ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಕೆರೆ ಕೋಡಿ ಒಡೆದು 10 ಎಕರೆ ಭತ್ತದ ಗದ್ದೆ ಸಂಪೂರ್ಣ ಜಲಾವೃತ
ಕಳೆದ ಬಾರಿ ನೆರೆ ಸಂದರ್ಭದಲ್ಲಿಯೂ ಈ ಬಡಾವಣೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಕೆರೆ ಕೋಡಿ ಒಡೆದ ಪರಿಣಾಮ ನುಗ್ಗಿರುವ ನೀರು ಇದಾಗಿದ್ದು, ರಾಜಕಾಲುವೆ ಮೂಲಕ ನೀರು ರಸ್ತೆ ಮೇಲೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ
news18-kannada Updated:September 7, 2020, 6:29 PM IST

ಕೆರೆ ಕೋಡಿ ಒಡೆದಿರುವುದು
- News18 Kannada
- Last Updated: September 7, 2020, 6:29 PM IST
ಶಿವಮೊಗ್ಗ(ಸೆಪ್ಟೆಂಬರ್. 07): ಶಿವಮೊಗ್ಗ ನಗರದ ವಾರ್ಡ್ ನಂ. 1 ಮತ್ತು 2 ರ ಸಮಸ್ಯೆಯಂತೂ ಹೇಳ ತೀರದಾಗಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ, ಕೆರೆಯೊಂದು ಕೋಡಿ ಒಡೆದು 10 ಎಕರೆ ಭತ್ತದ ಗದ್ದೆ ಸಂಪೂರ್ಣ ಜಲಾವೃತಗೊಂಡಿದೆ. ರೈತರಿಗೆ, ಮತ್ತು ಇಲ್ಲಿನ ನಿವಾಸಿಗಳಿಗೆ, ಜಿಲ್ಲಾಡಳಿತದ ಸಹಾಯಹಸ್ತ ಬೇಕಿದೆ. ನಿನ್ನೆ ರಾತ್ರಿ ಸುಮಾರು 3 ಗಂಟೆಗಳ ಅವಧಿಯಲ್ಲಿ ಸುರಿದ ಧಾರಾಕಾರ ಮಳೆಗೆ ಕೆರೆ ಕೋಡಿ ಒಡೆದು ಅಪಾರ ನಷ್ಟ ಉಂಟಾಗಿದೆ. ಕೆಲ ಬಡವಾಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಶಿವಮೊಗ್ಗ ನಗರದ ವಾರ್ಡ್ ನಂ. 1 ಮತ್ತು ವಾರ್ಡ್ ನಂಬರ್ 2 ರಲ್ಲಿ ಇರುವಂತ ಕೆಲ ರಸ್ತೆಗಳು ಜಲಾವೃತಗೊಂಡಿದ್ದವು. ಭತ್ತದ ನಾಟಿ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದೆ. ಶಿವಮೊಗ್ಗ ನಗರದ ಬೊಮ್ಮನಕಟ್ಟೆ, ಎಲ್.ಬಿ.ಎಸ್. ನಗರ, ಅಶ್ವಥ್ ನಗರ ಸೇರಿದಂತೆ, ವಿವಿಧ ಬಡವಣೆಗಳಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದಿದೆ.
ಕಳೆದ ಬಾರಿ ನೆರೆ ಸಂದರ್ಭದಲ್ಲಿಯೂ ಈ ಬಡಾವಣೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಕೆರೆ ಕೋಡಿ ಒಡೆದ ಪರಿಣಾಮ ನುಗ್ಗಿರುವ ನೀರು ಇದಾಗಿದ್ದು, ರಾಜಕಾಲುವೆ ಮೂಲಕ ನೀರು ರಸ್ತೆ ಮೇಲೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬೊಮ್ಮನಕಟ್ಟೆ ಬಡಾವಣೆಯಲ್ಲಿ ಕೆರೆಯ ನೀರಿನಿಂದಾಗಿ ಸಂಪರ್ಕ ರಸ್ತೆಯೇ, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಆ ಭಾಗದ ನಾಗರೀಕರಿಗೆ ಸಂಚರಿಸಲು ರಸ್ತೆ ಸಮಸ್ಯೆ ಎದುರಾಗಿದೆ. ಇದನ್ನೂ ಓದಿ : ಒಲ್ಲದ ಮನಸ್ಸಿನಿಂದಲೇ ಎನ್ಇಕೆಆರ್ಟಿಸಿ ಪದಗ್ರಹಣ ; ಸಚಿವ ಸ್ಥಾನದ ಮೇಲಿನ ಆಸೆ ಬಿಡದ ತೇಲ್ಕೂರ
ಸೋಮಿನಕೊಪ್ಪ, ಬಸವನಗಂಗೂರು ಗ್ರಾಮಗಳ ಕೆರೆ ಕೋಡಿ ಒಡೆದಿರುವ ಪರಿಣಾಮ ಈ ಅವಾಂತರ ಸೃಷ್ಟಿಯಾಗಿದೆ. ಪ್ರತಿ ಮಳೆಗಾಲದ ಸಂದರ್ಭದಲ್ಲಿ ಈ ಸಮಸ್ಯೆ ಈ ಭಾಗದಲ್ಲಿ ಎದುರಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಇದು ಕೂಡ ಇಷ್ಟೆಲ್ಲಾ ಅವಾಂತರಗಳಿಗೆ ಪ್ರಮುಖ ಕಾರಣವಾಗಿದೆ.
ಅಲ್ಲಿಲ್ಲ ಬಾಕ್ಸ್ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಮಳೆಯ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ಇದರಿಂದ ಕೆಲ ಬಡಾವಣೆಗಳ ನಿವಾಸಿಗಳಿಗೆ ತೊಂದರೆ ಎದುರಿಸುವಂತಾಗಿದೆ. ಇನ್ನಾದರೂ ಜಿಲ್ಲಾಡಳಿತ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಮತ್ತೇ ಈ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಬೇಕಿದೆ.
ಕಳೆದ ಬಾರಿ ನೆರೆ ಸಂದರ್ಭದಲ್ಲಿಯೂ ಈ ಬಡಾವಣೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಕೆರೆ ಕೋಡಿ ಒಡೆದ ಪರಿಣಾಮ ನುಗ್ಗಿರುವ ನೀರು ಇದಾಗಿದ್ದು, ರಾಜಕಾಲುವೆ ಮೂಲಕ ನೀರು ರಸ್ತೆ ಮೇಲೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬೊಮ್ಮನಕಟ್ಟೆ ಬಡಾವಣೆಯಲ್ಲಿ ಕೆರೆಯ ನೀರಿನಿಂದಾಗಿ ಸಂಪರ್ಕ ರಸ್ತೆಯೇ, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಆ ಭಾಗದ ನಾಗರೀಕರಿಗೆ ಸಂಚರಿಸಲು ರಸ್ತೆ ಸಮಸ್ಯೆ ಎದುರಾಗಿದೆ.