ಯಾದಗಿರಿ: ಆತ ಜೈಲಿನಲ್ಲಿದ್ದರೆ (Jail) ಬದುಕಿ ಇರುತ್ತಿದ್ದ. ಜೈಲಿನಿಂದ ಹೊರ ಬಂದು ತಾನಾಯಿತು ತನ್ನ ಪಾಡಾಯಿತು ಎಂದು ಇದಿದ್ದರೆ ಇಂದು ಬದುಕುಳಿಯುತ್ತಿದ್ದ. ಆದರೆ ಬರ್ಬರವಾಗಿ ಕೊಲೆಯಾಗಿದ್ದಾನೆ. ದೇವಸ್ಥಾನ (Temple) ಸೇರಿದಂತೆ ಹಲವು ಕಳ್ಳತನ (Theft) ಪ್ರಕರಣದಲ್ಲಿ ಪೊಲೀಸರಿಗೆ (Police) ಬೇಕಾದ ಖದೀಮ, ತನ್ನ ಪ್ರಾಣ ಸ್ನೇಹಿತನಿಂದಲೇ (Close Friend ) ಪ್ರಾಣ ಬಿಟ್ಟಿದ್ದಾನೆ. ತನ್ನ ಪ್ರಾಣ ಸ್ನೇಹಿತನಿಂದಲೇ ಪ್ರಾಣ ಕಳೆದುಕೊಂಡಿದ್ದಾನೆ. ಯಾದಗಿರಿ ಜಿಲ್ಲೆಯ (Yadagiri) ಹುಣಸಗಿ (Hunasagi) ತಾಲೂಕು ಬಲಶೇಟ್ಟಿಹಾಳ ಗ್ರಾಮದಲ್ಲಿ (Village) ಬರ್ಬರ ಕೊಲೆ ಘಟನೆ ಜರುಗಿದೆ.
ರಾಜ್ಯದೆಲ್ಲೆಡೆ ಶಿವನ ಸಂಭ್ರಮ ಮನೆ ಮಾಡಿತ್ತು. ಆದರೆ, ಶಿವರಾತ್ರಿ ಹಬ್ಬದ ದಿನವೇ ರಾಜೇಸಾಬ್ ಗೆಳೆಯನಿಂದಲೇ ಕೊಲೆಯಾಗಿದ್ದಾನೆ. ರಾಜೇಸಾಬ್ ಹಾಗೂ ವೀರೇಶ ಇಬ್ಬರು ಸ್ನೇಹಿತರು ಬಲಶೇಟ್ಟಿಹಾಳ ಗ್ರಾಮದವರಾಗಿದ್ದಾರೆ. ಕುಚುಕು ಗೆಳೆಯರಾಗಿದ್ದರು. ರಾಜೇಸಾಬ್ ಕೆಲಸ ಮಾಡದೆ ಕಳ್ಳತನ ಕೆಲಸಕ್ಕೆ ಕೈ ಹಾಕಿದ್ದ. ಯಾವಾಗ ಕಳ್ಳತನ ಮಾಡುವ ವೃತ್ತಿ ಕೈ ಹಾಕಿದ್ನೋ, ದುಡಿಯದೇ ಕಳ್ಳತನ ಮಾಡಿ ಹಣ ಸಂಪಾದಿಸುವುದು ಆತನಿಗೆ ಸಾಮಾನ್ಯವಾಗಿತ್ತು.
ಜೈಲಿನಲ್ಲಿದ್ದ ಜಾಮೀನಿನ ಮೇಲೆ ಬಂದಿದ್ದ
ರಾಜೇಸಾಬ್ ಜೇಬಲ್ಲಿ ಹಣ ಇಲ್ಲದಾಗ ಸ್ನೇಹಿತರಿಗೆ ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ಅಲ್ಲದೆ ಇದೇ ಹಣದಿಂದ ರಾಜೇಸಾಬ್ ಸಖತ್ ಆಗಿ ಡ್ರಿಂಗ್ಸ್ ಮಾಡುತ್ತಿದ್ದನಂತೆ. ತನ್ನ ಊರು ಬಿಟ್ಟು ರಾಜೇಸಾಬ್ ಪಕ್ಕದ ಊರಾದ ರಾಜನ ಕೊಳ್ಳುರು ಗ್ರಾಮದ ಯುಕೆಪಿ ಕ್ಯಾಂಪ್ ನಲ್ಲಿ ಹೆಂಡತಿ, ಇಬ್ಬರ ಮಕ್ಕಳ ಜೊತೆ ವಾಸವಾಗಿದ್ದ.
ಸುಮಾರು ವರ್ಷಗಳಿಂದ ದೇವಸ್ಥಾನ ಮೂರ್ತಿ ಕಳ್ಳತನ ಸೇರಿದಂತೆ 12 ವಿವಿಧ ಕೇಸ್ ಗಳಲ್ಲಿ ರಾಜೇಸಾಬ್ ಭಾಗಿಯಾಗಿದ್ದ. ಕೇಸ್ ಒಂದರಲ್ಲಿ ರಾಜೇಸಾಬ್ ಜೈಲು ಕೂಡ ಸೇರಿದ್ದ. ಆದರೆ ಕಳೆದ ಮೂರು ದಿನಗಳ ಹಿಂದೆ ಜೈಲು ವಾಸದಿಂದ ಬೇಲ್ ಮೇಲೆ ರಾಜನಕೊಳ್ಳುರು ಗ್ರಾಮಕ್ಕೆ ಬಂದಿದ್ದ. ಆದರೆ ಶಿವರಾತ್ರಿ ದಿನವೇ ಸ್ನೇಹಿತನಿಂದ ಕೊಲೆಯಾಗಿದ್ದಾನೆ.
ಹಣಕ್ಕಾಗಿ ಪೀಡಿಸುತ್ತಿದ್ದ ಸ್ನೇಹಿತನ ಕೊಲೆ
ಜೈಲಿನಿಂದ ಬಂದ ಮೇಲೆ ಕೂಲಿ ಕೆಲಸ ಮಾಡಿ ಜೀವನ ನಡೆಸಬೇಕಾದ ರಾಜೇಸಾಬ್, ಕೈಯಲ್ಲಿ ಹಣ ಇಲ್ಲದಕ್ಕೆ ಸ್ನೇಹಿತ ವೀರೇಶನನ್ನು 15 ಸಾವಿರ ರೂಪಾಯಿ ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ವೀರೇಶ ಸ್ನೇಹಿತನಿಗೆ ಸಾಕಷ್ಟು ಬಾರಿ ಹಣ ನೀಡಿ ಸಹಾಯ ಮಾಡಿದನಂತೆ. ಆದರೂ ಮತ್ತೆ ಮತ್ತೆ ಹಣ ಕೊಡಲು ಪೀಡಿಸುತ್ತಿದ್ದನಂತೆ.
ಇದೇ ವೇಳೆ ನಿನ್ನೆ ಬಲಶೇಟ್ಟಿಹಾಳ ಗ್ರಾಮದ ಹೊರಭಾಗದ ಜಮೀನಿಗೆ ನಿನ್ನೆ ಸ್ನೇಹಿತರಿಬ್ಬರು ತೆರಳಿದರು. ರಾಜೇಸಾಬ್ ಮದ್ಯಪಾನ ಮಾಡಿದ್ದ ಕಾರಣ ಅಲ್ಲಿ ಇಬ್ಬರ ನಡುವೆ ಹಣದ ವಿಚಾರವಾಗಿ ಜಗಳ ಆರಂಭವಾಗಿದೆ. ಕೋಪದಲ್ಲಿ ವೀರೇಶ ಕೊಡಲಿಯಿಂದ ಕೊಚ್ಚಿ ಗೆಳೆಯನ ಜೀವ ತೆಗೆದಿದ್ದಾನೆ.
ಇದನ್ನೂ ಓದಿ: Rohini Sindhuri: 'ಸಿಂಧೂರಿ ಫೋಟೋ ಫೇಕ್ ಅಲ್ಲ, ಇದು ಜಸ್ಟ್ ಸ್ಯಾಂಪಲ್ ಅಷ್ಟೇ'! ರೋಹಿಣಿ ವಿರುದ್ಧ ಡಿ ರೂಪಾ ಮತ್ತಷ್ಟು ಆರೋಪ
ಕೊಲೆ ಮಾಡಿದ ಆರೋಪಿ ವೀರೇಶನನ್ನು ಹುಣಸಗಿ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಹುಣಸಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಹಣದ ವಾಮೋಹಕ್ಕೆ ಸ್ನೇಹಿತನನ್ನು ಕೊಲೆ ಮಾಡಿ ಕುಚುಕು ಗೆಳೆಯ ಕೂಡ ಈಗ ಜೈಲು ಸೇರಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ