ದಾವಣಗೆರೆ: ಮುದ್ದು ಮುದ್ದಾದ ನಾಯಿ ಮರಿ, ಮುಟ್ಟೋಣ ಅಂತ ಹೋದ್ರೆ ಪಕ್ಕದಲ್ಲೇ ಕಚ್ಚೋಕೆ ರೆಡಿಯಾಗಿರೋ ಕೋಪಿಷ್ಟ ನಾಯಿಗಳು! ದಾವಣಗೆರೆಯಲ್ಲಿ (Davanagere News) ನಡೆದ ರಾಜ್ಯಮಟ್ಟದ 6ನೇ ಶ್ವಾನ ಪ್ರದರ್ಶನಕ್ಕೆ (Dog Show In Davanagere)ಬಂದಿದ್ದ ನಾಯಿಗಳಿವು. ಈ ಬಗೆಬಗೆಯ ಶ್ವಾನಗಳನ್ನು ನೋಡೋಕೆ ದಾವಣಗೆರೆಯ (Davanagere Dog Show) ಸಾವಿರಾರು ಜನ ಆಗಮಿಸಿದ್ರು.
ಬೆಣ್ಣೆ ನಗರಿ ಜನರಿಗೆ ಶ್ವಾನ ಪ್ರದರ್ಶನ ಮುದ ನೀಡಿತು. ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ನಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಶ್ವಾನ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಹೊ ರಾಜ್ಯಗಳಿಂದಲೂ ಬಂದಿದ್ದ ನಾಯಿಗಳು!
ಶ್ವಾನ ಪ್ರದರ್ಶನಕ್ಕೆ ಹೊರ ರಾಜ್ಯ ಹಾಗೂ ರಾಜ್ಯದ ನಾನಾ ಜಿಲ್ಲೆಗಳಿಂದ ನಾಯಿಗಳು ಬಂದಿದ್ದವು. ಗೋವಾ , ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ರಾಜ್ಯದ ಬೆಂಗಳೂರು, ಶಿವಮೊಗ್ಗದ, ಹೊಸಪೇಟೆ, ಚಿಕ್ಕಮಗಳೂರು, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಶ್ವಾನಗಳು ಕಾರ್ಯಕ್ರಮದಲ್ಲಿ ಮಿಂಚಿದವು.
ಇದನ್ನೂ ಓದಿ: Aghanashini Aarti: ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಅಘನಾಶಿನಿ ಆರತಿ!
ಗಮನ ಸೆಳೆದ ಈ ತಳಿಯ ನಾಯಿಗಳು
ಚೌ ಚೌ, ಬಾರ್ಡರ್ ಕಾಲಿ, ಜರ್ಮನ್ ಶೆಫರ್ಡ್ ರ್ಯಾಟ್ ವಿಲ್ಲರ್, ಬುಲ್ ಡಾಗ್ ಡಾಬರ್ ಮೆನ್, ಇಂಡಿಯನ್ ಮುಧೋಳ ಒಟ್ಟು 200ಕ್ಕೂ ಅಧಿಕ ತಳಿಯ ಶ್ವಾನ ನಾಯಿಗಳು ಭಾಗವಹಿಸಿತ್ತು.
ಇದನ್ನೂ ಓದಿ: Karwar: ಮೊಟ್ಟೆ ಇಡುವ ಸಮಯ ಬದಲಾಯಿಸಿದ ಕಡಲಾಮೆ!
ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ಮೂರು ಬಹುಮಾನ ಆಯೋಜನೆ ಮಾಡಲಾಗಿತ್ತು. ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತೀಯ 10 ಸಾವಿರ ರೂಪಾಯಿಗಳಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ