ದಾವಣೆಗೆರೆ: ಆಕಳು ತನ್ನ ಮಾಲೀಕನನ್ನು ಚಿರತೆ ದಾಳಿಯಿಂದ ಕಾಪಾಡಿ ಜೀವ ಉಳಿಸಿದ ವಿಶಿಷ್ಟ ಘಟನೆಯೊಂದು ನಡೆದಿದೆ. ದಾವಣಗೆರೆ ಜಿಲ್ಲೆ (Davanegere News) ಚನ್ನಗಿರಿ ತಾಲೂಕಿನ ಉಬ್ರಾಣಿ ಹತ್ತಿರ ಕೊಡಕಿನಕೆರೆ ಗ್ರಾಮದಲ್ಲಿ ಈ ವಿಶಿಷ್ಟ ವಿದ್ಯಮಾನ ನಡೆದಿದೆ.
ಕೊಡಕಿನಕೆರೆ ಗ್ರಾಮದ ಕರಿಹಾಲಪ್ಪ ಅವರು ತೋಟದಲ್ಲಿ ಹಸು ಮೇಯಿಸಲು ತೆರಳಿದ್ದರು. ಈ ವೇಳೆ ಕರಿಹಾಲಪ್ಪ ಅವರ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದೆ.
ಚಿರತೆಗೆ ಗುದ್ದಿದ ಹಸು!
ಅಲ್ಲೇ ಹುಲ್ಲು ಮೇಯುತ್ತಿದ್ದ ಹಸು ಗೌರಿ ತನ್ನನ್ನು ಸಾಕಿದವರ ಮೇಲೆ ಚಿರತೆ ದಾಳಿ ಮಾಡಿರುವುದನ್ನ ನೋಡಿದೆ. ತನ್ನ ನೆಚ್ಚಿನ ಮಾಲೀಕನನ್ನು ರಕ್ಷಿಸಲು ಗೌರಿ ಹಸು ಚಿರತೆಗೆ ಗುದ್ದಿದೆ. ಇದೇ ವೇಳೆ ಹಸುವಿನಿಂದ ಗುದ್ದಿಸಿಕೊಂಡ ಚಿರತೆ ಕೊಂಚ ಗಾಬರಿಯಾಗಿದೆ.
ಇದನ್ನೂ ಓದಿ: Davanagere Benne Dose: ದಾವಣಗೆರೆ ಬೆಣ್ಣೆ ದೋಸೆಯೇ ಏಕೆ ಫೇಮಸ್?
ದೊಣ್ಣೆ ಹಿಡಿದು ಓಡಿಸಿದ ಕರಿಹಾಲಪ್ಪ
ಹಸು ಚಿರತೆಗೆ ಗುದ್ದುತ್ತಿದ್ದಂತೆ ಅರೆ ಕ್ಷಣ ಸಾವರಿಸಿಕೊಂಡ ಕರಿಹಾಲಪ್ಪ ಅವರು ಮತ್ತೆ ಚಿರತೆ ದಾಳಿಗೆ ಸಜ್ಜಾಗುತ್ತಿರುವುದನ್ನು ನೋಡಿದ್ದಾರೆ. ಕೈಯಲ್ಲಿರುವ ದೊಣ್ಣೆ ಹಿಡಿದು ಚಿರತೆಯನ್ನು ಬೆದರಿಸಿದ್ದಾರೆ.
ಕರಿಹಾಲಪ್ಪ ಅವರು ಬೆದರಿಸಿದ ತಕ್ಷಣ ಹೆದರಿದ ಚಿರತೆ ಕಾಡಿನೊಳಗೆ ಓಡಿದೆ. ಹೀಗೆ ರೈತ ಕರಿಹಾಲಪ್ಪ ಅವರ ಜೀವವನ್ನು ಗೌರಿ ಹಸು ಬದುಕಿಸಿದೆ. ಕರಿ ಹಾಲಪ್ಪ ಅವರ ಜೀವ ಉಳಿಸಿದ ಹಸು ಮೇಲೆ ಕುಟುಂಬಸ್ಥರು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Photos: ಆಂಜನೇಯ ಸ್ವಾಮಿಗೆ ನೋಟಿನ ಹಾರ!
ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ
ಚಿರತೆಯ ದಾಳಿಯಿಂದ ಕೊಡಕಿನಕೆರೆ ಮತ್ತು ಸುತ್ತಮುತ್ತ ಗ್ರಾಮದಲ್ಲಿ ಆತಂಕ ವ್ಯಕ್ತವಾಗಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಸಿದೆ. ಈಗಾಗಲೇಋ ಆಪರೇಶನ್ ಚೀತಾ ಕಾರ್ಯಚರಣೆ ಆರಂಭವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ