HOME » NEWS » District » 10 TEACHERS HAVE TESTED CORONAVIRUS POSITIVE IN GADAGA DISTRICT RHHSN SKG

ಗದಗ ಜಿಲ್ಲೆಯಲ್ಲಿ ಶಾಲೆ ಆರಂಭವಾಗುತ್ತಿದ್ದಂತೆ ವಿಘ್ನ; 10 ಶಿಕ್ಷಕರಿಗೆ ಕೊರೋನಾ ಪಾಸಿಟಿವ್, ಐದು ಶಾಲೆ ಬಂದ್

ಪರ-ವಿರೋಧದ ನಡುವೆ ಹೊಸ ವರ್ಷಕ್ಕೆ ಶಾಲೆ ಆರಂಭವಾಗಿವೆ. ಮಕ್ಕಳು ಕಿಲಕಿಲ ನಗುವಿನಿಂದ ಶಾಲೆಗೆ ಆಗಮಿಸಿದ್ದಾರೆ. ಆದರೆ ಜಿಲ್ಲೆಯ ಐದು ಶಾಲೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಒಟ್ಟಿನಲ್ಲಿ ಶಾಲೆ ಆರಂಭವಾಗುತ್ತಿದ್ದಂತೆ ಶಿಕ್ಷಕರಿಗೆ ಕೊರೋನಾ ಬಂದಿರೋದು ಮಕ್ಕಳು ಹಾಗೂ ಪೋಷಕರ ಎದೆಯಲ್ಲಿ ಢವ ಢವ ಆರಂಭವಾಗಿದೆ.

news18-kannada
Updated:January 2, 2021, 7:25 PM IST
ಗದಗ ಜಿಲ್ಲೆಯಲ್ಲಿ ಶಾಲೆ ಆರಂಭವಾಗುತ್ತಿದ್ದಂತೆ ವಿಘ್ನ; 10 ಶಿಕ್ಷಕರಿಗೆ ಕೊರೋನಾ ಪಾಸಿಟಿವ್, ಐದು ಶಾಲೆ ಬಂದ್
ಶಾಲೆಯಿಂದ ಮನೆಗೆ ವಾಪಸ್ಸಾದ ವಿದ್ಯಾರ್ಥಿಗಳು.
  • Share this:
ಗದಗ: ಕಳೆದ ಒಂಬತ್ತು ತಿಂಗಳ ನಂತರ ರಾಜ್ಯಾದ್ಯಂತ ಶಾಲೆ ಆರಂಭವಾಗಿವೆ. ಮಕ್ಕಳು ಸಹ ಉತ್ಸಾಹದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಟೆನ್ಶನ್ ಆರಂಭವಾಗಿದೆ. ಹೌದು ಮಕ್ಕಳು ಹೊಸ ಹುರುಪಿನಿಂದ ಶಾಲೆಗೆ ಬರ್ತಾಯಿದ್ದಾರೆ. ಆದರೆ ಗದಗ ಜಿಲ್ಲೆಯಲ್ಲಿ ವಿದ್ಯೆ ಕಲಿಸುವ ಗುರುಗಳಿಗೆ ಕೊರೋನಾ ಅಟ್ಯಾಕ್ ಮಾಡಿದೆ. ಹೀಗಾಗಿ ಶಿಕ್ಷಕರು ಹೋಮ್ ಕ್ವಾರಂಟೈನ್ ಆಗಿದ್ದು, ವಿದ್ಯಾರ್ಥಿಗಳು ಅತಂತ್ರವಾಗಿದ್ದಾರೆ.

ಶಾಲೆ ಆರಂಭವಾಗುತ್ತಿದ್ದಂತೆ ಗದಗ ಜಿಲ್ಲೆಯಲ್ಲಿ ಮಕ್ಕಳು ಹೊಸ ಉತ್ಸಾಹದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ, ಜಿಲ್ಲೆಯ ಹತ್ತು ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಹೀಗಾಗಿ ಜಿಲ್ಲೆಯ ಐದು ಶಾಲೆಗಳು ಓಪನ್ ಆಗಿಲ್ಲಾ. ಗದಗ ನಗರದ ನಾಲ್ಕು ಹಾಗೂ ನರಗುಂದ ತಾಲೂಕಿನ ಜಗಾಪೂರ ಗ್ರಾಮದ ಪ್ರೌಢಶಾಲೆಯ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಹೀಗಾಗಿ ಶಾಲೆಗೆ ಬಂದ ಮಕ್ಕಳು ವಾಪಸ್ ಮನೆಗೆ ತೆರಳಿದ್ದಾರೆ.

 ಶಿಕ್ಷಣ ಇಲಾಖೆ ಐದು ಶಾಲೆಗಳಿಗೆ ಮತ್ತೊಮ್ಮೆ ಸ್ಯಾನಿಟೈಸರ್ ಮಾಡಲಾಗಿದೆ. ಜಿಲ್ಲೆಯಾದ್ಯಂತ 6665 ಶಿಕ್ಷಕರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಈ ಪೈಕಿ 10 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಸದ್ಯ ಶಿಕ್ಷಕರು ಹೋಮ್ ಕ್ವಾರಂಟೈನ್ ಆಗಿದ್ದು, ಮುಂದೆ ಆರೋಗ್ಯ ಇಲಾಖೆಯ ಸಲಹೆ ಮೇರೆಗೆ, ಶಾಲೆ ಓಪನ್ ಮಾಡುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಗದಗ ಜಿಲ್ಲೆಯ ಡಿಡಿಪಿಐ ಬಸವಲಿಂಗಪ್ಪ ಹೇಳಿದರು.

ಇದನ್ನು ಓದಿ: ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಗಣಿ ಸಚಿವ ಸಿಸಿ ಪಾಟೀಲ ಭೇಟಿ; ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ ಗಣಿಗಾರಿಕೆ ಸ್ಥಳ ಪರಿಶೀಲನೆ

ಕೊರೋನಾ ಆತಂಕದ ನಡುವೆ ಶಾಲೆ ಹಾಗೂ ಪಿಯುಸಿ ಕಾಲೇಜು ಆರಂಭವಾಗಿವೆ. ಮಕ್ಕಳು ಹಾಗೂ ಪೋಷಕರು ಕೊರೋನಾ ಭಯದಲ್ಲಿಯೇ ಶಾಲೆಗೆ ಆಗಮಿಸಿದ್ದಾರೆ. ಆದರೆ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ 10 ಶಿಕ್ಷಕರು ಕಿಲ್ಲರ್ ಕೊರೋನಾ ದೃಢವಾಗಿದ್ದು, ಮಕ್ಕಳು ಹಾಗೂ ಪೋಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶಾಲೆ ಆರಂಭವಾಗುತ್ತಿದ್ದಂತೆ ಕೊರೋನಾ ಬಂದಿರುವುದರಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕ್ತಾಯಿದ್ದಾರೆ. ಇನ್ನೂ ಮಕ್ಕಳು ಸಹ ಶಾಲೆಗೆ ಹೋಗಲು ಭಯ ಪಡ್ತಾಯಿದ್ದಾರೆ.

ಪರ-ವಿರೋಧದ ನಡುವೆ ಹೊಸ ವರ್ಷಕ್ಕೆ ಶಾಲೆ ಆರಂಭವಾಗಿವೆ. ಮಕ್ಕಳು ಕಿಲಕಿಲ ನಗುವಿನಿಂದ ಶಾಲೆಗೆ ಆಗಮಿಸಿದ್ದಾರೆ. ಆದರೆ ಜಿಲ್ಲೆಯ ಐದು ಶಾಲೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಒಟ್ಟಿನಲ್ಲಿ ಶಾಲೆ ಆರಂಭವಾಗುತ್ತಿದ್ದಂತೆ ಶಿಕ್ಷಕರಿಗೆ ಕೊರೋನಾ ಬಂದಿರೋದು ಮಕ್ಕಳು ಹಾಗೂ ಪೋಷಕರ ಎದೆಯಲ್ಲಿ ಢವ ಢವ ಆರಂಭವಾಗಿದೆ. ಮುಂದೆ ಸರ್ಕಾರ ಯಾವ ನಿರ್ಧಾರ ಮಾಡ್ತಾರೆ ಕಾದು ನೋಡಬೇಕು. ವರದಿ: ಸಂತೋಷ ಕೊಣ್ಣೂರ
Published by: HR Ramesh
First published: January 2, 2021, 7:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories