ದೊಡ್ಡಬಳ್ಳಾಪುರದ 11ರ ಹರೆಯದ ಜಾಹ್ನವಿ ಯೋಗಸಾಧನೆ

ಜಾಹ್ನವಿ 2019ರ ಸೆಪ್ಟಂಬರ್​ನಲ್ಲಿ ದಕ್ಷಿಣ ಕೊರಿಯದಲ್ಲಿ ನಡೆದ ಅಂತಾರಾಷ್ಟ್ರೀಯ ಕೂಟದಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಸ್ಪರ್ಧೆಯಲ್ಲಿ ಲೆಕ್ಕವಿಲ್ಲದಷ್ಟು ಪದಕಗಳನ್ನ ಸೂರೆ ಮಾಡಿದ್ಧಾರೆ.

ಜಾಹ್ನವಿ

ಜಾಹ್ನವಿ

  • Share this:
ದೊಡ್ಡಬಳ್ಳಾಪುರ: ದಕ್ಷಿಣ ಕೊರಿಯಾದಲ್ಲಿ ನಡೆದ ಯೋಗ ಸ್ವರ್ಧೆಯಲ್ಲಿ  ಬೆಳ್ಳಿ  ಸಾಧನೆ ಮಾಡಿರುವ ದೊಡ್ಡಬಳ್ಳಾಪುರದ 11 ವರ್ಷದ ಕುವರಿಯೊಬ್ಬಳು ಯೋಗ ಕ್ಷೇತ್ರದಲ್ಲಿ  ಭರವಸೆಯ ಬೆಳಕು ಮೂಡಿಸಿದ್ದಾರೆ. 7 ನೇ ತರಗತಿಯಲ್ಲಿ ವ್ಯಾಸಂಗ  ಮಾಡುತ್ತಿರುವ ಬಾಲಕಿ ಮತ್ತಷ್ಟು ಸಾಧನೆ ಮಾಡುವ ಮೂಲಕ ದೇಶಕ್ಕೆ  ಮತ್ತು ಊರಿಗೆ ಹೆಸರು ತರುವ ಆಸೆ ಹೊತ್ತಿದ್ದಾರೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಯೋಗಪಟುಗಳ ತವರೂರು. ನಗರದಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯೋಗಪಟುಗಳಿದ್ದಾರೆ. ಇದೀಗ ಈ ಪಟ್ಟಿಗೆ 7 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜಾಹ್ನವಿ ಎಂಬ 11 ರ ಬಾಲಕಿ ಸೇರ್ಪಡೆ ಆಗಿದ್ದಾರೆ. ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿಗಳಾದ ರವಿಕುಮಾರ್ ಮತ್ತು ರತ್ನ ದಂಪತಿ ಮಗಳಾದ  ಜಾಹ್ನವಿ ಎಂಆರ್ ತನ್ನ 11 ನೇ ವರ್ಷದಲ್ಲಿ ಅಂತರರಾಷ್ಟ್ರೀಯ ಯೋಗ ಸ್ವರ್ಧೆಯಲ್ಲಿ ಭಾಗವಹಿಸಿದ್ದಾರೆ.

2019ರ ಸೆಪ್ಟಂಬರ್​ನಲ್ಲಿ ದಕ್ಷಿಣ ಕೊರಿಯದಲ್ಲಿ ನಡೆದ 9ನೇ ಏಷ್ಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್ ಶಿಪ್​ನಲ್ಲಿ  ಭಾಗವಹಿಸಿ  ಬೆಳ್ಳಿ ಸಾಧನೆ ಮಾಡಿದ್ದಾಳೆ. ಸಾಂಪ್ರದಾಯಿಕ ಯೋಗದಲ್ಲಿ ಬೆಳ್ಳಿ, ರಿದಮಿಕ್ ಯೋಗದಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. 2018ರಲ್ಲಿ ಚಿಕ್ಕೋಡಿಯಲ್ಲಿ ಕರ್ನಾಟಕ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜಿಸಿದ 34ನೇ ರಾಜ್ಯಮಟ್ಟದ ಯೋಗ ಸ್ವರ್ಧೆಯಲ್ಲಿ ಭಾಗವಹಿಸಿ  3ನೇ ಸ್ಥಾನ ಪಡೆದಿದ್ದಾರೆ.

ಮೈಸೂರು ದಸರಾದಲ್ಲಿ ಯೋಗ ಪ್ರದರ್ಶನ ಮಾಡಿರುವ ಜಾಹ್ನವಿ ರಾಜ್ಯ ಮಟ್ಟದ ಯೋಗ ಸ್ವರ್ಧೆಯಲ್ಲಿ  ಭಾಗವಹಿಸಿ  ಹಲವು  ಪದಕಗಳನ್ನ ಗೆದ್ದಿದ್ದಾರೆ. ಜಾಹ್ನವಿ ನಗರದ ನಿಸರ್ಗ ಯೋಗ ಕೇಂದ್ರದಲ್ಲಿ ಕಳೆದ ಆರು ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಈಗಾಗಲೇ ಹಲವು ಪ್ರತಿಭೆಗಳನ್ನು ಹೊರತಂದಿರುವ ಯೋಗ ನಟರಾಜ್ ತಮ್ಮ ಶಿಷ್ಯೆಯ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಯೋಗಸ್ವರ್ಧೆಯಲ್ಲಿ ಭಾಗವಹಿಸುವ ಯೋಗಪಟುಗಳಿಗೆ ವಿದ್ಯಾಭ್ಯಾಸ ಮತ್ತು ಸರ್ಕಾರಿ ಕೆಲಸ ಸೇರಲು ನೇರವಾಗುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಹೊಂದಬಹುದು ಎನ್ನವುದು ಯೋಗ ಗುರುಗಳ ಮಾತು.

ಇದನ್ನೂ ಓದಿ: ವೃತ್ತಿಯಲ್ಲಿ ಪ್ರಾಂಶುಪಾಲ ಪ್ರವೃತ್ತಿಯಲ್ಲಿ ರೈತ; ಬರಡು ಭೂಮಿಯನ್ನು ಬಂಗಾರವಾಗಿಸಿದ ಭಗೀರಥ ಈತ

ಜಾಹ್ನವಿ ತಾಯಿ ರತ್ನ ಅವರು ತಮ್ಮ ಮಗಳ ಸಾಧನೆ ಕಂಡು ಖುಷಿಗೊಂಡಿದ್ದಾರೆ. ಸ್ಮರಣ ಶಕ್ತಿ ಮತ್ತು ಸದೃಢ ಆರೋಗ್ಯಕ್ಕಾಗಿ  ಚಿಕ್ಕ ವಯಸ್ಸಿಗೆ ಮಗಳನ್ನು ಯೋಗ ಕಲಿಯಲು  ಕಳಿಸಿದ್ದು, ಈಗ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಜಾಹ್ನವಿ  ಪೋಷಕರ ಸಂತಸಕ್ಕೆ ಕಾರಣವಾಗಿದೆ.

ಕಿರಿಯ ವಯಸ್ಸಿನ ಪುಟ್ಟ ಬಾಲಕಿಯ ಸಾಧನೆ ಎಲ್ಲರಿಗೂ ಸ್ಪೂರ್ತಿ ಆಗಿದೆ. ನ್ಯೂಸ್18 ಜೊತೆ ಮಾತನಾಡಿದ ಜಾಹ್ನವಿ, ಯೋಗದಿಂದ ಮಾನಸಿಕ, ದೈಹಿಕ, ಆತ್ಮಸ್ಥೈರ್ಯ ಹೆಚ್ಚಿಸಿ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಹೇಳಿದರು.ಪ್ರಪಂಚಕ್ಕೆ ಯೋಗ ಪರಿಚಯಿಸಿದ ಭಾರತ ತನ್ನ ನೆಲದಲ್ಲಿ ಹಲವು ಸಾಧಕರನ್ನ  ಹೊಂದಿದೆ. ಹಾಗೆಯೇ ಜಾಹ್ನವಿ ಸಹ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದು ದೇಶಕ್ಕೆ ಹೆಸರು ತರಲಿ.
First published: