HOME » NEWS » District » 120 TONNES OF OXYGEN TO BE BROUGHT TO THE STATE BY TRAINS FROM KALINGA CITY CANK MAK

Oxygen Crisis: ಕಳಿಂಗ ನಗರದಿಂದ ನಾಲ್ಕನೇ ಬಾರಿಗೆ ಟ್ರೈನ್​ಗಳ ಮೂಲಕ ರಾಜ್ಯಕ್ಕೆ 120 ಟನ್ ಆಕ್ಸಿಜನ್; ನೀಗಲಿದೆ ಕೊರತೆ

ಒಂದೇ ವಾರದಲ್ಲಿ ನಾಲ್ಕನೇ ಬಾರಿಗೆ ವಿಶೇಷ ಟ್ರೈನ್ ಮೂಲಕ ಬೆಂಗಳೂರಿಗೆ 480 ಟನ್ ಗಳಷ್ಟು ಆಕ್ಸಿಜನ್  ಅನ್ನು ರಾಜ್ಯಕ್ಕೆ ರವಾನಿಸಲಾಗಿದೆ. ಇದೇ ತಿಂಗಳ 11 ನೇ ತಾರೀಖು ಆರು ಕಂಟೇನರ್​ಗಳಲ್ಲಿ 120 ಟನ್ ಆಕ್ಸಿಜನ್ ವೈಟ್ ಫೀಲ್ಡ್ ಗೆ ರವಾನಿಸಲಾಗಿತ್ತು.

news18-kannada
Updated:May 19, 2021, 6:41 AM IST
Oxygen Crisis: ಕಳಿಂಗ ನಗರದಿಂದ ನಾಲ್ಕನೇ ಬಾರಿಗೆ ಟ್ರೈನ್​ಗಳ ಮೂಲಕ ರಾಜ್ಯಕ್ಕೆ 120 ಟನ್ ಆಕ್ಸಿಜನ್; ನೀಗಲಿದೆ ಕೊರತೆ
ಸಾಂದರ್ಭಿಕ ಚಿತ್ರ.
  • Share this:
ಆನೇಕಲ್ : ಲಾಕ್​ಡೌನ್ ನಡುವೆಯು ಮಹಾಮಾರಿ ಕೊರೋನಾ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅದ್ರಲ್ಲು  ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಕೊರೊನಾ ಮಾರಕವಾಗಿ ಪರಿಣಮಿಸಿದ್ದು, ಬಹುತೇಕ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಅತ್ಯವಶ್ಯಕ ಎನ್ನುವಂತಾಗಿದೆ. ಅದ್ರಲ್ಲು ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆಯಿಂದ ಸಾಕಷ್ಟು ಮಂದಿ ಸಾವನ್ನಪ್ಪಿದ್ದರು. ಹಾಗಾಗಿ ರಾಜ್ಯ ಸರ್ಕಾರ ಆಕ್ಸಿಜನ್ ಗಾಗಿ ಕೇಂದ್ರಕ್ಕೆ ಮೊರೆಯಿಟ್ಟಿತ್ತು. ಇದೀಗ ಕೇಂದ್ರ ಕಳೆದ ಒಂದು ವಾರದಲ್ಲಿ ನಾಲ್ಕು ಟ್ರೈನ್ಗಳ ಮೂಲಕ 480 ಟನ್ ಲಿಕ್ವಿಡ್ ಆಕ್ಸಿಜನ್ ರಾಜ್ಯಕ್ಕೆ ರವಾನಿಸಿದ್ದು, ರಾಜ್ಯದ ಜನ ಕೊಂಚ ಉಸಿರಾಡುವಂತಾಗಿದೆ.

ಹೌದು ಮಹಾಮಾರಿ ಕೊರೋನಾ ಎರಡನೇಯ ಅಲೆಯ ಹೊಡೆತಕ್ಕೆ ಇಡೀ ದೇಶ ತತ್ತರಿಸಿ ಹೋಗಿದೆ. ಅದ್ರಲ್ಲು ಕರ್ನಾಟಕ ರಾಜ್ಯದಲ್ಲಿ ಜೀವ ವಾಯು ಆಕ್ಸಿಜನ್‌ ಕೊರತೆಯಿಂದ ದಿನನಿತ್ಯ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಇದೀಗ ಒಂದೇ ವಾರದಲ್ಲಿ ನಾಲ್ಕನೇ ಬಾರಿಗೆ ವಿಶೇಷ ಟ್ರೈನ್ ಮೂಲಕ ಬೆಂಗಳೂರಿಗೆ 480 ಟನ್ ಗಳಷ್ಟು ಆಕ್ಸಿಜನ್  ಅನ್ನು ರಾಜ್ಯಕ್ಕೆ ರವಾನಿಸಲಾಗಿದೆ. ಇದೇ ತಿಂಗಳ 11 ನೇ ತಾರೀಖು ಆರು ಕಂಟೇನರ್​ಗಳಲ್ಲಿ 120 ಟನ್ ಅಕ್ಸಿಜನ್ ವೈಟ್ ಫೀಲ್ಡ್ ಗೆ ರವಾನಿಸಲಾಗಿತ್ತು.

ಬಳಿಕ 15ನೇ ತಾರೀಖು ಮುಂಜಾನೆ ಕಾಂಕಾರ್ ಎಕ್ಸ್‌ಪ್ರೆಸ್‌ ಮೂಲಕ 120 ಟನ್ ಅಕ್ಸಿಜನ್ ಮತ್ತು ಸಂಜೆ ಮತ್ತೊಂದು ಟ್ರೈನ್ನಲ್ಲಿ ಆರು ಕಂಟೇನರ್ಗಲ್ಲಿ 120 ಟನ್ ಲಿಕ್ವಿಡ್ ಅಕ್ಸಿಜನ್ ವೈಟ್ ಫೀಲ್ಡ್ಗೆ ಯಶಸ್ವಿಯಾಗಿ ರವಾನಿಸಲಾಗಿತ್ತು. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಾಲ್ಕನೇ ಬಾರಿಗೆ ಟ್ರೈನ್ ಮೂಲಕ 120 ಟನ್ ಅಕ್ಸಿಜನ್ ಬೆಂಗಳೂರಿನ ವೈಟ್ ಫೀಲ್ಡ್ಗೆ ರವಾನಿಸಲಾಗಿದೆ.

ಇದನ್ನೂ ಓದಿ: Rizwan Arshad: ಸುಧಾಕರ್​ ಓರ್ವ ಅಯೋಗ್ಯ ಮಂತ್ರಿ; ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ!

ಇನ್ನೂ ಆಕ್ಸಿಜನ್ ಕೊರತೆಯಿಂದ ರಾಜ್ಯದ ಹಲವು ಕಡೆ ಸಾವು ನೋವುಗಳು ಸಂಭವಿಸುತ್ತಿದ್ದವು . ಆದ್ರೆ ಇದೀಗ ಕೇವಲ ಒಂದು ವಾರದಲ್ಲಿ ಕೇಂದ್ರ ಸರ್ಕಾರದಿಂದ 480  ಟನ್ ಅಕ್ಸಿಜನ್ ಬೆಂಗಳೂರಿಗೆ ರವಾನೆಯಾಗಿದ್ದು  ,  ಅಗತ್ಯವಿರುವ ಸ್ಥಳಗಳಿಗೆ ಸಕಾಲಕ್ಕೆ ಅಕ್ಸಿಜನ್ ರವಾನೆ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕಿದ್ದು, ಕರ್ನಾಟಕ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಲಿಂಡೆ ಕಂಪನಿಯವರು ಈ ಆಕ್ಸಿಜನ್ ಅನ್ನು ನಿರ್ಧಿಷ್ಟ ಸ್ಥಳದಲ್ಲಿ ಇಟ್ಟುಕೊಂಡು ಸರ್ಕಾರ ಸೂಚಿಸುವ ಆಸ್ಪತ್ರೆಗಳಿಗೆ ಹಂಚಿಕೆ ಮಾಡುತ್ತಾರೆ.
Youtube Video

ಅಂದಹಾಗೆ  ಖಾಲಿಯಾದ ಕಂಟೇನರ್ ಗಳನ್ನು ತೆಗೆದುಕೊಂಡು ಮತ್ತೆ ವಾಪಸ್ ಹೋಗಿ ಅವುಗಳನ್ನು ಫಿಲ್ ಮಾಡಿಕೊಂಡು ಮತ್ತೆ ಬೆಂಗಳೂರಿಗೆ ತರುವ ಕೆಲಸ ಮಾಡಲಾಗುತ್ತದೆ. ಒಟ್ನಲ್ಲಿ ಅಕ್ಸಿಜನ್ ಕೊರತೆಯಿಂದಾಗಿ ಸಾಕಷ್ಟು ಮಂದಿ ಅಮಾಯಕರು ಜೀವ ತೆತ್ತಿದ್ದಾರೆ . ಜೊತೆಗೆ ಮಾರಕ ಕೊರೊನಾ ತನ್ನ ರಣಕೇಕೆ ಹಾಕಿ ಮರಣ ಮೃದುಂಗ ಬಾರಿಸುತ್ತಲೇ ಇದೆ .  ಹಾಗಾಗಿ ಸರ್ಕಾರ ಲಭ್ಯವಿರುವ ಆಕ್ಸಿಜನ್ ಸಕಾಲಕ್ಕೆ ರೋಗಿಗಳಿಗೆ ತಲುಪಿಸುವ ಕೆಲಸ ಆದಾಗ ಮಾತ್ರ ಕೊರೊನಾ ಸೋಂಕಿತರಿಗೆ ಅಕ್ಸಿಜನ್ ಕೊರತೆ ನೀಗಿಸಬಹುದಾಗಿದೆ.(ವರದಿ : ಆದೂರು ಚಂದ್ರು)
Published by: MAshok Kumar
First published: May 19, 2021, 6:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories