HOME » NEWS » District » 1 YEAR PERFORMANCE OF STATE BJP GOVERNMENT ZERO SAYS VATAL NAGARAJ MAK

ರಾಜ್ಯ ಬಿಜೆಪಿ ಸರ್ಕಾರದ 1 ವರ್ಷದ ಸಾಧನೆ ಶೂನ್ಯ; ವಾಟಾಳ್ ನಾಗರಾಜ್ ಪ್ರತಿಭಟನೆ

ರಾಜ್ಯದ ಬಿಜೆಪಿ ಸರ್ಕಾರ ಶೂನ್ಯ ಸಾಧನೆ ಮಾಡಿದ್ದರು ಪ್ರತಿ ದಿನ ಸರ್ಕಾರವನ್ನು ಹೊಗಳುವ ಜಾಹೀರಾತುಗಳನ್ನು ನೀಡಿ ಪ್ರಚಾರಗಿಟ್ಟಿಸಿಕೊಳ್ಳುವಲ್ಲಿ ತಲ್ಲಿನವಾಗಿದೆ. ರಾಜ್ಯದಲ್ಲಿ ಪ್ರತಿ ದಿನ 5 ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ತುತ್ತಾಗುತಿದ್ದಾರೆ. ಕೋವಿಡ್-19 ತಡೆಗಟ್ಟುವಲ್ಲಿ ಯಡಿಯೂರಪ್ಪ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಾಟಾಳ್‌ ನಾಗರಾಜ್‌ ಕಿಡಿಕಾರಿದ್ದಾರೆ.

news18-kannada
Updated:July 28, 2020, 7:41 AM IST
ರಾಜ್ಯ ಬಿಜೆಪಿ ಸರ್ಕಾರದ 1 ವರ್ಷದ ಸಾಧನೆ ಶೂನ್ಯ; ವಾಟಾಳ್ ನಾಗರಾಜ್ ಪ್ರತಿಭಟನೆ
ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ವಾಟಾಳ್ ನಾಗರಾಜ್.
  • Share this:
ರಾಮನಗರ: ಕೋವಿಡ್ - 19 ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದರು, ರಾಜ್ಯ ಸರ್ಕಾರ ತನ್ನ ಒಂದು ವರ್ಷದ ಸಂಭ್ರಮದಲ್ಲಿ ಮುಳುಗಿರುವುದನ್ನು ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತಿಕೃತಿಯನ್ನು ದಹಿಸಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರದ ಈ ಒಂದು ವರ್ಷ ಕರ್ನಾಟಕದ ಪಾಲಿಗೆ ಕರಾಳ ದಿನ ಎಂದು ಎಂದಿರುವ ವಾಟಾಳ್‌ ನಾಗರಾಜ್ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಐಜೂರು ವೃತ್ತದಲ್ಲಿ ಯಡಿಯೂರಪ್ಪ ಪ್ರತಿಕೃತಿ  ದಹಿಸಿ ಸರ್ಕಾರದ ವಿರುದ್ಧ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ್ದಾರೆ.

"ರಾಜ್ಯದಲ್ಲಿ ಕೊರೋನಾ ವೈರಸ್ ಗೆ  ಜನ ಬಲಿಯಾಗುತ್ತಿದ್ದರು, ಬಿಜೆಪಿ ಸರಕಾರ ಇವತ್ತು ಒಂದು ವರ್ಷದ ಸಂಭ್ರಮದಲ್ಲಿದೆ. ಇಂದು ಸಂಭ್ರಮದ ದಿನವಲ್ಲಾ ಕರಾಳ ದಿನ" ಎಂದು ಸರ್ಕಾರದ ವಿರುದ್ಧ ವಾಟಾಳ್ ನಾಗರಾಳ್  ಹರಿಹಾಯ್ದರು.

ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, "ರಾಜ್ಯದ ಬಿಜೆಪಿ ಸರ್ಕಾರ ಶೂನ್ಯ ಸಾಧನೆ ಮಾಡಿದ್ದರು ಪ್ರತಿ ದಿನ ಸರ್ಕಾರವನ್ನು ಹೊಗಳುವ ಜಾಹೀರಾತುಗಳನ್ನು ನೀಡಿ ಪ್ರಚಾರಗಿಟ್ಟಿಸಿಕೊಳ್ಳುವಲ್ಲಿ ತಲ್ಲಿನವಾಗಿದೆ. ರಾಜ್ಯದಲ್ಲಿ ಪ್ರತಿ ದಿನ 5 ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ತುತ್ತಾಗುತಿದ್ದಾರೆ. ಕೋವಿಡ್-19 ತಡೆಗಟ್ಟುವಲ್ಲಿ ಯಡಿಯೂರಪ್ಪ ಸಂಪೂರ್ಣ ವಿಫಲರಾಗಿದ್ದಾರೆ.

ಇದನ್ನೂ ಓದಿ : PUBG: ಬ್ಯಾನ್​ ಆಗುತ್ತಾ ಪಬ್​ಜಿ? ಅದಕ್ಕೆ ಪರ್ಯಾಯ ಗೇಮ್​ ಯಾವುದಿದೆ?


Youtube Video

ಜೊತೆಗೆ ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಗಳ ಹಣ ವಸೂಲಿ ಹೆಚ್ಚಾಗಿದೆ. ಕೋವಿಡ್-19 ಗೆ ಬಲಿಯಾದವರ ಅಂತ್ಯ ಸಂಸ್ಕಾರ ಯೋಗ್ಯ ರೀತಿಯಲ್ಲಿ ನಡೆಯುತ್ತಿಲ್ಲ. ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ ಮತ್ತು ಮಂತ್ರಿಗಳ ನಡುವೆ ಸಾಮರಸ್ಯ ಇಲ್ಲ. ಹಾಗಾಗಿ ಕೊರೋನಾ ನಿಭಾಯಿಸಲು ಸರ್ಕಾರ  ವಿಫಲವಾಗಿದೆ" ಎಂದು ವಾಟಾಳ್ ಆರೋಪಿಸಿದ್ದಾರೆ.
Published by: MAshok Kumar
First published: July 28, 2020, 7:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories