SBengaluru: ಅಪಾರ್ಟ್ಮೆಂಟ್ (Apartment) ಮೇಲಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಚಾಲುಕ್ಯ ಸರ್ಕಲ್ (Chalukya Circle) ಬಳಿ ಇರುವ ಹೆಚ್ಪಿ-3 ಅಪಾರ್ಟ್ಮೆಂಟ್ ಬಳಿ ಸಂಭವಿಸಿದೆ. ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಯುವತಿ (Woman) ಕೆಳಕ್ಕೆ ಬಿದ್ದಿದ್ದು, ಅಪಾರ್ಟ್ಮೆಂಟ್ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನ (Car) ಮೇಲೆ ಯುವತಿ ಬಿದ್ದಿದ್ದು, ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಪಾರ್ಟ್ಮೆಂಟ್ ನಿವಾಸಿಗಳು, ಯುವತಿ ಅಪಾರ್ಟ್ಮೆಂಟ್ಗೆ ಬರುವ ಸಂದರ್ಭದಲ್ಲಿ ಹಿಂದಿಯಲ್ಲಿ (Hindi) ಮಾತನಾಡುತ್ತಿದ್ದಳು ಎಂದು ತಿಳಿಸಿದೆ. ಮೃತ ಯುವತಿಯ ಸಂಜಯನಗರ (Sanjaynagara) ನಿವಾಸಿಯಾಗಿ ಪ್ರಕೃತಿ ಎಂದು ತಿಳಿದು ಬಂದಿದ್ದು, ಯುವತಿಯ ತಾಯಿ (Mother) ತೇಜು ಎಂಬವರು ಮೃತದೇಹವನ್ನು ನೋಡಿ ಗುರುತು ಖಚಿತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಸ್ಥಳಕ್ಕೆ ಹೈಗ್ರೌಂಡ್ ಪೊಲೀಸರು (High Ground Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಯುವತಿಯ ದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಮೃತಪಟ್ಟ ಯುವತಿ ಪ್ರಕೃತಿ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ ಪ್ರಕೃತಿ ಅಪಾರ್ಟ್ಮೆಂಟ್ ನಿವಾಸಿ ಅಲ್ಲ ಹೊರಗಡೆಯಿಂದ ಬಂದು ಇಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಯುವತಿ ಸೋಫಿಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ಶ್ರೀನಿವಾಸ ಗೌಡ ಅವರು, ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. 17-20 ವರ್ಷ ವಯಸ್ಸಿನ ಯುವತಿ ಸಾವನ್ನಪ್ಪಿದ್ದಾಳೆ.
ಯುವತಿ ಬಳಿ ಮೊಬೈಲ್ವೊಂದು ಸಿಕ್ಕಿದ್ದು, ಆದರೆ ಅದು ಸಂಪೂರ್ಣ ನಾಶವಾಗಿದೆ. ಸ್ಥಳೀಯರು ಈಕೆ ಅಪಾರ್ಟ್ಮೆಂಟ್ ನಿವಾಸಿ ಅಲ್ಲ ಎಂದು ತಿಳಿಸಿದ್ದಾರೆ. ಅಪಾರ್ಟ್ಮೆಂಟ್ ಬಳಿ ಎರಡು ನಿಮಿಷ ಓಡಾಡುತ್ತಿದ್ದ ಯುವತಿ ಕೆಲ ಸಮಯದ ಬಳಿಕ ನನಗೆ ಗೊತ್ತಿರುವವರು ಅಪಾರ್ಟ್ಮೆಂಟ್ನಲ್ಲಿದ್ದಾರೆ ಅಂತ ಸೆಕ್ಯೂರಿಟಿ ಗಾರ್ಡ್ಗೆ ಹೇಳಿ ಒಳ ಬಂದಿದ್ದಾರೆ. ಆ ಬಳಿಕ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಜ್ವರ ಅಂತ ಆಸ್ಪತ್ರೆ ಸೇರಿದ್ದ 25 ವರ್ಷದ ಯುವಕ ಏಕಾಏಕಿ ಸಾವು; ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ್ನಾ ಅಮಾಯಕ?
ಯುವತಿ ಈ ಅಪಾರ್ಟ್ಮೆಂಟ್ ಆಗಮಿಸುವ ಮುನ್ನ ಬೇರೆ ಒಂದು ಅಪಾರ್ಟ್ಮೆಂಟ್ಗೆ ಎಂಟ್ರಿ ಕೊಡಲು ಪ್ರಯತ್ನಿಸಿದ್ದಳಂತೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಚ್ಪಿ-3 ಅಪಾರ್ಟ್ಮೆಂಟ್ ಬಳಿ ಬಂದಿದ್ದಾಳೆ ಎನ್ನಲಾಗಿದೆ. ಮೃತ ಯುವತಿಯ ಬಳಿ 300 ರೂಪಾಯಿ ಹಣ ಮಾತ್ರ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಶಾಸಕರ ಜೊತೆ ಕಾಣಿಸಿಕೊಂಡ ರೌಡಿಗಳು!
ಬಿಜೆಪಿ ಶಾಸಕ SR ವಿಶ್ವನಾಥ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೌಡಿಗಳು ಭಾಗಿಯಾಗಿದ್ದರು. ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬೆತ್ತನಗೆರೆ ಮಂಜ ಹಾಗೂ ಹುಸ್ಕೂರು ಶಿವ ವಿಶ್ವನಾಥ್ ಬೆನ್ನಿಗೆ ನಿಂತಿದ್ದರು.
ಬೆಮೆಲ್ ಕೃಷ್ಣಪ್ಪ ಕೊಲೆ ಪ್ರಕರಣದಲ್ಲಿ ಬೆತ್ತನಗೆರೆ ಮಂಜ ಆರೋಪಿಯಾಗಿದ್ದಾನೆ. ಹುಸ್ಕೂರ್ ಶಿವ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದಾನೆ. ಇನ್ನೂ ರೌಡಿಗಳೊಂದಿಗೆ ಗುರುತಿಸಿಕೊಂಡಿದ್ದಷ್ಟೇ ಅಲ್ಲ, ಪ್ರಚೋದನಾಕಾರಿ ಭಾಷಣವೂ ಮಾಡಿದ್ದರು. ‘ನನ್ನ ಬಳಿ ಪಿಟ್ಬುಲ್ ನಾಯಿಗಳಿವೆ, ಬಿಟ್ಟರೆ ಸೀಳಿ ಹಾಕ್ತಾವೆ’ ಅಂತಾ ಬಿಜೆಪಿ ಶಾಸಕ ಗುಟುರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ