ದಾವಣಗೆರೆ: ಮಕ್ಕಳಿಗೆ ಶೈಕ್ಷಣಿಕ ವರ್ಷ (Educational Year) ಮುಗಿಸಿ ಬೇಸಿಗೆ ರಜೆಯಲ್ಲಿ (Summer Holidays) ಮುಳುಗಿದ್ದಾರೆ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಪಾರ್ಕ್ (Park), ಸಿನೆಮಾ (Cinema), ಟೂರ್ (Tour) ಅಂತ ಕೆಲ ಮಕ್ಕಳು ಓಡಾಡುತ್ತಾ ಎಂಜಾಯ್ (Enjoy) ಮಾಡ್ತಾ ಇದ್ದರೆ, ಬೆಣ್ಣೆ ನಗರಿ ದಾವಣಗೆರೆಯಲ್ಲಿ (Davanagere) ಕೆಲ ಮಕ್ಕಳು ವ್ಯಾಪಾರ ಮಾಡೋದು ಹೇಗೆ ಅನ್ನೋದನ್ನ ಕಲಿತಾ ಇದ್ದಾರೆ.. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಖುಷಿ ಖುಷಿಯಾಗಿ ವ್ಯಾಪಾರದಲ್ಲಿ ಹೇಗೆ ತೋಡಿಗಿಸಿಕೊಂಡಿದ್ದಾರೆ ಅನ್ನೋದನ್ನ ದಾವಣಗೆರೆಗೆ ಬಂದ್ರೆ ನೀವೆ ನೋಡಬಹುದು...
ಓದುವ ಮಕ್ಕಳಿಗೆ ವ್ಯಾಪಾರದ ಪಾಠ
ಮಕ್ಕಳಿಗೆ ಮನೆಯಲ್ಲಿ ತಂದೆ-ತಾಯಿ ಶಾಲೆಯಲ್ಲಿ ಶಿಕ್ಷಕರು ಬರೀ ಓದು ಓದು ಅಂತ ಒತ್ತಾಯ ಮಾಡ್ತಾ ಇರ್ತಾರೆ.. ಓದು, ಪರೀಕ್ಷೆ ಇದನ್ನೆಲ್ಲ ಮುಗಿಸಿ ಬೇಸಿಗೆ ರಜೆಯಲ್ಲಿರೋ ಮಕ್ಕಳಿಗೆ ಅನ್ವೇಷಕ ಆರ್ಟ್ ಫೌಂಡೇಶನ್ ಸಾಮಾಜಿಕ ನಾಟಕ ಹಾಗೂ ಇತರೆ ಸಮಾಜ ಕಾಳಜಿ ಬಗ್ಗೆ ಪಾಠ ಮಕ್ಕಳಿಗೆ ಕಲಿಸುತ್ತಿದ್ದರು , ಆದ್ರೆ ಇಂದು ವ್ಯಾಪಾರ ಮಾಡೋದನ್ನ ಕಲಿಸುತ್ತಿದೆ.
ಪೋಷಕರಿಂದ ಬಂಡವಾಳ ಸಂಗ್ರಹಿಸಿ ವ್ಯಾಪಾರ
ಹೌದು ದಾವಣಗೆರೆಯ ಗುರು ಭವನದ ರಸ್ತೆಯಲ್ಲಿ ಮಕ್ಕಳಿಗೆ ವ್ಯಾಪಾರ ವಹಿವಾಟು ಕಲಿಸಲೂ ಬೇಸಿಗೆ ಶಿಬಿರ ಆಯೋಜನೆ ಮಾಡಿತ್ತು. ಇಲ್ಲಿ ಮಕ್ಕಳು ತಮ್ಮ ಪೋಷಕರ ಹತ್ತಿರ ಬಂಡವಾಳ ತೆಗೆದುಕೊಂಡು, ವಿವಿಧ ವ್ಯಾಪಾರವನ್ನ ಮಾಡುತಿದ್ದರು.
ಇದನ್ನೂ ಓದಿ: Dakshina Kannada: ಈ ಪವಿತ್ರ ಗುಂಡಿಯಲ್ಲಿ ವರ್ಷಕ್ಕೊಮ್ಮೆ ತೀರ್ಥಸ್ನಾನಕ್ಕೆ ಅವಕಾಶ; ಇಲ್ಲಿನ ಮಹಿಮೆ ಏನು ಗೊತ್ತಾ?
ವಿವಿಧ ಸಾಮಗ್ರಿ ಮಾರಾಟ ಮಾಡಿದ ಮಕ್ಕಳು
ಬಾಳೆಹಣ್ಣು, ತರಕಾರಿ, ದ್ವೀದಳ ಧಾನ್ಯ, ಆಟಿಕೆ, ತಿಂಡಿ ತಿನಿಸು, ಮಡಿಕೆ.. ಸೇರಿ ಇತರೆ ವಸ್ತುಗಳ ವ್ಯಾಪಾರವನ್ನ ಮಾಡುತಿದ್ದರು. ಮಕ್ಕಳು ಬಂಡವಾಳ ಹಾಕಿ ತಂದ, ತಿನಿಸು, ತರಕಾರಿಗೆ ತಾವು ಹೂಡಿದ ಬಂಡವಾಳಕ್ಕೆ ಲಾಭಾಂಶವನ್ನ ತೆಗೆಯುವ ಗಮನದಲ್ಲಿಟ್ಟುಕೊಂಡು ವ್ಯಾಪಾರ ಮಾಡುತಿದ್ದರು.
ತಂದೆ ತಾಯಿಯರ ಕಷ್ಟದ ಬಗ್ಗೆ ಮಕ್ಕಳಿಗೆ ಮನವರಿಕೆ
ಮಕ್ಕಳ ವ್ಯಾಪಾರನ್ನ ಕಂಡು ಗ್ರಾಹಕರು ಕೂಡ ಆಗಮಿಸಿ ಮಕ್ಕಳಿಂದ ಎಲ್ಲ ವಸ್ತುಗಳ ರೇಟ್ ಗಳನ್ನ ಕೇಳಿ ಅವರಿಂದ ತಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಂಡರು.. ಇನ್ನೂ ಈ ಕಾರ್ಯಕ್ರಮದ ಉದ್ದೇಶವೆಂದರೆ, ಕೆಲ ತಂದೆ ತಾಯಿಗಳು ಇಂತಹದೆ ವ್ಯಾಪಾರ ಮಾಡಿ ಕಷ್ಟುಪಟ್ಟು ಮಕ್ಕಳನ್ನ ಓದಿಸುತ್ತಿರುತ್ತಾರೆ. ತಂದೆ ತಾಯಿಗಳು ಪಡುವ ಕಷ್ಟದ ಬಗ್ಗೆ ಮಕ್ಕಳಿಗೂ ತಿಳಿಯಲ್ಲಿ ಎನ್ನುವ ಉದ್ದೇಶದಿಂದ ಆಯೋಜನೆ ಮಾಡಲಾಗಿತ್ತು.
ಕೋವಿಡ್ ಅಬ್ಬರದ ಬಳಿಕ ಮತ್ತೆ ಮಕ್ಕಳಿಗಾಗಿ ಆಯೋಜನೆ
ಹೀಗಾಗಿ ಮಕ್ಕಳಿಗೆ ತಂದೆ ತಾಯಿ ಕಷ್ಟ ಅರ್ಥವಾಗಲಿ.. ಮಕ್ಕಳಿಗೆ ವ್ಯಾಪಾರದ ಬಗ್ಗೆ ಅರಿವು ಬರಲಿ ಅನ್ನೋ ಉದ್ದೇಶದಿಂದ ಈ ಬೇಸಿಗೆ ಶಿಬಿರವನ್ನ ಆಯೋಜಿಸಲಾಗಿದೆ. ಅನ್ವೇಷಕ ಆರ್ಟ್ ಫೌಂಡೇಶನ್ ಇದನ್ನ 5 ವರ್ಷದಿಂದ ಮಕ್ಕಳಿಗೆ ಸಮರ್ ಕ್ಯಾಂಪ್ ಆಯೋಜನೆ ಮಾಡುತ್ತಾ ಬಂದಿದೆ.. ಕೊರೋನಾದಿಂದ ಎರಡು ವರ್ಷ ಈ ಕಾರ್ಯಕ್ರಮ ಸ್ಥಗಿತವಾಗಿತ್ತು.. ಇದೀಗ ಮತ್ತೆ ಬೇಸಿಗೆ ಶಿಬಿರ ಆರಂಭವಾಗಿದ್ದು, ಮಕ್ಕಳು ಕೂಡ ಕುತೂಹಲದಿಂದ ಸಂತೋಷದಿಂದ ಪಾಲ್ಗೊಂಡಿದ್ದರು..
ಇದನ್ನೂ ಓದಿ: Mango Price: ಈ ಬಾರಿ ಮಾವಿನ ಹಣ್ಣು ಬಲು ದುಬಾರಿ; ರೇಟ್ ಕೇಳಿ ಶಾಕ್ ಆಗ್ತಿದ್ದಾನೆ ಗ್ರಾಹಕ
ಮಕ್ಕಳ ಸಂತೆಗೆ ಸಾರ್ವಜನಿಕರ ಮೆಚ್ಚುಗೆ
ಮಕ್ಕಳು ಅಂದ್ರೆ ಕೇವಲ ಆಟ-ಪಾಠ ಎಂಜಾಯ್ ಮೆಂಟ್ ನಲ್ಲಿ ಬ್ಯುಸಿ ಆಗಿರ್ತಾರೆ.. ಅನ್ವೇಷಕ ಆರ್ಟ್ ಫೌಂಡೇಶನ್ ಈ ವಿನೂತನ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬೆಳೆಸುತಿದ್ದಾರೆ.. ಬೆಳೆಯುವ ಸಿರಿ ಮೊಳಕೆಯಲ್ಲೆ ಎಂಬಂತೆ ಮಕ್ಕಳಿಗೂ ಕೂಡ ಇದರಿಂದ ಲಾಭ-ನಷ್ಟದ ಲೆಕ್ಕಾಚಾರವು ಗೊತ್ತಾಗುತ್ತೆ.. ಈ ಕಾರ್ಯಕ್ರಮವನ್ನ ನೋಡಿದ ಜನರು ಕೂಡ ಈ ಮೆಚ್ವುಗೆ ವ್ಯಕ್ತಪಡಿಸುತಿದ್ದಾರೆ..
(ವರದಿ: ಎ.ಪಿ. ಸಂಜಯ್ ಕುಂದುವಾಡ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ