HOME » NEWS » District » 100 CRORES GRANT TO HASSAN CONSTITUENCY RS 1 CRORE FOR EACH VILLAGE SAYS MLA PREETAM GOWDA RH

ಹಾಸನ ಕ್ಷೇತ್ರಕ್ಕೆ 100 ಕೋಟಿ ಅನುದಾನ, ಪ್ರತಿ ಹಳ್ಳಿಗೆ 1 ಕೋಟಿ ವೆಚ್ಚದಲ್ಲಿ ಕಾಮಗಾರಿ; ಶಾಸಕ ಪ್ರೀತಂ ಗೌಡ

ಹಾಸನ ಕ್ಷೇತ್ರದ ವಿವಿಧ ಗ್ರಾಮಗಳ ಕಾಮಗಾರಿಗಳು ಡಿಸೆಂಬರ್ ಮಾಹೆಯೊಳಗೆ ಪ್ರಾರಂಭವಾಗುತ್ತದೆ ಎಂದರಲ್ಲದೆ, ನಗರದ ಹುಣಸಿನ ಕೆರೆ, ಸತ್ಯಮಂಗಲ ಕೆರೆ, ತೇಜೂರು ಕೆರೆ ಹಾಗೂ ಇನ್ನಿತರ 7 ಕೆರೆ ಮತ್ತು ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.

news18-kannada
Updated:June 19, 2020, 7:39 PM IST
ಹಾಸನ ಕ್ಷೇತ್ರಕ್ಕೆ 100 ಕೋಟಿ ಅನುದಾನ, ಪ್ರತಿ ಹಳ್ಳಿಗೆ 1 ಕೋಟಿ ವೆಚ್ಚದಲ್ಲಿ ಕಾಮಗಾರಿ; ಶಾಸಕ ಪ್ರೀತಂ ಗೌಡ
ವಿವಿಧ ಸ್ಥಳಗಳಲ್ಲಿಂದು ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಪ್ರೀತಂ ಗೌಡ.
  • Share this:
ಹಾಸನ; ಹಾಸನ  ನಗರಕ್ಕೆ ಹೊಂದಿಕೊಂಡಿರುವ 7 ಕೆರೆಗಳು ಹಾಗೂ ಸಾರ್ವಜನಿಕರ ವಾಯುವಿಹಾರಕ್ಕೆ 6 ಪಾರ್ಕ್‍ಗಳನ್ನು ಶೀಘ್ರವಾಗಿ  ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಪ್ರೀತಂ ಜೆ. ಗೌಡ ಅವರು ತಿಳಿಸಿದ್ದಾರೆ.

ನಗರದ ವಿವಿಧ ಸ್ಥಳಗಳಲ್ಲಿಂದು ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಹಾಸನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ರೂ. ವರೆಗೆ ಅನುದಾನ ನೀಡಿದ್ದು, ಪ್ರತಿ ಗ್ರಾಮಕ್ಕೆ 50 ಲಕ್ಷ ರೂ. ನಿಂದ ಒಂದು ಕೋಟಿ ರೂ. ವರೆಗಿನ ವೆಚ್ಚದಲ್ಲಿ ಹಲವಾರು ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗುತ್ತಿದೆ ಎಂದರು.

ಕಾವೇರಿ ನಿಗಮದ ವತಿಯಿಂದ 144 ಕೋಟಿ ಅಂದಾಜು ಪಟ್ಟಿಯನ್ನು ತಯಾರಿಸಿದ್ದು, ಒಂದೆರಡು ತಿಂಗಳಲ್ಲಿ ವಿವಿಧ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳು ಪ್ರಾರಂಭವಾಗುತ್ತವೆ  ಎಂದು ಅವರು ತಿಳಿಸಿದರು.

ಬೂವನಹಳ್ಳಿ ಗ್ರಾಮದ ವಿವಿಧ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿಗೆ 2.30 ಕೋಟಿ ರೂ. ಅನುದಾನ ನೀಡಿದ್ದು, ರಸ್ತೆ ಅಭಿವೃದ್ಧಿಗೆ ಇರುವ ಗ್ರಾಮಸ್ಥರ ಸಮಸ್ಯೆಯನ್ನು ಬಗೆಹರಿಸಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕರು ಮಾಹಿತಿ ನೀಡಿದರು.

ನಗರದ ಸಾಲಗಾಮೆ ಭಾಗದ ಕಡದರ ಹಳ್ಳಿಯಿಂದ ಕಸಬದ ನಿಡೂಣಿವರೆಗೆ ಒಟ್ಟು 12 ಗ್ರಾಮಗಳಲ್ಲಿಂದು ವಿವಿಧ ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕರಾದ ಪ್ರೀತಂ ಜೆ. ಗೌಡ ಅವರು ಹೇಳಿದರು.

ಇದನ್ನು ಓದಿ: Health Bulletien: ಒಂದೇ ದಿನ ರಾಜ್ಯದಲ್ಲಿಂದು ದಾಖಲೆಯ 337, ಬೆಂಗಳೂರಲ್ಲಿ 138 ಕೊರೋನಾ ಪ್ರಕರಣ; 10 ಸಾವು ದಾಖಲು!

ಹಾಸನ ಕ್ಷೇತ್ರದ ವಿವಿಧ ಗ್ರಾಮಗಳ ಕಾಮಗಾರಿಗಳು ಡಿಸೆಂಬರ್ ಮಾಹೆಯೊಳಗೆ ಪ್ರಾರಂಭವಾಗುತ್ತದೆ ಎಂದರಲ್ಲದೆ, ನಗರದ ಹುಣಸಿನ ಕೆರೆ, ಸತ್ಯಮಂಗಲ ಕೆರೆ, ತೇಜೂರು ಕೆರೆ ಹಾಗೂ ಇನ್ನಿತರ 7 ಕೆರೆ ಮತ್ತು ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
Youtube Video

ರಾಜ್ಯದಲ್ಲಿ ಕೋವಿಡ್-19 ಸಂಖ್ಯೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮಾಸ್ಕ್ ಧರಿಸುವುದರ ಜೊತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ತಡೆಗಟ್ಟುವಲ್ಲಿ ಮುಂದಾಗಬೇಕು ಎಂದು ಪ್ರೀತಂ ಜೆ. ಗೌಡ ಅವರು ತಿಳಿಸಿದರು.
First published: June 19, 2020, 7:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories