರೆ. ಕೊರೊನಾಗೆ ಯಾರು ಭಯಪಡುವ ಅಗತ್ಯವೇ ಇಲ್ಲ. ಯಾರೋ ಏನು ಹೇಳುತ್ತಾರೋ ಎಂಬ ಹಿಂಜರಿಕೆ ಕೂಡ ಬೇಡ. ಜ್ವರ, ಕೆಮ್ಮು ಹೀಗೆ ಯಾವುದೇ ರೋಗ ಲಕ್ಷಣ ಕಂಡುಬಂದಲ್ಲಿ ಒಮ್ಮೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ. ಇದರಿಂದ ನಿಮ್ಮ ಕುಟುಂಬಕ್ಕೆ ಒಳಿತು ಎನ್ನುತ್ತಾರೆ ಕುಟುಂಬದ ಹಿರಿಯ ಸದಸ್ಯೆ.

ರೋಗ ಲಕ್ಷಣಗಳು ಇದ್ದರು ಅದೆಷ್ಟೋ ಮಂದಿ ಕೊರೊನಾಗೆ ಹೆದರಿ ಮನೆಯಲ್ಲಿಯೇ ಇದ್ದು ಕೊನೆಗಳಿಗೆಯಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಆದರೇ ಹೀಗೆ ಮಾಡಿ ಆಪತ್ತು ತಂದುಕೊಳ್ಳುವ ಬದಲು ಈ ರೈತಾಪಿ ಕುಟುಂಬದ ಸದಸ್ಯರಂತೆ ರೋಗ ಲಕ್ಷಣ ಕಂಡ ತಕ್ಷಣ ಪರೀಕ್ಷೆ ಮಾಡಿಸಿ ಮುಂದಾಗುವ ಅನಾಹುತ ಹಾಗೂ ಇತರರಿಗೆ ರೋಗ ಹರಡುವುದನ್ನ ತಪ್ಪಿಸಬೇಕಿದೆ. ಹೆಮ್ಮಾರಿ ಕೊರೊನಾ ಸೋಂಕಿನ ವಿರುದ್ಧ ಆತ್ಮಸ್ಥೈಯದಿಂದ ಹೋರಾಡಿದ ಕುಟುಂಬಕ್ಕೆ ನಮದೊಂದು ಸಲಾಂ.
Published by: Kavya V
First published: May 14, 2021, 7:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories