ಹೈದರಾಬಾದ್: ಯುವತಿ-ಯುವಕನ ನಡುವೆ ಏರ್ಪಟ್ಟ ಪರಿಚಯ ಕೆಲ ಸಮಯದ ಸ್ನೇಹವಾಗಿ (Friendship) ಬದಲಾಗಿತ್ತು, ಸ್ನೇಹ ಪ್ರೀತಿಯಾಗಿ (Love) ಬದಲಾಗಲು ಹೆಚ್ಚು ಸಮಯ ತೆಗೆದುಕೊಂಡಿಲ್ಲ. ಆದರೆ ಪ್ರೀತಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಈಗಿನ ಯುವ ಸಮುದಾಯ ತೀವ್ರ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಇಂತದ್ದೆ ಘಟನೆಯೊಂದು ರಾಜನ್ನ ಸಿರಿಸಿಲ್ಲ ಜಿಲ್ಲೆಯ (Rajanna Sircilla District) ಬೋಯಿನಪಲ್ಲಿ ಮಂಡಲದ ಸ್ತಂಭಪಲ್ಲಿಯಲ್ಲಿ ಘಟನೆ ನಡೆದಿದೆ. 26 ವರ್ಷದ ರವಿತೇಜ (Raviteja) ಎಂಬ ಯುವಕ ತನ್ನ ಪ್ರೀತಿ ವಿಫಲವಾಯ್ತು ಅಂತ ಯುವತಿಯ ಮನೆಯ ಎದುರೇ ಪೆಟ್ರೋಲ್ (Petrol) ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಯುವಕ ರವಿತೇಜ ಗೂಡ್ಸ್ ವಾಹನದಲ್ಲಿ (Goods Vehicle) ಯುವತಿಯ ಮನೆಗೆ ಬಳಿ ರಾತ್ರಿ ವೇಳೆ ಬಂದಿದ್ದು, ಆ ಬಳಿಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಪೊಲೀಸರಿಗೆ ಮಾಹಿತಿ ನೀಡಿದ್ದ ಯುವತಿ ಕುಟುಂಬಸ್ಥರು
ಮೃತ ಯುವಕ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬ್ರಾಹ್ಮಣಪಲ್ಲಿ ಮಂಡಲದ ಜಕ್ರನ್ಪಲ್ಲಿಯ ಗಾಂಧಿ ನಗರ್ ನಿವಾಸಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಿಂದ ಆತಂಕಗೊಂಡ ಯುವತಿಯ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು. ಆದರೆ ಆ ವೇಳೆಗೆ ರವಿತೇಜ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದರಂತೆ.
ಇದನ್ನೂ ಓದಿ: Unique Marriage: ಒಬ್ಬಳೇ ಮಗಳ ಮದ್ವೆಯಲ್ಲಿ 10 ಸಾವಿರ ಜನರಷ್ಟೇ ಅಲ್ಲ, 5 ಹಳ್ಳಿಗಳ ಜಾನುವಾರಗಳಿಗೂ ಊಟ ಹಾಕಿಸಿದ ರೈತ!
ಪ್ರೀತಿಯನ್ನು ನಿರಾಕರಿಸಿದ್ದ ಯುವತಿ
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಂದಹಾಗೇ, ಮೃತ ರವಿತೇಜ ಹಾಗೂ ಯುವತಿ ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಂತೆ. ಆದರೆ ಕೆಲ ದಿನಗಳಿಂದ ಆಕೆ, ಆತನಿಂದ ದೂರವಾಗಲು ಮುಂದಾಗಿದ್ದಳು ಎನ್ನಲಾಗಿದೆ.
ಯುವತಿ, ರವಿತೇಜಗೆ ಅತ್ತೆಯ ಮಗಳಾಗಿದ್ದ ಕಾರಣ ಮನೆ ಬಳಿ ಬಂದಿದ್ದ ಆತ, ತನ್ನ ಪ್ರೀತಿಯ ವಿಚಾರವನ್ನು ತಿಳಿಸಿದ್ದನಂತೆ. ಆದರೆ ಇದಕ್ಕೆ ಯುವತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಸೋಮವಾರ ಬೆಳಗ್ಗೆ 4 ಗಂಟೆ ಸಮಯದಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರೀತಿಯಲ್ಲಿ ವಿಫಲ ಆಗಿದ್ದಕ್ಕೆ ಯುವಕ, ಯುವತಿಯ ಮನೆಯ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ ಆತ್ಮಹತ್ಯೆ ಒಂದೇ ಸಮಸ್ಯೆಗೆ ಪರಿಹಾರ ಅಲ್ಲ ಎಂದು ಸಾಮಾಜಿಕ ಕಾರ್ಯಕರ್ತರು, ಪೊಲೀಸರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ತನ್ನ ಚಿತೆ ತಾನೇ ತಯಾರಿಸಿ, ಆತ್ಮಹತ್ಯೆ ಮಾಡಿಕೊಂಡ ವೃದ್ಧ!
ತೆಲಂಗಾಣದ (Telangana) ಸಿದ್ದಿಪೇಟ್ ಜಿಲ್ಲೆಯ (Siddipet District ) ಹುಸ್ನಾಬಾದ್ನ ಪೊಟ್ಲಪಲ್ಲಿ ಎಂಬಲ್ಲಿ ನಾಲ್ಕು ಮಕ್ಕಳ (Children) ವರ್ತನೆಯಿಂದ ಬೇಸತ್ತು ವೆಂಕಟಯ್ಯ ಎಂಬಾತ ಜೀವವನ್ನೆ ಬಿಟ್ಟಿದ್ದಾರೆ. ಮೇದಬೋಯಿನ ವೆಂಕಟಯ್ಯನಿಗೆ ಕನಕಯ್ಯ, ವುಮ್ಮಯ್ಯ, ಪೋಚಯ್ಯ, ಅರಯ್ಯ ಎಂಬ ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದರೆಂದು ತಿಳಿದುಬಂದಿದೆ.
ವೆಂಕಟಯ್ಯನಿಗೆ 90 ವರ್ಷ ವಯಸ್ಸು, ಆತನ ಪತ್ನಿ ಈಗಾಗಲೇ ಮೃತಪಟ್ಟಿದ್ದಾರೆ. ತಂದೆಯನ್ನು ನೋಡಿಕೊಳ್ಳುವುದಕ್ಕೆ ಯಾವೊಬ್ಬ ಮಗನೂ ಮುಂದೆ ಬಂದಿಲ್ಲ. ಬದಲಾಗಿ ನಾಲ್ಕು ಮಕ್ಕಳು ತಮ್ಮ ತಂದೆಯ ಆರೈಕೆಗಾಗಿ ಸರದಿ ತೆಗೆದುಕೊಂಡಿದ್ದಾರೆ. ಇದರಿಂದ ಬೇಸತ್ತ ವೃದ್ಧ ತಂದೆ ತನ್ನ ಚಿತೆಯನ್ನು ತಾನೇ ತಯಾರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ