Council Election: ಮತದಾರರ ಪಟ್ಟಿಗೆ ನೋಂದಾಯಿಸಿದರೆ ಉಚಿತವಾಗಿ 1 ಲಕ್ಷ ರೂ. ಇನ್ಶ್ಯೂರೆನ್ಸ್ ಬಾಂಡ್!

1 lakh worth insurance Bond : ಹೊಸದಾಗಿ ಮತದಾರರ ಪಟ್ಟಿಗೆ ನೋಂದಾಯಿಸಲು 27 ಸಾವಿರ ಅರ್ಜಿಗಳನ್ನು ಸಿದ್ದಪಡಿಸಲಾಗಿದ್ದು ಶೀಘ್ರದಲ್ಲೇ ಸಲ್ಲಿಸಲಾಗುವುದು, ಈಗಾಗಲೇ 17 ಸಾವಿರ ಪದವೀಧರ ಮತದಾರರಿಗೆ ಉಚಿತವಾಗಿ 1 ಲಕ್ಷ ರೂಪಾಯಿ ಇನ್ಶ್ಯೂರೆನ್ಸ್ ಬಾಂಡ್  ನೀಡಿದ್ದೇವೆ ಎಂದು ಸ್ವತಃ ಎನ್ ಎಸ್ ವಿನಯ್ ಸಂವಾದ ಕಾರ್ಯಕ್ರಮ ದಲ್ಲಿ ತಿಳಿಸಿದರು. 

ಟಿಕೆಟ್​ ಆಕಾಂಕ್ಷಿ ವಿನಯ್​, ನಟ ಪ್ರೇಮ್​

ಟಿಕೆಟ್​ ಆಕಾಂಕ್ಷಿ ವಿನಯ್​, ನಟ ಪ್ರೇಮ್​

  • Share this:
ಚಾಮರಾಜನಗರ ( ಸೆ..26) ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ರೀತಿಯ ಭರವಸೆ ನೀಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬರು ಪದವೀಧರರ ಮತದಾರರ ಪಟ್ಟಿಗೆ ನೊಂದಣಿ ಮಾಡಿಸುವವರಿಗೆ  ಉಚಿತವಾಗಿ ಒಂದು ಲಕ್ಷ ರೂಪಾಯಿ ಇನ್ಶ್ಯೂರೆನ್ಸ್  ಬಾಂಡ್‌   ನೀಡುತ್ತಿದ್ದಾರೆ. ಹೌದು ಮತದಾರರನ್ನು ಸೆಳೆಯಲುಸಚಿವ ಕೆ.ಎಸ್.  ಈಶ್ವರಪ್ಪ  ಅವರ ಮಾಜಿ ಆಪ್ತ ಸಹಾಯಕ ಎನ್ ಎಸ್ ವಿನಯ್ ಮಾಡುತ್ತಿರುವ  ಕಾರ್ಯತಂತ್ರ ಇದು. ಈಗಾಗಲೇ ನಾನೇ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿರುವ ಎನ್. ಎಸ್. ವಿನಯ್,  ದಕ್ಷಿಣ ಪದವೀಧರರ ವೇದಿಕೆ ರಚಿಸಿ  ಮತದಾರರ ಮನಸ್ಸು ಗೆಲ್ಲಲು ನಾನಾ ರೀತಿಯ ಪ್ರಯತ್ನ ಆರಂಭಿಸಿದ್ದಾರೆ. ಪದವೀಧರರ ಮತದಾರರ ಪಟ್ಟಿಗೆ  ಮತದಾರರನ್ನು ನೋಂದಣಿ ಮಾಡಿಸುವ ಕಾರ್ಯ ಆರಂಭಿಸಿದ್ದಾರೆ. 

ಪದವೀಧರ ಮತ ಸೆಳೆಯರು ತಂತ್ರ 

ಚಾಮರಾಜನಗರದಲ್ಲಿಂದು  ದಕ್ಷಿಣ ಪದವೀಧರರ ವೇದಿಕೆಯಡಿ  ಪದವೀಧರರೊಂದಿಗೆ ಚಲನಚಿತ್ರ ಚಿತ್ರ  ನಟ ನೆನಪಿರಲಿ ಪ್ರೇಮ್  ಸಂವಾದ ಕಾರ್ಯಕ್ರಮ ಆಯೋಜಿಸಿದ್ದ ವಿನಯ್ ಪರೋಕ್ಷವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.  ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಮತದಾರರರನ್ನು ಸೆಳೆಯಲು ಕಸರತ್ತು ನಡೆಸಿ ರುವ ಅವರು ಮೈಸೂರು, ಮಂಡ್ಯ, ಚಾಮರಾಜನಗರ ಹಾಗು  ಹಾಸನ ಜಿಲ್ಲೆಗಳಲ್ಲಿ ಪ್ರವಾಸ ನಡೆಸುತ್ತಿದ್ದುಮತದಾರ ಪಟ್ಟಿಗೆ ನಾಲ್ಕು ಜಿಲ್ಲೆಗಳಲ್ಲಿ 1.06 ಲಕ್ಷ  ಪದವೀಧರ ಮತದಾರರನ್ನು ನೊಂದಣಿ ಮಾಡಿಸಲು ಮುಂದಾಗಿದ್ದು ಈಗಾಗಲೇ ಅರ್ಜಿಗಳನ್ನು ವಿತರಿಸಿದ್ದಾರೆ

17 ಸಾವಿರ ಪದವೀಧರಿಗೆ  ಇನ್ಶ್ಯೂರೆನ್ಸ್ ಬಾಂಡ್ 

ಹೊಸದಾಗಿ ಮತದಾರರ ಪಟ್ಟಿಗೆ ನೋಂದಾಯಿಸಲು 27 ಸಾವಿರ ಅರ್ಜಿಗಳನ್ನು ಸಿದ್ದಪಡಿಸಲಾಗಿದ್ದು ಶೀಘ್ರದಲ್ಲೇ ಸಲ್ಲಿಸಲಾಗುವುದು, ಈಗಾಗಲೇ 17 ಸಾವಿರ ಪದವೀಧರ ಮತದಾರರಿಗೆ ಉಚಿತವಾಗಿ 1 ಲಕ್ಷ ರೂಪಾಯಿ ಇನ್ಶ್ಯೂರೆನ್ಸ್ ಬಾಂಡ್  ನೀಡಿದ್ದೇವೆ ಎಂದು ಸ್ವತಃ ಎನ್ ಎಸ್ ವಿನಯ್ ಸಂವಾದ ಕಾರ್ಯಕ್ರಮ ದಲ್ಲಿ ತಿಳಿಸಿದರು. ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಶೇಕಡಾ 98-99 ರಷ್ಟು ಮತದಾನವಾಗುತ್ತದೆ. ಆದರೆ ವಿದ್ಯಾವಂತರೇ ಇರುವ ಪದವೀಧರ ಕ್ಷೇತ್ರಗಳಲ್ಲಿ  ಕೇವಲ  ಶೇ 45 ರಿಂದ  50 ರಷ್ಟು ಮಾತ್ರ ಮತದಾನವಾಗುತ್ತದೆ, ಹಾಗಾಗಿ ಮತದಾರರ ಪಟ್ಟಿಗೆ ಪದವೀಧರರು ನೋಂದಣಿ ಮಾಡಿಸುವುದನ್ನು ಉತ್ತೇಜಿಸುವ ಸಲುವಾಗಿ ಉಚಿತವಾಗಿ ಒಂದು ಲಕ್ಷ ರೂಪಾಯಿಯ ಇನ್ಶ್ಯೂರೆನ್ಸ್ ಬಾಂಡ್ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ವಿನಯ್ ಪರ ನೆನಪಿರಲಿ ಪ್ರೇಮ್ ಬ್ಯಾಟಿಂಗ್

ಇನ್ನೂ ಚಿತ್ರನಟ ನೆನಪಿರಲಿ ಪ್ರೇಮ್ ರಿಂದ ಪದವೀಧರ ಮತದಾರರೊಂದಿಗೆ  ಸಂವಾದ ಕಾರ್ಯಕ್ರಮ  ಏರ್ಪಡಿಸುವ ಮೂಲಕವೂ ಎನ್.ಎಸ್.ವಿನಯ್   ಪರೋಕ್ಷವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಹಾಗು ಚಾಮರಾಜನಗರ ದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕಎನ್ ಎಸ್ ವಿನಯ್  ಅವರಿಗೆ ನಟ ಪ್ರೇಮ್  ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Siddaramaiah Targets BSY: ಲೂಟಿ ಹೊಡೆದಿದ್ದಕ್ಕೆ BSY ಅತ್ಯುತ್ತಮ ಶಾಸಕನಾ? ರಾಜಹುಲಿ ಅಂತ ಬೇರೆ ಕರಿಬೇಕಾ? ಸಿದ್ದರಾಮಯ್ಯ ಕೆಂಡ

ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಇಲ್ಲ, ಆದರೆ ವಿನಯ್ ನನ್ನ ಸ್ನೇಹಿತ, ಅವರು ಮುಂದೆ ಸೋಲಲಿ,  ಗೆಲ್ಲಲಿ, ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುತ್ತಾರೆ ಕೊನೆಯ ಉಸಿರು ಇರುವವರೆಗು ನಿಮ್ಮ‌ ಜೊತೆ ಇರುತ್ತಾರೆ ಎಂಬ ಭರವಸೆಯನ್ನು ಕೊಡಬಲ್ಲೆ ಎನ್ನುವ ಮೂಲಕ ಎನ್ ಎಸ್ ವಿನಯ್ ಅವರು ಪರ ಬ್ಯಾಟಿಂಗ್ ನಡೆಸಿದರು.
Published by:Kavya V
First published: