• ಹೋಂ
  • »
  • ನ್ಯೂಸ್
  • »
  • ದಾವಣಗೆರೆ
  • »
  • MP Renukacharya Car: ಕಾರಿನ ಮೇಲೆ ಕುಳಿತ ಕೋತಿಗೆ ಸೇಬು ತಿನಿಸಿದ ಶಾಸಕ ರೇಣುಕಾಚಾರ್ಯ! ಸಿಕ್ತಾ ಭಜರಂಗಿಯ ಆಶೀರ್ವಾದ?

MP Renukacharya Car: ಕಾರಿನ ಮೇಲೆ ಕುಳಿತ ಕೋತಿಗೆ ಸೇಬು ತಿನಿಸಿದ ಶಾಸಕ ರೇಣುಕಾಚಾರ್ಯ! ಸಿಕ್ತಾ ಭಜರಂಗಿಯ ಆಶೀರ್ವಾದ?

X
ಶಾಸಕ ರೇಣುಕಾಚಾರ್ಯ ಕಾರಿನ ಮೇಲೆ ಕೋತಿ!

"ಶಾಸಕ ರೇಣುಕಾಚಾರ್ಯ ಕಾರಿನ ಮೇಲೆ ಕೋತಿ!"

ಶಾಸಕ ರೇಣುಕಾಚಾರ್ಯ ಮತ್ತು ಅವರ ಜೊತೆಯಲ್ಲಿದ್ದ ಹಲವರು ಈ ಕೋತಿಯನ್ನು ಕಂಡು ಸಂತಸಪಟ್ಟಿದ್ದಾರೆ. ಅಲ್ಲದೇ, ಚುನಾವಣಾ ಸಮಯದಲ್ಲಿ ಈ ಕೋತಿಯ ರೂಪದಲ್ಲಿ ಭಜರಂಗಿಯ ಆಶೀರ್ವಾದವೇ ಸಿಕ್ಕಿತು ಎಂದು ಖುಷಿಗೊಂಡಿದ್ದಾರೆ.

  • News18 Kannada
  • 3-MIN READ
  • Last Updated :
  • Davanagere (Davangere), India
  • Share this:

    ದಾವಣಗೆರೆ: ಕಾರು ಅಥವಾ ಇನ್ಯಾವುದೇ ವಾಹನದ ಮೇಲೆ ಕೋತಿ, ಕಾಗೆ ಕುಳಿತರೆ ಏನು ಫಲ ಸಿಗುತ್ತೋ ಗೊತ್ತಿಲ್ಲ. ಆದ್ರೆ ರೇಣುಕಾಚಾರ್ಯ (MP Renukacharya) ಅವರ ಕಾರ್ ಮೇಲೆ ಕುಳಿತ ಕೋತಿಯಿಂದ ಹೊನ್ನಾಳಿಯ ಶಾಸಕರಂತೂ (HOnnalli MLA) ಫುಲ್ ಖುಷ್ ಆಗಿದ್ದಾರೆ. ಮಹಾ ಶಿವರಾತ್ರಿಯಂದು (Mahashivaratri 2023) ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸವಳಂಗ ಗ್ರಾಮದಲ್ಲಿ ಈ ಅಪರೂಪದ (Viral Video) ಘಟನೆ ನಡೆದಿದೆ.


    ಕೋತಿಯ ತಲೆ ಸವರಿದ ಶಾಸಕ!
    ಹೌದು, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಕಾರಿನ ಮೇಲೆ ಕೋತಿ ಅಥವಾ ಮುಷ್ಯಾ ಒಂದು ಕುಳಿತಿದೆ. ಶಿವರಾತ್ರಿಯ ದಿನವೇ ಈ ಘಟನೆ ನಡೆದಿದೆ. ಕೋತಿ ಕೆಲಹೊತ್ತು ತಮ್ಮ ಕಾರಿನ ಮೇಲೆ ಕುಳಿತಿರೋದಕ್ಕೆ ಶಾಸಕ ರೇಣುಕಾಚಾರ್ಯ ಖುಷಿಪಟ್ಟಿದ್ದಾರೆ. ತಮ್ಮ ಕಾರಿನ ಮೇಲೆ ಕುಳಿತ ಕೋತಿಯ ತಲೆ ಸವರುತ್ತಾ ಸೇಬು ನೀಡಿದ್ದಾರೆ.




    ಇದನ್ನೂ ಓದಿ: Remote Control Chariot: ಇದು ಕರ್ನಾಟಕದ ಮೊದಲ ರಿಮೋಟ್ ಕಂಟ್ರೋಲ್ ರಥ! ಭಕ್ತರು ಎಳೆಯಬೇಕಂತಿಲ್ಲ!


    ಕಾರಿನಿಂದ ಜಿಗಿದು ಬೈಕ್ ಏರಿದ ಮಂಗ!
    ಇದೇ ವೇಳೆ ಕೋತಿ ಶಾಸಕ ರೇಣುಕಾಚಾರ್ಯ ಅವರ ಕಾರಿನಿಂದ ಜಿಗಿದು ಪಕ್ಕದಲ್ಲೇ ನಿಲ್ಲಿಸಿದ್ದ ಬೈಕ್ ಒಂದರ ಮೇಲೇರಿ ಕುಳಿತಿದೆ. ಬೈಕ್ ಮೇಲೆ ಕುಳಿತು ರೇಣುಕಾಚಾರ್ಯ ನೀಡಿದ್ದ ಸೇಬುಹಣ್ಣನ್ನು ಸವಿದಿದೆ.




    ಇದನ್ನೂ ಓದಿ: Davanagere Dog Show: ಬೆಣ್ಣೆ ನಗರಿಯಲ್ಲಿ ಶ್ವಾನ ಪ್ರದರ್ಶನ, ದಾವಣಗೆರೆ ಡಾಗ್ ಶೋ ಸಂಭ್ರಮ!


    ಭಜರಂಗಿಯ ಆಶೀರ್ವಾದವೇ ಸಿಕ್ತಾ
    ಶಾಸಕ ರೇಣುಕಾಚಾರ್ಯ ಮತ್ತು ಅವರ ಜೊತೆಯಲ್ಲಿದ್ದ ಹಲವರು ಈ ಕೋತಿಯನ್ನು ಕಂಡು ಸಂತಸಪಟ್ಟಿದ್ದಾರೆ. ಅಲ್ಲದೇ, ಚುನಾವಣಾ ಸಮಯದಲ್ಲಿ ಈ ಕೋತಿಯ ರೂಪದಲ್ಲಿ ಭಜರಂಗಿಯ ಆಶೀರ್ವಾದವೇ ಸಿಕ್ಕಿತು ಎಂದು ಖುಷಿಗೊಂಡಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: