ಆನೇಕಲ್: ಯುವಕನೋರ್ವ (Youth) ವಿಷ ಸೇವಿಸಿ, ಬಳಿಕ ಬಿಯರ್ ಬಾಟಲಿಯಿಂದ (Bottle) ಚಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸರ್ಜಾಪುರ ಪೊಲೀಸ್ ಠಾಣಾ (Sarjapur Police Station) ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ಸದ್ಯ ಯುವಕನನ್ನು ಸರ್ಜಾಪುರದ ಬಾಲಾಜಿ ಆಸ್ಪತ್ರೆಗೆ (Balaji Hospital) ಸೇರ್ಪಡೆ ಮಾಡಲಾಗಿದೆ. ಆತನ ಆರೋಗ್ಯ (Health) ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?
ಆತ್ಮಹತ್ಯೆಗೆ ಶರಣಾಗಿರುವ ಯುವಕ ಸುರೇಶ್, ಸರ್ಜಾಪುರ ಸಮೀಪದ ಮುಗಳೂರಿನ ಭೋವಿಪಾಳ್ಯ ನಿವಾಸಿಯಾಗಿದ್ದು, ಡ್ರೈವರ್ ಆಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆತನ ಕುಟುಂಬ ಸರ್ಜಾಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಈ ನಡುವೆ ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಜೋಗಿ ಕಾಲೋನಿಯ ಯುವತಿಯನ್ನು ಪ್ರೀತಿ ಮಾಡುತ್ತಿದ್ದನಂತೆ.
ಇದನ್ನೂ ಓದಿ: Crime News: ಕೊಟ್ಟ ಹಣ ವಾಪಸ್ ಕೇಳಿದ್ದೆ ತಪ್ಪಾಯ್ತು; ಸಿಲಿಕಾನ್ ಸಿಟಿಯಲ್ಲಿ ಆಟೋ ಚಾಲಕನ ಬರ್ಬರ ಕೊಲೆ
ಪೊಲೀಸರ ಕಿರುಕುಳ ಆರೋಪ!
ಸದ್ಯ ಆತ್ಮಹತ್ಯೆ ಯತ್ನಿಸಿರುವ ಬಗ್ಗೆ ಸುರೇಶ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಶೇರ್ ಮಾಡಿದ್ದಾನೆ. ವಿಡಿಯೋದಲ್ಲಿ ಪೊಲೀಸರ ಕಿರುಕುಳ ಹಾಗೂ ಯುವತಿಯ ಸಹೋದರಿ ಕೂಡ ತನ್ನ ಸಾವಿಗೆ ಕಾರಣ ಎಂದು ಸುರೇಶ್ ಆರೋಪ ಮಾಡಿದ್ದಾನೆ.
ಅಲ್ಲದೆ, ವಿಡಿಯೋದಲ್ಲಿ ಇಲಿ ಪಾಷಾಣ ಸೇವಿಸುವುದು ಹಾಗೂ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದುಕೊಂಡು ಚಚ್ಚಿಕೊಳ್ಳುವುದು ಕಾಣಬಹುದಾಗಿದೆ. ಅಲ್ಲದೆ ರಕ್ತ ಸೋರುತ್ತಿದ್ದರು ಯುವಕ ವಿಡಿಯೋ ಮಾಡುತ್ತಾ ಮಾತನಾಡಿದ್ದು, ತನಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾನೆ.
ಯುವಕನಿಗೆ ನಿರಂತರ ಫೋನ್ ಮಾಡಿ ರೇಪ್ ಕೇಸ್ ಮಾಡೋದಾಗಿ ಬೆದರಿಕೆ
ಇನ್ನು, ಸುರೇಶ್ ಪ್ರೀತಿ ಮಾಡುತ್ತಿದ್ದ ಸಂಗತಿ ಯುವತಿಯ ಕುಟುಂಬಸ್ಥರಿಗೆ ತಿಳಿದ್ದಿತ್ತು. ಅವರು ಯುವಕನಿಗೆ ಈ ರೀತಿ ಎಲ್ಲಾ ಮಾಡಬೇಡ ಎಂದು ತಿಳಿಸಲು ಕಾಡುಗೋಡಿ ಪೊಲೀಸರ ಮೂಲಕ ಸುರೇಶ್ಗೆ ಕರೆ ಮಾಡಿಸಿದ್ದರಂತೆ. ಕಳೆದ ಒಂದು ವಾರದಿಂದ ಪೊಲೀಸರ ಹೆಸರಿನಲ್ಲಿ ನಿರಂತರವಾಗಿ ಯುವಕನಿಗೆ ಫೋನ್ ಮಾಡಿದ್ದು, ನಿನ್ನ ಮೇಲೆ ರೇಪ್ ಕೇಸ್ ಸೇರಿದಂತೆ ಇನ್ನಿತರ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದರಂತೆ.
ಅಲ್ಲದೆ ಠಾಣೆಗೆ ಬರುವಂತೆ ನಿರಂತರವಾಗಿ ಕಿರಕುಳ ನೀಡುತ್ತಿದ್ದರಂತೆ. ಇದರಿಂದ ಗಾಬರಿಗೊಂಡ ಸುರೇಶ್, ಸರ್ಜಾಪುರದ ಮನೆಯ ಸಮೀಪದಲ್ಲಿ ವಿಷ ಸೇವನೆ ಮಾಡಿದ್ದಾನೆ, ಬಳಿಕ ವಿಡಿಯೋ ಮಾಡಿಕೊಂಡು ಶೇರ್ ಮಾಡಿದ್ದಾನೆ ಎನ್ನಲಾಗಿದೆ.
ಸಾವಿಗೆ ಇವರೇ ಕಾರಣ ಅಂತ ಆರೋಪ
ಈ ವೇಳೆ ಕಾಡುಗೋಡಿ ಪೊಲೀಸರು, ನಾನು ಪ್ರೀತಿ ಮಾಡುತ್ತಿದ್ದ ಯುವತಿ ತಂದೆ-ತಾಯಿ ಹಾಗೂ ಪ್ರೀತಿ ಮಾಡುತ್ತಿದ್ದ ಯುವತಿಯ ಅಕ್ಕನ ಮಕ್ಕಳು ಕಾರಣ ಎಂದು ಸುರೇಶ್ ಉಲ್ಲೇಖ ಮಾಡಿದ್ದಾನೆ. ನಾನು ಪ್ರೀತಿ ಮಾಡಿದ ಯುವತಿ ಫೋಟೋವನ್ನು ಆ ಹುಡುಗಿ ಕೇಳಿದ್ದಳು, ಅದಕ್ಕೆ ಕಳುಹಿಸಿದ್ದೆ. ಫೋಟೋ ಕಳುಹಿಸಿದ್ದು ತಪ್ಪಾಯಿತಂತೆ. ಅದಕ್ಕೆ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಸುರೇಶ್ ವಿಡಿಯೋದಲ್ಲಿ ಹೇಳಿದ್ದಾನೆ.
ಅಲ್ಲದೆ ವಿಡಿಯೋಗೆ ಮಿಸ್ ಯು ಸೋಮಚ್ ಬಂಗಾರಿ ಎಂದು ಹಣೆಬರಹ ನೀಡಿ ಪೋಸ್ಟ್ ಮಾಡಿದ್ದಾನೆ. ನನ್ನ ಸಾವಿಗೆ ಇವರೇ ಕಾರಣ ಎಂದು ವಿಡಿಯೋ ಮಾಡಿದ್ದಾನೆ. ಇನ್ನು ವಿಡಿಯೋ ನೋಡಿದ ಆಪ್ತರು ಸ್ಥಳವೊಂದರಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಸುರೇಶ್ ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ