ಗುಜರಾತ್/ಗಾಂಧೀನಗರ: ಮಹಿಳೆಯೊಬ್ಬರ (Women) ಆತ್ಮಹತ್ಯೆ ಪ್ರಕರಣವೊಂದು ಗುಜರಾತ್ನಲ್ಲಿ (Gujarat) ಭಾರೀ ಸಂಚಲನ ಮೂಡಿಸುತ್ತಿದೆ. ಗುಜರಾತ್ನ ಸೂರತ್ (Surat)ನಲ್ಲಿ ವಾಸಿಸುತ್ತಿದ್ದ ಮಹಿಳೆ ಆತ್ಮಹತ್ಯೆಗೂ ಮುನ್ನ ನನಗೆ ಬದುಕಬೇಕೆಂಬ ಆಸೆ ಇದೆ. ಆದರೂ ಆತ್ಮಹತ್ಯೆ (Death Note) ಮಾಡಿಕೊಳ್ಳುತ್ತಿದ್ದೇನೆ ಎಂಬ ಆಘಾತಕಾರಿ ಸತ್ಯವನ್ನು ಹೊರಹಾಕಿದ್ದಾರೆ. ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ತಮ್ಮ ಸಾವಿಗೆ ಕಾರಣವೇನು ಎಂಬುವುದನ್ನು ಪತ್ರದಲ್ಲಿ ಬರೆಯುವುದನ್ನು ನೋಡಿರುತ್ತೇವೆ. ಆದರೆ ಈ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬ ವಿಚಾರವನ್ನು ವಿಭಿನ್ನವಾಗಿ ತಿಳಿಸಿದ್ದಾರೆ.
ಕೈ ಮೇಲೆಯೇ ಡೆತ್ ನೋಟ್ ಬರೆದುಕೊಂಡು ಗೃಹಿಣಿ ಆತ್ಮಹತ್ಯೆ
ಹೌದು, ಆತ್ಮಹತ್ಯೆಗೂ ಮುನ್ನ ಮಹಿಳೆ ತನ್ನ ಕೈಯಲ್ಲಿ ಸೂಸೈಡ್ ನೋಟ್ ಬರೆದಿಟ್ಟುಕೊಂಡಿದ್ದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ. ಜೊತೆಗೆ ಆತ್ಮಹತ್ಯೆಗೆ ಕಾರಣ ಏನು ಎಂಬುವುದನ್ನು ಕೇಳಿ ಎಲ್ಲರಿಗೂ ಆಘಾತವಾಗಿದೆ. ಈ ಮಹಿಳೆ ತಾನು ಇನ್ನೂ ಬದುಕಲು ಇಚ್ಛಿಸುತ್ತೇನೆ. ಆದರೆ ತನ್ನ ಜೀವನವನ್ನು ಅಂತ್ಯಗೊಳಿಸಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಗಂಡನ ವಿರುದ್ಧ ಮಹಿಳೆ ಆಕ್ರೋಶ
ಸೂರತ್‌ನ ತನ್ನ ನಿವಾಸದಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ತನ್ನ ಗಂಡನ ವಿರುದ್ಧ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ. ಸಾಯುವ ಮುನ್ನ ಮಹಿಳೆ ತನ್ನ ತೋಳಿನ ಮೇಲೆ ಹಿಂದಿಯಲ್ಲಿ 'ನಾನು ಬದುಕಬೇಕು, ಆದರೆ ನನ್ನ ಪತಿ ನನಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ' ಎಂದು ಬರೆದುಕೊಂಡು ಕೋಣೆಯ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
8 ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆ
ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು, 8 ವರ್ಷಗಳ ಹಿಂದೆ ಪ್ರವೀಣ್ ಗೋಸ್ವಾಮಿ ಅವರನ್ನು ವಿವಾಹವಾಗಿದ್ದರು. ರಿಕ್ಷಾ ಚಾಲಕನಾಗಿರುವ ಪ್ರವೀಣ್ ಗೋಸ್ವಾಮಿ ಮತ್ತು ಮಹಿಳೆ ಸೂರತ್‌ನ ಲಿಂಬಯತ್ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಮೃತ ಮಹಿಳೆಯ ಪತಿ ಪೊಲೀಸರ ವಶಕ್ಕೆ
ಮಹಿಳೆ ನೇಣು ಬಿಗಿದುಕೊಂಡಿರುವುದನ್ನು ನೋಡಿದ ನೆರೆಹೊರೆಯವರು ಕೂಡಲೇ 108ಕ್ಕೆ ಕರೆ ಮಾಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಗಂಡನ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ ಹೆಂಡ್ತಿ
ಈ ನಡುವೆ ಪತ್ನಿಯೇ ತನ್ನ ಪತಿಯ ನಾಲಗೆಯನ್ನು ಕಚ್ಚಿ ತುಂಡರಿಸಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಕ್ನೋದ ಠಾಕುರ್ಗಂಜ್ ಎಂಬಲ್ಲಿ ಶುಕ್ರವಾರ ಈ ಘಟನೆ ವರದಿಯಾಗಿದೆ. ಪತಿಯ ನಾಲಗೆ ಕತ್ತರಿಸಿದ್ದಕ್ಕೆ ಪತ್ನಿ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ
ಪೊಲೀಸರ ಪ್ರಕಾರ ಈ ದಂಪತಿ ಮೂರು ವರ್ಷಗಳ ಹಿಂದೆ ಮುನ್ನಾ ಮತ್ತು ಸಲ್ಮಾ ಎಂಬುವವರು ವಿವಾಹವಾಗಿದ್ದರು. ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಕಳೆದ ಒಂದು ವರ್ಷದಿಂದ ಇಬ್ಬರು ಬೇರೆ ಬೇರೆ ವಾಸಿಸುತ್ತಿದ್ದರು. ಮಕ್ಕಳು ಪತ್ನಿಯ ಜೊತೆಯಲ್ಲಿ ಅವರ ತವರಿನಲ್ಲಿದ್ದ ಮನೆಯಲ್ಲಿದ್ದರು. ಈ ವೇಳೆ ಆಟೋ ಚಾಲಕನಾಗಿರುವ ಮುನ್ನಾ ತನ್ನ ಮಕ್ಕಳನ್ನು ನೋಡಲು ಹೋದಾಗ ಗಂಡ ಹೆಂಡತಿಯ ಮಧ್ಯೆ ಜಗಳ ನಡೆದು, ಅಂತಿಮವಾಗಿ ಹೆಂಡತಿ ಗಂಡನ ನಾಲಗೆಯನ್ನೇ ಕಚ್ಚಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ