ಕಾಫಿನಾಡಿನಲ್ಲಿ ಅಪರೂಪದ 100 ವರ್ಷದ ಪಾಪಸ್ ಕಳ್ಳಿ; ಗಿನ್ನೆಸ್ ರೆಕಾರ್ಡ್ ಸೇರುವ ಹೊಸ್ತಿಲಲ್ಲಿ ವಿದೇಶಿ ಗಿಡ!

ಗಿಡ ಬೆಳೆದಿರೋದು ಎಷ್ಟು ಮುಖ್ಯವೋ ಅದನ್ನ ಫೋಷಿಸಿಕೊಂಡು ಬರುತ್ತಿರುವುದು ಅಷ್ಟೇ ಮುಖ್ಯ. ಈ ಪಾಪಸ್ ಕಳ್ಳಿ ಗಿಡ ಜೊತೆ ಗಿನ್ನೆಸ್ ರೆಕಾರ್ಡ್ ಬುಕ್ಕಲ್ಲಿ ಕಾಫಿನಾಡ ಹೆಸರೂ ಸೇರಲಿ ಅನ್ನೋದು ಕಾಫಿನಾಡಿಗರ ಬಯಕೆ.

 45 ಅಡಿ ಎತ್ತರ ಬೆಳೆದಿರುವ 100 ವರ್ಷದ ಪಾಪಸ್ ಕಳ್ಳಿ.

45 ಅಡಿ ಎತ್ತರ ಬೆಳೆದಿರುವ 100 ವರ್ಷದ ಪಾಪಸ್ ಕಳ್ಳಿ.

  • Share this:
ಚಿಕ್ಕಮಗಳೂರು : ಮರಳುಗಾಡಲ್ಲಿ ಬೆಳೆಯುವ ಪಾಪಸ್ ಕಳ್ಳಿ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರಿನಲ್ಲಿ ಸುಮಾರು 45 ಅಡಿ ಬೆಳೆಯುವ ಮೂಲಕ ವಿದೇಶಿ ಗಿಡ ಗಿನ್ನೆಸ್ ರೆಕಾರ್ಡ್ ಸೇರುವ ಹೊಸ್ತಿಲಲ್ಲಿದೆ. ಇದರ ಹೆಸರು ಸೀರಿಸ್ ನೈಟ್ ಬ್ಲೂಂ ಕ್ಯಾಕ್ಟಸ್. ಅಲಿಯಾಸ್ ಪಾಪಸ್ ಕಳ್ಳಿ. ಈ ಗಿಡ ಹೆಚ್ಚಾಗಿ  ಬೆಳೆಯೋದು ಉತ್ತರ ಅಮೆರಿಕಾ, ಬ್ರೆಜಿಲ್ ಸೇರಿದಂತೆ ವಿದೇಶದಲ್ಲಿ. ಅಲ್ಲಿ ಬೆಳೆದರು ಹೆಚ್ಚೆಂದರೆ 10 ರಿಂದ 15 ಅಡಿ ಬೆಳೆಯುತ್ತೆ. ಮಲ್ಲಂದೂರು ಗ್ರಾಮದ ಅಮರನಾಥ್ ಎಂಬುವರ ಮನೆಯಲ್ಲಿ 45 ಅಡಿ ಎತ್ತರ, 25 ಅಡಿ ಅಗಲದಲ್ಲಿ ಈ ಪಾಪಸ್ ಕಳ್ಳಿ ಬೆಳೆದಿದೆ. ಈ ಗಿಡದ ಆಯಸ್ಸು 100 ವರ್ಷ. ಎಲ್ಲಾ ಹೂವಿನ ಗಿಡಗಳು ಬೆಳಗ್ಗೆ ಅರಳಿ ಸಂಜೆಗೆ ಬಾಡಿ ಹೋದ್ರೆ, ಈ ಗಿಡದ ಹೂ ರಾತ್ರಿ ಅರಳಿ ಬೆಳಗ್ಗೆಗೆ ಬಾಡಿ ಹೋಗುತ್ತೆ. ಬ್ರಹ್ಮ ಕಮಲದಂತೆ ಇರುವ ಈ ಹೂ ಇಡೀ ಮರದ ತುಂಬಾ ಅರಳಿ ನಿಂತಾಗ ನೋಡೋದೇ ಒಂದು ಅದ್ಭುತ. ಹಾಗಾಗಿ, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಿನ್ನೆಸ್ ರೆಕಾರ್ಡ್​ ಶಿಫಾರಸು ಬರೆದಿದ್ದಾರೆ. ಅವರು ಕೊರೋನಾ ಮುಗಿದ ಕೂಡಲೇ ಬರುತ್ತೇವೆ ಎಂದಿದ್ದಾರೆ.

ಕೇವಲ ಗಿಡವಷ್ಟೇ ಅಲ್ಲ. ಈ ಮನೆಗೂ 100 ವರ್ಷಗಳ ಇತಿಹಾಸವಿದೆ. 1920ನೇ ಇಸವಿಯಲ್ಲಿ ಬ್ರಿಟಿಷರಿಂದ ಕೊಂಡ ಮನೆ ಇದು. ಈ ಮನೆಯಲ್ಲಿ ಅಂದು ಬ್ರಿಟಿಷರು ಬಳಸುತ್ತಿದ್ದ ವಸ್ತುಗಳು ಇಂದಿಗೂ ಬಳಕೆಯಲ್ಲಿವೆ. ಈ ಮನೆ ಕೊಂಡಾಗ ಈ ಗಿಡ ಮೂರ್ನಾಲ್ಕು ವರ್ಷದ್ದಾಗಿತ್ತು. ಸಣ್ಣ ಗಿಡವಾಗಿತ್ತು. ಬೆಳೆಯುತ್ತಾ... ಬೆಳೆಯುತ್ತಾ... ಇಂದು ಗಿಡ ಹೆಮ್ಮರವಾಗಿ ಬೆಳೆದಿದೆ. ಈ ಗಿಡ ಕಾಫಿನಾಡಿನ ವಾತಾವರಣದಲ್ಲಿ ಬೆಳೆಯೋದು ತೀರಾ ವಿರಳ. ಯಾಕೆಂದರೆ, ಮರಳುಗಾಡಲ್ಲಿ ಬೆಳೆಯುವ ಪಾಪಸ್ ಕಳ್ಳಿ ಗಿಡ ಹೀಗೆ ಮಲೆನಾಡಲ್ಲೂ ಮರದಂತೆ ಬೆಳೆದಿರೋದು ನೋಡುಗರನ್ನ ಮಂತ್ರಮುಗ್ಧರನ್ನಾಗಿಸಿದೆ.

ಇದನ್ನು ಓದಿ: ತಂದೆ ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕ ಸುಳಿವು ನೀಡಿದ ಪುತ್ರ ನಿಖಿಲ್ ಕುಮಾರಸ್ವಾಮಿ?!

ಅಮರನಾನಾಥ್ ಕೂಡ ಈ ಗಿಡವನ್ನು ರಕ್ಷಿಸಿ, ಪೋಷಿಸಿಕೊಂಡು ಬಂದಿದ್ದಾರೆ. ಈ ಗಿಡಕ್ಕೆ ವಿಶೇಷವಾದ ಆರೈಕೆಯನ್ನೇನು ಮಾಡಿಲ್ಲ. ನೀರು-ಸಗಣಿ ಗೊಬ್ಬರ ಹೊರತುಪಡಿಸಿ ಬೇರೇನು ಹಾಕಿಲ್ಲ. ಮಲೆನಾಡಿನ ಮಣ್ಣಿನ ಶಕ್ತಿಯೋ ಅಥವಾ ಸಗಣಿ ಶಕ್ತಿಯೊ ಗೊತ್ತಿಲ್ಲ. ಎಲ್ಲೂ ಹೀಗೆ ಮರದಂತೆ ಬೆಳೆಯದ ಈ ಗಿಡ ಕಾಫಿನಾಡ ಮಣ್ಣಲ್ಲಿ ಬೆಳೆದು ನಿಂತಿದೆ. ಈ ಮರವನ್ನು ಈ ಮನೆಯೇ ಏಳನೇ ಪೀಳಿಗೆಯ ಜನ ನೋಡ್ತಿದ್ದಾರೆ.

ಒಟ್ಟಾರೆ, ಮರಳುಗಾಡಲ್ಲಿ ಮಾತ್ರ ಹೆಚ್ಚಾಗಿ ಬೆಳೆಯೋ ಪಾಪಸ್ ಕಳ್ಳಿ ಮಲೆನಾಡಲ್ಲಿ ಹೀಗೆ ಹೆಮ್ಮರವಾಗಿ ಬೆಳೆದಿರೋದು ನಿಜಕ್ಕೂ ಪ್ರಕೃತಿಯ ವೈಚಿತ್ರ್ಯವೇ ಸರಿ. ಅದರಲ್ಲೂ ಮಲ್ಲಂದೂರು ಗ್ರಾಮ ಯಥೇಚ್ಚವಾಗಿ ಮಳೆ ಬೀಳೋ ಪ್ರದೇಶ. ಇಂತಹ ಜಾಗದಲ್ಲಿ ಅಂತಹ ಗಿಡ ಹೀಗೆ ಹೆಮ್ಮರವಾಗಿ ಬೆಳೆದಿರೋದು ನಿಜಕ್ಕೂ ಮಲೆನಾಡಿನ ಶಕ್ತಿಯೇ ಸರಿ. ಗಿಡ ಬೆಳೆದಿರೋದು ಎಷ್ಟು ಮುಖ್ಯವೋ ಅದನ್ನ ಫೋಷಿಸಿಕೊಂಡು ಬರುತ್ತಿರುವುದು ಅಷ್ಟೇ ಮುಖ್ಯ. ಈ ಪಾಪಸ್ ಕಳ್ಳಿ ಗಿಡ ಜೊತೆ ಗಿನ್ನೆಸ್ ರೆಕಾರ್ಡ್ ಬುಕ್ಕಲ್ಲಿ ಕಾಫಿನಾಡ ಹೆಸರೂ ಸೇರಲಿ ಅನ್ನೋದು ಕಾಫಿನಾಡಿಗರ ಬಯಕೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: