Remote Control Chariot: ಇದು ಕರ್ನಾಟಕದ ಮೊದಲ ರಿಮೋಟ್ ಕಂಟ್ರೋಲ್ ರಥ! ಭಕ್ತರು ಎಳೆಯಬೇಕಂತಿಲ್ಲ!

ಇಲ್ಲಿ ವಿಡಿಯೋ ನೋಡಿ

ಇಲ್ಲಿ ವಿಡಿಯೋ ನೋಡಿ

ಸತತ 2 ವರ್ಷಗಳ ಪರಿಶ್ರಮದಿಂದ ಈ ನೂತನ ರಥವನ್ನು ಸಿದ್ಧಪಡಿಸಲಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಪ್ರಥಮ ಬಾರಿಗೆ ಭಕ್ತರು ಇದನ್ನು ಎಳೆದು ಸಂತಸಟ್ಟಿದ್ದಾರೆ.

 • News18 Kannada
 • 3-MIN READ
 • Last Updated :
 • Davanagere (Davangere), India
 • Share this:

  ದಾವಣಗೆರೆ: ನೂರಾರು ಜನರ ನಡುವೆ ಸಾಗುತ್ತಿರೋ ಭವ್ಯ ರಥ, ಈ ರಥದ ಮೇಲೇ ಭಕ್ತರ (Valmiki Jatre Davanagere) ಚಿತ್ತ, ಯಾರೂ ಎಳೆಯಬೇಕಂತಿಲ್ಲ, ಆದ್ರೂ ಚಲಿಸುತ್ತೆ ಈ ಬೃಹತ್ ರಥ! (Automatic Chariot) ಹೌದು, ಇಂಥದ್ದೊಂದು ರಥವೇ ಈಗ ಆಕರ್ಷಣೆಯ (Remote Control Chariot) ಕೇಂದ್ರಬಿಂದು.


  ಕರ್ನಾಟಕದ ಜಾತ್ರೆಗಳಲ್ಲಿ ಎಳೆಯಲಾಗುವ ಎಲ್ಲ ರಥಗಳನ್ನೂ ಭಕ್ತರೇ ಎಳೆಯಬೇಕಾಗುತ್ತೆ, ಆದ್ರೆ ಈ ರಥವನ್ನ ಯಾರೂ ಎಳೆಯಬೇಕಂತಿಲ್ಲ! ದಾವಣಗೆರೆಯಲ್ಲಿ ಸಂಭ್ರಮ ಸಡಗರದಿಂದ ಆರಂಭವಾದ ವಾಲ್ಮೀಕಿ ಜಾತ್ರೆಯಲ್ಲಿ ಸಂಚರಿಸುತ್ತಿರೋ ಈ ರಿಮೋಟ್ ಕಂಟ್ರೋಲ್ ರಥ ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.


  2 ಕೋಟಿ 15 ಲಕ್ಷ ಖರ್ಚು
  ವಾಲ್ಮೀಕಿ ಮಠಕ್ಕೆ ಹೊಸ ರಿಮೋಟ್ ಕಂಟ್ರೋಲ್ ರಥವನ್ನು ಸಚಿವ ಆನಂದ್ ಸಿಂಗ್ ಕೊಡುಗೆಯಾಗಿ ನೀಡಿದ್ದಾರೆ. 2 ಕೋಟಿ 15 ಲಕ್ಷದಲ್ಲಿ ತಯಾರಾದ ವಾಲ್ಮೀಕಿ ರಥದ ಸುತ್ತಲೂ ವಾಲ್ಮೀಕಿ ರಚಿತ ರಾಮಾಯಣ ಚಿತ್ರಗಳಿವೆ. 63 ಅಡಿ ಎತ್ತರದ 6 ಚಕ್ರದ ರಥ ಇದಾಗಿದ್ದು ರಿಮೋಟ್ ಕಂಟ್ರೋಲ್ ಮೂಲಕ ಚಲಿಸುತ್ತೆ ಅನ್ನೋದೇ ವಿಶೇಷವಾಗಿದೆ.


  ರಥದ ಸುತ್ತು ಹಾಕಿದರೆ ರಾಮಾಯಣ ಓದಿದ ಅನುಭವ!
  ಸತತ 2 ವರ್ಷಗಳ ಪರಿಶ್ರಮದಿಂದ ಈ ನೂತನ ರಥವನ್ನು ಸಿದ್ಧಪಡಿಸಲಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಪ್ರಥಮ ಬಾರಿಗೆ ಭಕ್ತರು ಇದನ್ನು ಎಳೆದು ಸಂತಸಟ್ಟಿದ್ದಾರೆ. 63 ಅಡಿ ಎತ್ತರ, 6 ಬೃಹತ್ ಚಕ್ರಗಳ ಈ ರಥದ ಸುತ್ತ ಒಂದು ಸುತ್ತು ಹಾಕಿದರೆ ರಾಮಾಯಣವನ್ನು ಓದಿದಂತಾಗುತ್ತದೆ.
  ಶ್ರೀ ರಾಮನ ಬಾಲ್ಯದಿಂದ ಪಟ್ಟಾಭಿಷೇಕದವರೆಗಿನ ಘಟನಾವಳಿಗಳು ರಥದ ಮೇಲೆ ಚಿತ್ರರೂಪದಲ್ಲಿ ಮೂಡಿದೆ. ವಿದ್ಯುತ್ ಚಾಲಿತ ಯಂತ್ರ ಹೊಂದಿರುವ ಈ ರಥ ರಿಮೋಟ್ ಮೂಲಕ ಚಲಿಸುತ್ತದೆ.


  ಇದನ್ನೂ ಓದಿ: Mangaluru News: ಕೊರಗಜ್ಜ ದೈವದ ಕೋಲಕ್ಕಾಗಿ ಅಮಿತ್ ಶಾ ರೋಡ್ ಶೋ ರದ್ದು


  ತಯಾರಿಸಿದ ಕಲಾವಿದರು ಇವರೇ
  ತಂತ್ರಜ್ಞರಾದ ಬೆಂಗಳೂರಿನ ಗಿರೀಶ್‌, ಶಿಲ್ಪಿ ಯಲ್ಲಾಪುರದ ಸಂತೋಷ್ ಗುಡಿಗಾರ್, ಹುಬ್ಬಳ್ಳಿಯ ಸಾಲಿಮಠ ಅವರು ಸೇರಿ ರಥವನ್ನು ಎರಡು ವರ್ಷಗಳ ಅವಧಿಯಲ್ಲಿ ಸಿದ್ಧಗೊಳಿಸಿದ್ದಾರೆ. ರಥಕ್ಕೆ ಅಂದಾಜು 2 ಕೋಟಿ ವೆಚ್ಚವಾಗಿದೆ.


  ಇದನ್ನೂ ಓದಿ: Davanagere Dog Show: ಬೆಣ್ಣೆ ನಗರಿಯಲ್ಲಿ ಶ್ವಾನ ಪ್ರದರ್ಶನ, ದಾವಣಗೆರೆ ಡಾಗ್ ಶೋ ಸಂಭ್ರಮ!


  ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರೆ ನಡೆಯುತ್ತಿದೆ. ತರಳುಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಭೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿ ನಾಡಿನ ಅನೇಕ ಮಠಾಧೀಶರು ಭಾಗಿಯಾಗುತ್ತಿದ್ದಾರೆ.


  ಮಾಹಿತಿ: ಸಂಜಯ್, ದಾವಣಗೆರೆ

  Published by:ಗುರುಗಣೇಶ ಡಬ್ಗುಳಿ
  First published: