ಕಿಸಾನ್ ಸಮ್ಮಾನ್ ಯೋಜನೆಯಡಿ 1 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ; ಸಚಿವ ಬಿಸಿ ಪಾಟೀಲ

ಹಿಸ್ಸಾವಾರು ಅಣ್ಣ-ತಮ್ಮಂದಿರು ತಮ್ಮ ಭಾಗಕ್ಕೆ ಬಂದ ಜಮೀನಿನಲ್ಲಿ ಬೆಳೆದ ಬೆಳೆಯ ಫೋಟೋ ತೆಗೆದು ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆಂಡ್ರೈಡ್ ಮೊಬೈಲ್ ಇಲ್ಲದ ರೈತರಿಗೆ ಖಾಸಗಿ ಪ್ರತಿನಿಧಿಗಳು ನೆರವು ನೀಡಲಿದ್ದಾರೆ. ಈ ಉದ್ದೇಶಕ್ಕಾಗಿ ಪಿಆರ್‌ಒಗಳನ್ನು ನೇಮಕ ಮಾಡಲಾಗಿದೆ. ಕಂದಾಯ, ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಗಳ ಸಹಭಾಗಿತ್ವದಲ್ಲಿ ಬೆಳೆ ವಿಮೆ ಸಮೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಬಿಸಿ ಪಾಟೀಲ್

ಬಿಸಿ ಪಾಟೀಲ್

  • Share this:
ಹಾವೇರಿ; ಕಿಸಾನ್ ಸಮ್ಮಾನ್ ಯೋಜನೆಯಡಿ ಸರ್ಕಾರ ಒಂದು ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ರಾಜ್ಯದ 50 ಲಕ್ಷ ರೈತರ ಖಾತೆಗೆ ಇಂದಿನಿಂದ ಹಣ ಜಮೆಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ತಿಳಿಸಿದರು.

ಹಾವೇರಿ ತಾಲೂಕು ಅಗಡಿ ಗ್ರಾಮದ ರೈತ ನಾಗಪ್ಪ ಬಸೇಗಣ್ಣಿ ಎಂಬುವವರ ಹೊಲದಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ರಮ ವೀಕ್ಷಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳೆ ಸಮೀಕ್ಷೆ ಉತ್ಸವ ರೈತರಿಗೆ ಸುವರ್ಣಾವಕಾಶವಾಗಿದೆ. ಭಾರತದಲ್ಲೇ ಪ್ರಪ್ರಥಮ ಬಾರಿಗೆ ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಿ ಫೋಟೋ ತೆಗೆದು ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಅಪ್‌ಲೋಡ್ ಮಾಡುವ ವಿನೂತನ ಯೋಜನೆಯನ್ನು ಕರ್ನಾಟಕ ಸರ್ಕಾರ ಈ ವರ್ಷದಿಂದ ಜಾರಿಗೆ ತಂದಿದೆ. ರೈತರಿಗೆ ತಮ್ಮ ಬೆಳೆಯನ್ನು ತಾವೇ ದೃಢೀಕರಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಹೇಳಿದರು.

ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಕಾರ್ಯ ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಪ್ರತಿವರ್ಷ ಪಿಆರ್‌ಗಳ ಮೂಲಕ (ಖಾಸಗಿ ಪ್ರತಿನಿಧಿ) ಸರ್ವೇ ನಂಬರ್ ಆಧಾರದಲ್ಲಿ ಬೆಳೆ ಸಮೀಕ್ಷೆಯನ್ನು ಮಾಡಲಾಗುತ್ತಿತ್ತು. ಇದರಿಂದ ಹಿಸ್ಸೆ ಪ್ಲಾಟ್‌ಗಳ ರೈತರ ಬೆಳೆ ಸಮೀಕ್ಷೆಯಿಂದ ಕೈ ತಪ್ಪಿಹೋಗಿ ಪರಿಹಾರ ಪಡೆಯಲು ತೊಂದರೆಯಾಗುತ್ತಿತ್ತು. ಈ ಗೊಂದಲ, ತೊಂದರೆಯನ್ನು ನೂತನ ಬೆಳೆ ಸಮೀಕ್ಷೆ ಪದ್ಧತಿಯಿಂದ ನಿವಾರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 2.10 ಕೋಟಿ ಖಾತೆಗಳ ಪೈಕಿ 1.50 ಕೋಟಿ ಖಾತೆಗಳು ಮಾತ್ರ ಹಿಸ್ಸಾ ಪೋಡಿಗಳಾಗಿವೆ. ಉಳಿದ ಖಾತೆಗಳ ಪೋಡಿಯಾಗದ ಕಾರಣ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಈ ಗೊಂದಲವನ್ನು ನಿವಾರಿಸಿ ಹೊಸ ಬೆಳೆ ಸಮೀಕ್ಷೆ ಜಾರಿಗೆ ತರಲಾಗಿದೆ. ಹಿಸ್ಸಾವಾರು ಅಣ್ಣ-ತಮ್ಮಂದಿರು ತಮ್ಮ ಭಾಗಕ್ಕೆ ಬಂದ ಜಮೀನಿನಲ್ಲಿ ಬೆಳೆದ ಬೆಳೆಯ ಫೋಟೋ ತೆಗೆದು ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆಂಡ್ರೈಡ್ ಮೊಬೈಲ್ ಇಲ್ಲದ ರೈತರಿಗೆ ಖಾಸಗಿ ಪ್ರತಿನಿಧಿಗಳು ನೆರವು ನೀಡಲಿದ್ದಾರೆ. ಈ ಉದ್ದೇಶಕ್ಕಾಗಿ ಪಿಆರ್‌ಒಗಳನ್ನು ನೇಮಕ ಮಾಡಲಾಗಿದೆ. ಕಂದಾಯ, ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಗಳ ಸಹಭಾಗಿತ್ವದಲ್ಲಿ ಬೆಳೆ ವಿಮೆ ಸಮೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ: ಕೋಲಾರದಲ್ಲಿ ಮುಂದುವರೆದ ಕಾಡಾನೆ ಹಾವಳಿ; ಆನೆ ಕಾರಿಡಾರ್ ನಿರ್ಮಿಸುವಂತೆ ಗ್ರಾಮಸ್ಥರ ಪಟ್ಟು

ಬಾಕಿ ಬೆಳೆವಿಮೆ ಪರಿಹಾರ

2019-20ನೇ ಸಾಲಿನ ಬೆಳೆ ವಿಮೆಯ ವ್ಯತ್ಯಯದ ಸಮಸ್ಯೆಯನ್ನು ಸಂಪೂರ್ಣ ನಿವಾರಿಸಲಾಗಿದೆ. ಇದೇ ಮಂಗಳವಾರ ರೈತರ ಖಾತೆಗೆ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ. ಹಾಗೂ 2015-16ನೇ ಸಾಲಿನ ಬೆಳೆಯ ವ್ಯತ್ಯಯದಿಂದ ಬ್ಯಾಡಗಿ ತಾಲೂಕು ಮೋಟೇಬೆನ್ನೂರ ಹೋಬಳಿಯ ರೈತರ 1.94 ಕೋಟಿ ಹಾಗೂ 5.24 ಕೋಟಿ ಬೆಳೆ ವಿಮೆ ಬಾಕಿ ಪಾವತಿಯ ಸಮಸ್ಯೆ ಪರಿಹರಿಸಲಾಗಿದೆ. 1.94 ಕೋಟಿ ಬೆಳೆ ವಿಮೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗೂ 5.24 ಕೋಟಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ಕೋರ್ಟ್‌ ಮೊರೆ ಹೋಗಿದ್ದವು. ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ವಿಮಾ ಕಂಪನಿಗಳು ನ್ಯಾಯಾಲದಿಂದ ಪ್ರಕರಣ ಹಿಂಪಡೆಯಲು ಒಪ್ಪಿಗೆ ಸೂಚಿಸಿವೆ. ಇದರಿಂದ ಬೆಳೆ ವಿಮೆಯ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಿವೆ ಎಂದು ಹೇಳಿದರು.
Published by:HR Ramesh
First published: